New Immissions/Updates:
boundless - educate - edutalab - empatico - es-ebooks - es16 - fr16 - fsfiles - hesperian - solidaria - wikipediaforschools
- wikipediaforschoolses - wikipediaforschoolsfr - wikipediaforschoolspt - worldmap -

See also: Liber Liber - Libro Parlato - Liber Musica  - Manuzio -  Liber Liber ISO Files - Alphabetical Order - Multivolume ZIP Complete Archive - PDF Files - OGG Music Files -

PROJECT GUTENBERG HTML: Volume I - Volume II - Volume III - Volume IV - Volume V - Volume VI - Volume VII - Volume VIII - Volume IX

Ascolta ""Volevo solo fare un audiolibro"" su Spreaker.
CLASSICISTRANIERI HOME PAGE - YOUTUBE CHANNEL
Privacy Policy Cookie Policy Terms and Conditions
ದತ್ತಾತ್ರೇಯ ಕೃಷ್ಣಾಜಿ ಭಾರದ್ವಾಜ - Wikipedia

ದತ್ತಾತ್ರೇಯ ಕೃಷ್ಣಾಜಿ ಭಾರದ್ವಾಜ

From Wikipedia

ದತ್ತಾತ್ರೇಯ ಕೃಷ್ಣಾಜಿ ಭಾರದ್ವಾಜ ಇವರು ೧೮೯೧ ಡಿಶಂಬರ ೨೯ರಂದು ಬೆಂಗಳೂರು ಜಿಲ್ಲೆಯ ಹೊಸಕೋಟೆಯಲ್ಲಿ ಜನಿಸಿದರು. ತಂದೆ ಮೂಲತಃ ಧಾರವಾಡ ಜಿಲ್ಲೆಯ ಕುಂದಗೋಳ ಊರಿನವರು. ಕೃಷ್ಣಾಜಿ ಕುಂದಗೋಳಕರ ಎಂದೇ ಅವರ ಹೆಸರು.ಮೈಸೂರು ಸಂಸ್ಥಾನದಲ್ಲಿ ಜಮೀನು ಮೋಜಣಿ ಮಾಡಿಸುವ ಉದ್ದೇಶದಿಂದ ಮೈಸೂರು ಮಹಾರಾಜರು ಕರೆಯಿಸಿದ ಮೋಜಣಿದಾರರಲ್ಲಿ ಕೃಷ್ಣಾಜಿ ಕುಂದಗೋಳಕರ ಒಬ್ಬರು. ಭಾರದ್ವಾಜರ ತಾಯಿ ಭೀಮಾಬಾಯಿ. ಚಿಕ್ಕಂದಿನಲ್ಲಿಯೆ ತಾಯಿ ನಿಧನರಾದರು. ಭಾರದ್ವಾಜರ ಶಿಕ್ಷಣ ಬೆಂಗಳೂರಿನ ಸೆಂಟ್ರಲ್ ಪ್ರೌಢಶಾಲೆಯಲ್ಲಿ ಆಯಿತೆಂದು ತಿಳಿದು ಬರುತ್ತದೆ. ಆ ದಿನಗಳಲ್ಲಿ (ಸು.೧೯೦೦) ಬೀಸುತ್ತಿರುವ ರಾಷ್ಟ್ರೀಯತೆಯ ಗಾಳಿ ಭಾರದ್ವಾಜರ ಮೇಲೆ ತೀವ್ರ ಪ್ರಭಾವ ಬೀರಿತು.

ಪರಿವಿಡಿ

[ಬದಲಾಯಿಸಿ] ಕೌಟಂಬಿಕ

ಕ್ರಿ.ಶ.೧೯೧೩ರ ಸುಮಾರಿನಲ್ಲಿ ದತ್ತಾತ್ರೇಯ ಭಾರದ್ವಾಜರ ವಿವಾಹ ಮೈಸೂರಿನ ಅರಮನೆಯಲ್ಲಿ ಪೇಶಕಾರರಾಗಿದ್ದ ವೆಂಕೋಬರಾಯರ ಮಗಳು ಕಮಲಾಬಾಯಿಯವರ ಜೊತೆ ಜರುಗಿತು. ಇವರಿಗೆ ಮೂವರು ಗಂಡು ಮಕ್ಕಳು ಹಾಗು ಕೊನೆಯವಳು ಒಬ್ಬಳು ಮಗಳು.

