ಎನ್.ಪಂಕಜಾ
From Wikipedia
ಎನ್.ಪಂಕಜಾ ಇವರು ೧೯೨೯ ಜೂನ್ ೨ರಂದು ಬೆಂಗಳೂರಿನಲ್ಲಿ ಜನಿಸಿದರು. ಇವರ ತಾಯಿ ಶಾಂತಮ್ಮ ; ತಂದೆ ಎಸ್.ಪಿ.ರಾಘವಾಚಾರ್ ; ಪತಿ ಎನ್.ತಿರುಮಲೆ.
ಪರಿವಿಡಿ |
[ಬದಲಾಯಿಸಿ] ಕೃತಿಗಳು
[ಬದಲಾಯಿಸಿ] ಕಾದಂಬರಿ
- ಬರಲೆ ಇನ್ನು ಯಮುನೆ
- ಬಳ್ಳಿ ಮೊಗ್ಗು
- ಉಷಾನಿಷೆ
- ಮಲಯ ಮಾರುತ
- ಗೂಡು ಬಿಟ್ಟ ಹಕ್ಕಿ
- ತೆರೆ ಸರಿಯಿತು
- ಅಲೆಗೆ ಸಿಕ್ಕ ಎಲೆ
- ಪ್ರತೀಕಾರದ ಸುಳಿಯಲ್ಲಿ
- ವೀಣಾ ಓ ವೀಣಾ
- ಗಗನ
- ಕಾವೇರಿಯ ಆರ್ತರವ
- ದೀಪ
- ತೇಲಿ ಬಂದ ಬಂಧನ
- ಮುಗಿಲ ಮಿಂಚು
[ಬದಲಾಯಿಸಿ] ಹಾಸ್ಯ ಲೇಖನ
- ನಮಸ್ಕಾರ ಗರುಡಮ್ಮನವರೆ, ಏನ್ಸಮಾಚಾರ?
- ತರಂಗ ರಂಗ
- ಕಾವೇರಮ್ಮ ಅಮೇರಿಕಾದಲ್ಲಿ
[ಬದಲಾಯಿಸಿ] ಮಕ್ಕಳ ಸಾಹಿತ್ಯ
- ಪಾದ್ರಿಯ ಕುದುರೆ
- ಬಿ.ವೆಂಕಟಾಚಾರ್ಯ
- ಕಮಲಾ ನೆಹರು
ಎನ್.ಪಂಕಜಾರವರು ಹಲವು ಕಥೆಗಳನ್ನು ಇಂಗ್ಲಿಷ್‍ನಲ್ಲೂ ಸಹ ಬರೆದಿದ್ದಾರೆ. ಇಂಗ್ಲಿಷ್‍ನಿಂದ ಹಲವು ಕಥೆ, ನಾಟಕಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ.
[ಬದಲಾಯಿಸಿ] ಪುರಸ್ಕಾರ
“ಬಳ್ಳಿ ಮೊಗ್ಗು” ಕೃತಿಗೆ ೧೯೭೮ರಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಏರ್ಪಡಿಸಿದ್ದ ಸ್ಪರ್ಧೆಯಲ್ಲಿ ಉತ್ತಮ ಮಹಿಳಾ ಪುಸ್ತಕ ಬಹುಮಾನ ದೊರೆತಿದೆ.
[ಬದಲಾಯಿಸಿ] ಚಲನಚಿತ್ರೀಕರಣ
ಇವರ “ಬರಲೆ ಇನ್ನು ಯಮುನೆ” ಕಾದಂಬರಿಯು ಸಿಪಾಯಿ ರಾಮು ಹೆಸರಿನಲ್ಲಿ ಚಲನಚಿತ್ರವಾಗಿ ಜನಪ್ರಿಯವಾಯಿತು. ಈ ಚಿತ್ರದಲ್ಲಿ ಆರತಿ ನಾಯಕಿಯಾಗಿ ಹಾಗು ರಾಜಕುಮಾರ ನಾಯಕರಾಗಿ ಅಭಿನಯಿಸಿದ್ದರು.
ವರ್ಗಗಳು: ಚುಟುಕು | ಕನ್ನಡ ಸಾಹಿತ್ಯ | ಹಾಸ್ಯಸಾಹಿತ್ಯ | ಸಾಹಿತಿಗಳು | ಲೇಖಕಿಯರು