ಜಯತೀರ್ಥ ಮೇವುಂಡಿ
From Wikipedia
ಜಯತೀರ್ಥ ಮೇವುಂಡಿಯವರು ಹಿಂದುಸ್ತಾನಿ ಸಂಗೀತದ ಖ್ಯಾತ ಗಾಯಕರು. ಇವರು ೧೯೭೨ರಲ್ಲಿ ಜನಿಸಿದರು.
[ಬದಲಾಯಿಸಿ] ಶಿಕ್ಷಣ
ಜಯತೀರ್ಥರ ಮೊದಲಿನ ಹತ್ತು ವರ್ಷಗಳ ಶಿಕ್ಷಣ ಗ್ವಾಲಿಯರ ಘರಾಣಾದ ಸಂಗೀತ ವಿದ್ವಾಂಸರಾದ ಸಂಗೀತರತ್ನ ಪಂಡಿತ ಅರ್ಜುನಸಾ ನಾಕೋಡರಲ್ಲಿ ಆಯಿತು. ೧೯೯೪ರಿಂದ ಭೀಮಸೇನ ಜೋಶಿಯವರ ಶಿಷ್ಯರಾದ ಪಂಡಿತ ಶ್ರೀಪತಿ ಪಾಡೆಗಾರರಲ್ಲಿ ,ಕಿರಾಣಾ ಘರಾಣಾದಲ್ಲಿ ಶಿಕ್ಷಣವಾಯಿತು.
[ಬದಲಾಯಿಸಿ] ಸಾಧನೆ ಹಾಗು ಪುರಸ್ಕಾರ
- ೧೯೮೮-೮೯ರಲ್ಲಿ ಅಹಮದಾಬಾದಿನಲ್ಲಿ ನಡೆದ , ಆಕಾಶವಾಣಿಯ ಹಿಂದುಸ್ತಾನಿ ಶಾಸ್ತ್ರೀಯ ಸಂಗೀತ ಸ್ಪರ್ಧೆಯಲ್ಲಿ ದ್ವಿತೀಯ ಬಹುಮಾನ ಪಡೆದರು.
- ಕರ್ನಾಟಕ ಕಥಕ ಕೇಂದ್ರವು ೧೯೮೦-೯೦ರಲ್ಲಿ ಧಾರವಾಡದಲ್ಲಿ ಏರ್ಪಡಿಸಿದ್ದ ಹಿಂದುಸ್ತಾನಿ ಶಾಸ್ತ್ರೀಯ ಸಂಗೀತ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದರು.
- ಕೋಲಕಾಟಾದ ಸಂಗೀತ ರಿಸರ್ಚ ಅಕಾಡೆಮಿಯವರು ಏರ್ಪಡಿಸಿದ ಹಿಂದುಸ್ತಾನಿ ಶಾಸ್ತ್ರೀಯ ಸಂಗೀತ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದರು.
- ೧೯೯೫ರಲ್ಲಿ ಪಂಡಿತ ಜಸರಾಜ ಗೌರವ ಪುರಸ್ಕಾರ ಪಡೆದರು.
- ೨೦೦೦ದಲ್ಲಿ ಮೇವತಿ ಘರಾಣಾ ಸಂಗೀತ ಗೌರವ ಪುರಸ್ಕಾರ ಪಡೆದರು.
[ಬದಲಾಯಿಸಿ] ವೃತ್ತಿ
ಜಯತೀರ್ಥ ಮೇವುಂಡಿಯವರು ಆಕಾಶವಾಣಿಯ ಪ್ರಥಮ ದರ್ಜೆಯ ಕಲಾವಿದರಾಗಿದ್ದಾರೆ.
ಇವರ ಲಭ್ಯವಿರುವ ವಿಳಾಸ: ಆಕಾಶವಾಣಿ, ಪಣಜಿ, ಗೋವಾ ರಾಜ್ಯ