[ಬದಲಾಯಿಸಿ] ಶಿಕ್ಷಣ ಹಾಗು ಉದ್ಯೋಗ

ಮ್ಯಾಟ್ರಿಕ್ಯುಲೇಶನ್ನಿಗೆ ಶಿಕ್ಷಣ ನಿಲ್ಲಿಸಿದ್ದ ಭಾರದ್ವಾಜರು ೧೯೧೩ರ ಸುಮಾರಿನಲ್ಲಿ ಒಕ್ಕಲಿಗರ ಪತ್ರಿಕೆಯ ಉಪಸಂಪಾದಕರಾಗಿ ಕೆಲಸಕ್ಕೆ ತೊಡಗಿದರು. ಅನಿ ಬೆಸೆಂಟರಿಂದ ಮಂಗಳೂರಿನಲ್ಲಿ ಸ್ಥಾಪಿತವಾದ ರಾಷ್ಟ್ರೀಯ ವಿದ್ಯಾವರ್ಧಿನಿ ಸಭಾ ಎಂಬ ಸಂಸ್ಥೆಯವರು ಇವರ ಲೇಖನಗಳಿಂದ ಹಾಗು ಚಟುವಟಿಕೆಗಳಿಂದ ಪ್ರಭಾವಿತರಾಗಿ ಇವರಿಗೆ ವಿದ್ಯಾರ್ಥಿವೇತನವನ್ನು ನೀಡಿದರು. ಭಾರದ್ವಾಜರು ನ್ಯಾಶನಲ್ ಕಾಲೇಜಿನಲ್ಲಿ ‘ರಾಜ್ಯಶಾಸ್ತ್ರ’ ಮತ್ತು ‘ಪತ್ರಿಕೋದ್ಯಮ’ ಗಳ ಅಧ್ಯಯನ ಮಾಡಿದರು. ಶ್ರೀಮತಿ ಬೆಸೆಂಟರು ಲಂಡನ್‍ನಲ್ಲಿ ಹೆಚ್ಚಿನ ಅಧ್ಯಯನ ಮಾಡಲು ನೀಡಿದ ನೆರವನ್ನು ಭಾರದ್ವಾಜರು ತಿರಸ್ಕರಿಸಿ, ಬೆಸೆಂಟ ಅವರೇ ಮಂಗಳೂರಿನಲ್ಲಿ ಸ್ಥಾಪಿಸಿದ ರಾಷ್ಟ್ರೀಯ ಶಿಕ್ಷಕಿಯರ ಶಾಲೆಯಲ್ಲಿ ಅಧ್ಯಾಪಕರಾದರು.

ಮಹಾತ್ಮಾ ಗಾಂಧೀಜಿಯವರ ತತ್ವದಿಂದ ಪ್ರಭಾವಿತರಾಗಿದ್ದ ಭಾರದ್ವಾಜರು ಆ ಮಾದರಿಯ ಜೀವನವನ್ನೇ ನಡೆಯಿಸಿದರು. ದಿನವೂ ಚರಕದಿಂದ ನೂಲುತ್ತಿದ್ದರು. ಇವರ ಮನೆಯೂ ಸಹ ಅತಿಥಿ, ಅಭ್ಯಾಗತರಿಗೆ ಆಶ್ರಯತಾಣವಾಗಿತ್ತು. ೧೯೨೦ರಲ್ಲಿ ಇವರು ರಾಷ್ಟ್ರೀಯ ಶಿಕ್ಷಕಿಯರ ಕಾಲೇಜಿನ ಅಧ್ಯಾಪಕ ಹುದ್ದೆಗೆ ರಾಜೀನಾಮೆ ನೀಡಿ, ಸ್ವಾತಂತ್ರ್ಯ ಚಳುವಳಿಗೆ ಧುಮುಕಿದರು. ತಾವೇ ಸಂಪಾದಕರಾಗಿದ್ದ ತಿಲಕ ಸಂದೇಶ ಪತ್ರಿಕೆಯಲ್ಲಿ ಬರೆದ ಲೇಖನಕ್ಕಾಗಿ ಒಂದೂವರೆ ವರ್ಷ ಜೈಲುವಾಸವನ್ನು ಅನುಭವಿಸಿದರು.

