ಟಿ.ಎಸ್.ವೆಂಕಣ್ಣಯ್ಯ
From Wikipedia
ಟಿ.ಎಸ್.ವೆಂಕಣ್ಣಯ್ಯನವರು ೧೮೮೫ ಅಕ್ಟೋಬರ್ ೧ರಂದು ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆಯ ಬಳಿಯಲ್ಲಿದ್ದ ತಳುಕು ಗ್ರಾಮದಲ್ಲಿ ಜನಿಸಿದರು. ಇವರ ತಂದೆ ಸುಬ್ಬಣ್ಣ. ವೆಂಕಣ್ಣಯ್ಯ ಹತ್ತು ವರ್ಷದವರಿದ್ದಾಗ ತಂದೆ ತೀರಿಕೊಂಡರು. ಇವರು ೧೪ ವರ್ಷದವರಿದ್ದಾಗ ಇವರ ಮದುವೆ ೮ ವರ್ಷದ ಹುಡುಗಿ ಲಕ್ಷ್ಮೀದೇವಮ್ಮನೊಡನೆ ಆಯಿತು.
ಪರಿವಿಡಿ |
[ಬದಲಾಯಿಸಿ] ಶಿಕ್ಷಣ
ಚಿತ್ರದುರ್ಗದಲ್ಲಿ ವಿದ್ಯಾಭ್ಯಾಸ ಮುಗಿಸಿದ ವೆಂಕಣ್ಣಯ್ಯನವರು ಮೈಸೂರಿನಲ್ಲಿ ಓದಿ ಬಿ.ಎ. ಪದವಿ ಸಂಪಾದಿಸಿದರು. ಅನಂತರ ಮುಂಬಯಿಗೆ ತೆರಳಿ ಸ್ವಲ್ಪ ಸಮಯ ಕಾನೂನು ವ್ಯಾಸಂಗ ಮಾಡಿದರು. ಕೆಲಕಾಲ ಉದ್ಯೋಗ ಮಾಡಿದ ಬಳಿಕ ೧೯೧೪ರಲ್ಲಿ ಖಾಸಗಿ ವಿದ್ಯಾರ್ಥಿಯಾಗಿ ಕನ್ನಡದಲ್ಲಿ ಎಂ.ಎ. ಪದವಿ ಪಡೆದರು.
[ಬದಲಾಯಿಸಿ] ಉದ್ಯೋಗ
ವೆಂಕಣ್ಣಯ್ಯನವರು ಕೆಲಕಾಲ ಅಂಚೆ ಕಚೇರಿಯಲ್ಲಿ ಕೆಲಸ ಮಾಡಿದರು. ಆ ಮೇಲೆ ದೊಡ್ಡಬಳ್ಳಾಪುರದಲ್ಲಿ ಶಿಕ್ಷಕರದರು. ಬೆಂಗಳೂರಿನ ಕ್ಯಾಂಟೋನ್ಮೆಂಟ್ ಶಾಲೆಯಲ್ಲಿ ಉಪಾಧ್ಯಾಯರಾಗಿದ್ದರು. ಅನಂತರ ಮೂರು ವರ್ಷ ಕಾಲ ಧಾರವಾಡದ ಬಾಸೆಲ್ ಮಿಶನ್ ಹೈಸ್ಕೂಲಿನಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿದರು. ಬಳಿಕ ಬೆಂಗಳೂರಿನ ಸೆಂಟ್ ಜೋಸೆಫ್ ಹೈಸ್ಕೂಲಿನಲ್ಲಿ ಅಧ್ಯಾಪಕರಾಗಿ ಕೆಲಸ ಮಾಡಿ ,೧೯೧೯ರಲ್ಲಿ ಸೆಂಟ್ರಲ್ ಕಾಲೇಜಿನಲ್ಲಿ ಹಾಗು ೧೯೨೭ರಲ್ಲಿ ಮಹಾರಾಜಾ ಕಾಲೇಜಿನಲ್ಲಿ ಕನ್ನಡ ಅಧ್ಯಾಪಕರಾದರು.
[ಬದಲಾಯಿಸಿ] ಕೃತಿಗಳು
[ಬದಲಾಯಿಸಿ] ಜೀವನ ಚರಿತ್ರೆ
- ಶ್ರೀ ರಾಮಕೃಷ್ಣ ಪರಮಹಂಸರ ಚರಿತ್ರೆ (ಎ.ಆರ್.ಕೃಷ್ಣಶಾಸ್ತ್ರಿಗಳ ಜೊತೆಗೆ)
[ಬದಲಾಯಿಸಿ] ಲೇಖನ ಸಂಕಲನ
- ಕನ್ನಡ ಸಾಹಿತ್ಯ ಮತ್ತು ಇತರ ಲೇಖನಗಳು
[ಬದಲಾಯಿಸಿ] ಅನುವಾದ
ಶ್ರೀ ರಾಮಕೃಷ್ಣ ಪರಮಹಂಸರ ಲೀಲಾ ಪ್ರಸಂಗ (ಬಂಗಾಲಿಯಿಂದ)
[ಬದಲಾಯಿಸಿ] ಸಂಪಾದಿತ
- ಬಸವದೇವರಾಜ ರಗಳೆ
- ಕರ್ನಾಟಕ ಕಾದಂಬರಿ ಸಂಗ್ರಹ
- ಹರಿಶ್ಚಂದ್ರ ಕಾವ್ಯ ಸಂಗ್ರಹ
- ಕುಮಾರವ್ಯಾಸ ಭೀಷ್ಮಪರ್ವ ಸಂಗ್ರಹ (ಡಿ.ಎಲ್.ಎನ್. ಜೊತೆಗೆ)
- ಸಿದ್ಧರಾಮ ಚಾರಿತ್ರ್ಯ (ಡಿ.ಎಲ್.ಎನ್. ಜೊತೆಗೆ)