ಕೆನರಾ ಬ್ಯಾಂಕ್
From Wikipedia
ಕೆನರಾ ಬ್ಯಾಂಕ್ ೧೯೦೬ರಲ್ಲಿ ಕೆನರಾ ಬ್ಯಾಂಕ್ ಹಿಂದೂ ಶಾಶ್ವತ ನಿಧಿ ಹೆಸರಿನಿಂದ ಮಂಗಳೂರಿನಲ್ಲಿ ಸ್ಥಾಪಿತವಾಯಿತು. ಅಮ್ಮೆಂಬಾಳ್ ಸುಬ್ಬರಾವ್ ಪೈ ಇದರ ಸ್ಥಾಪಕರು. ಭಾರತದ ಪ್ರಮುಖ ವಾಣಿಜ್ಯ ಬ್ಯಾಂಕ್‌ಗಳಲ್ಲಿ ಕೆನರಾ ಬ್ಯಾಂಕ್ ಸಹ ಒಂದು. ಸಂಸ್ಥೆಯ ಹೆಸರನ್ನು ಕೆನರಾ ಬ್ಯಾಂಕ್ ಎಂದು ೧೯೧೦ರಲ್ಲಿ ಬದಲಾಯಿಸಲಾಯಿತು. ಇದನ್ನು ೧೯ ಜುಲೈ, ೧೯೬೯ರಲ್ಲಿ ರಾಷ್ಟ್ರೀಕರಿಸಲಾಯಿತು.೨೦೦೫ರ ಇಸವಿಯಂತೆ,ಬ್ಯಾಂಕ್ ೨೫೦೮ ಶಾಖೆಗಳನ್ನು ಹೊಂದಿದೆ. ಭಾರತವಲ್ಲದೇ ಲಂಡನ್,ಮಾಸ್ಕೋ,ಹಾಂಗ್‌ಕಾಂಗ್,ದೋಹಾ,ದುಬೈ ಮುಂತಾದ ಸ್ಥಳಗಳಲ್ಲಿಯು ಬ್ಯಾಂಕ್ ತನ್ನ ಶಾಖೆಗಳನ್ನು ಹೊಂದಿದೆ.