[ಬದಲಾಯಿಸಿ] ಆಯುರ್ವೇದಕೀಯ

೧೯೨೪ರಲ್ಲಿ ಬೆಳಗಾವಿಯಲ್ಲಿ ನಡೆದ ಕಾಂಗ್ರೆಸ್ ಅಧಿವೇಶನದಲ್ಲಿ ಸ್ವಯಂಸೇವಕರಾಗಿ ದುಡಿದ ನಂತರ, ಭಾರದ್ವಾಜರು ಧಾರವಾಡಕ್ಕೆ ಬಂದು ನೆಲೆಸಿದರು. ಆದರೆ ಅಲ್ಲಿಯ ರಾಜಕೀಯದಲ್ಲಿ ಮನನೊಂದ ಭಾರದ್ವಾಜರು ೧೯೨೫ರಲ್ಲಿ ಬೆಂಗಳೂರಿಗೆ ಬಂದರು. ಸುಪ್ರಸಿದ್ಧ ತಾರಾನಾಥರ ಪ್ರೇಮಾಯತನ ಸಂಸ್ಥೆಯಲ್ಲಿ ಆಯುರ್ವೇದವನ್ನು ಅಭ್ಯಾಸ ಮಾಡಿ, ಬೆಂಗಳೂರಿನಲ್ಲಿ ರಾಮಕೃಷ್ಣ ಚಿಕಿತ್ಸಾಲಯದ ಮೂಲಕ ಆಯುರ್ವೇದ ಸೇವೆಯನ್ನು ನೀಡತೊಡಗಿದರು. ಅಲ್ಲದೆ ೧೯೩೮ರಲ್ಲಿ ರಾಮಕೃಷ್ಣ ವಿದ್ಯಾಪೀಠ ಸ್ಥಾಪಿಸಿ ಆಯುರ್ವೇದವನ್ನು ಕಲಿಸತೊಡಗಿದರು.

೧೯೩೦ರಲ್ಲಿ ನಿಖಿಲ ಭಾರತ ಆಯುರ್ವೇದ ವಿದ್ಯಾಪೀಠದ ಸ್ಥಾನಿಕ ಕೇಂದ್ರದ ಅಧ್ಯಕ್ಷರಾಗಿದ್ದರು. ೧೯೩೮ರಲ್ಲಿ ನಿಖಿಲ ಭಾರತ ಆನುವಂಶಿಕ ವೈದ್ಯ ಹಕೀಮರ ಸಮ್ಮೇಳನದ ಪ್ರಧಾನ ಕಾರ್ಯದರ್ಶಿಯಾಗಿದ್ದರು. ೧೯೩೯ರಲ್ಲಿ ಶಿರಸಿ ಕಾರವಾರ ಜಿಲ್ಲೆಯ ವೈದ್ಯ ಹಕೀಮರ ಸಮ್ಮೆಳನದ ಅಧ್ಯಕ್ಷರಾಗಿದ್ದರು. ೧೯೪೦-೪೨ರಲ್ಲಿ ನಿಖಿಲ ಭಾರತ ಆಯುರ್ವೇದ ಮಹಾಸಮ್ಮೇಳನದ ದಕ್ಷಿಣ ಭಾರತದ ಕಾರ್ಯದರ್ಶಿಗಳಾಗಿದ್ದರು. ೧೦೪೭ರಲ್ಲಿ ನಡೆದ ನಿಖಿಲ ಕರ್ನಾಟಕ ಆಯುರ್ವೇದ ಪ್ರಚಾರ ಪರಿಷತ್ತಿನ ಅಧ್ಯಕ್ಷರಾಗಿದ್ದರು.

[ಬದಲಾಯಿಸಿ] ಪತ್ರಿಕೋದ್ಯಮ

೧೯೧೩ರಲ್ಲಿ ಭಾರದ್ವಾಜರು ಒಕ್ಕಲಿಗರ ಪತ್ರಿಕೆಯ ಉಪಸಂಪಾದಕರಾಗಿ ಕಾರ್ಯ ನಿರ್ವಹಿಸಿದರು. ೧೯೨೧ರ ಸುಮಾರಿನಲ್ಲಿ ಮಂಗಳೂರಿನಲ್ಲಿದ್ದಾಗ ತಿಲಕ ಸಂದೇಶ ಮತ್ತು ಸ್ವರಾಜ ಡೈರಿ ಪತ್ರಿಕೆಗಳ ಸಂಪಾದರಾಗಿದ್ದರು. ೧೯೨೫ರಲ್ಲಿ ಬೆಂಗಳೂರಿನಲ್ಲಿ ಡಾ. ಕುರ್ತಕೋಟಿಯವರು ಪ್ರಕಟಿಸುತ್ತಿದ್ದ ಸಂಸ್ಕೃತದ ಸಂಶೋಧನಾತ್ಮಕ ಮಾಸಪತ್ರಿಕೆಯ ಉಪಸಂಪಾದಕರಾಗಿದ್ದರು. ೧೯೨೬ರಿಂದ ೧೯೨೮ರವರೆಗೆ ಮಕ್ಕಳ ಪುಸ್ತಕವೆಂಬ ಮಕ್ಕಳ ಮಾಸಪತ್ರಿಕೆಯ ಮುಖ್ಯ ಸಂಪಾದಕರಾಗಿದ್ದರು. ೧೯೨೫ರಿಂದ ೧೯೩೧ರವರೆಗೆ ರಂಗಭೂಮಿ ಎಂಬ ಕಲೆಗಾಗಿ ಮೀಸಲಾದ ಕನ್ನಡ ಮಾಸಪತ್ರಿಕೆಯ ಪ್ರಮುಖ ಸಂಪಾದಕರಾಗಿದ್ದರು. ಇದರಂತೆ ಸುಬೋಧ ರಾಮರಾಯರು ಪ್ರಕಟಿಸುತ್ತಿದ್ದ ಸುಬೋಧ ಮಾಸಪತ್ರಿಕೆಗೆ ಪ್ರಚಲಿತ ಪ್ರಪಂಚ ಎಂಬ ಅಂಕಣವನ್ನು ಕೆಲಕಾಲ ಬರೆದಿದ್ದಾರೆ. ಅಲ್ಲದೆ ಆ ಕಾಲದ ಪ್ರಮುಖ ಪತ್ರಿಕೆಗಳಾದ ಜಯಂತಿ, ಜಯ ಕರ್ನಾಟಕ, ಜೀವನ, ಕನ್ನಡ ನುಡಿ, ವಿಶ್ವ ಕರ್ನಾಟಕ, ನಗುವ ನಂದ ಮೊದಲಾದ ನಿಯತಕಾಲಿಕಗಳಿಗೂ ಅನೇಕ ಲೇಖನಗಳನ್ನು ಬರೆದಿದ್ದಾರೆ.


[ಬದಲಾಯಿಸಿ] ಹಿಂದೀ ಪ್ರಚಾರ

ಸ್ವಾತಂತ್ರ್ಯ ಹೋರಾಟದ ಕಾಲದಲ್ಲಿ ಹಿಂದೀ ಭಾಷಾ ಪ್ರಚಾರವು ರಾಷ್ಟ್ರೀಯ ಚಳುವಳಿಯ ಒಂದು ಭಾಗವೇ ಆಗಿತ್ತು. ಭಾರದ್ವಾಜರು ೧೯೩೦ರಲ್ಲಿ ಹಿಂದೀ ಪ್ರಚಾರ ಪರಿಷತ್ ಎನ್ನುವ ಸಂಸ್ಥೆಯನ್ನು ಸ್ಥಾಪಿಸಿದರು. ಬೆಂಗಳೂರಿನ ನ್ಯಾಶನಲ್ ಹೈಸ್ಕೂಲಿನಲ್ಲಿ ಉಚಿತ ಹಿಂದೀ ತರಗತಿಗಳನ್ನು ನಡೆಯಿಸಿದರು.

[ಬದಲಾಯಿಸಿ] ಸಾಹಿತ್ಯ

ಭಾರದ್ವಾಜರು ತಮ್ಮ ಇಂಗ್ಲಿಷ್-ಕನ್ನಡ ನಿಘಂಟುವಿನಂದಾಗಿ ಬಹಳ ಪ್ರಸಿದ್ಧರಾಗಿದ್ದಾರೆ. ಆದರೆ ಅವರು ರಚಿಸಿದ ಕೃತಿಗಳು ವೈವಿಧ್ಯಪೂರ್ಣವಾಗಿವೆ.

  • ತಿಲಕ ಮಹಾರಾಜರ ಚರಿತ್ರೆ
  • ಅಮೃತಸರ ಪಟ್ಟಣ
  • ಹಿಂದೀ ಸ್ವರಾಜ್ಯ
  • ಶ್ರೀಕೃಷ್ಣ ಜನ್ಮಾಷ್ಟಮಿ
  • ಶ್ರೀಯುತ ಆಂಡ್ರೂಜರ ಅಸಹಕಾರ ಪತ್ರಗಳು
  • ನೀತಿಧರ್ಮ
  • ಹಿಂದೀ ಭಾಷಾಸಾರ
  • ಸ್ವರಾಜ್ಯ ಡೈರಿ
  • ಕಾಂಗ್ರೆಸ್ಸಿನ ಇತಿಹಾಸ
  • ಕರ್ನಾಟಕ ಕೈಪಿಡಿ
  • Karnataka Hand Book
  • ಆಯುರ್ವೇದ ಚಿಕಿತ್ಸಾ ಸಾರಸಂಗ್ರಹ
  • ಭೀಷ್ಮ (ಅನುವಾದ)
  • ಕಮಲಾಕಾಂತನ ಕಡತ
  • ಅನಾಸಕ್ತಿ ಯೋಗ
  • ಜಗತ್ತಿನ ಸ್ವಾತಂತ್ರ್ಯ ಸಂಗ್ರಾಮ
  • ನಾಟ್ಯರೂಪ ಹಿಂದುಸ್ತಾನ
  • ಸಂತಾನ ವಿಜ್ಞಾನ
  • ಸೀತಾ ( ಅನುವಾದ )
  • Rangabhoomi Pictorials ( 4 vols )
  • ಆಹಾರ ವಿಜ್ಞಾನ
  • Dangers of Vaccinations
  • ಶ್ರೀ ತುಳಸಿ ರಾಮಾಯಣ (ಬಾಲಕಾಂಡ, ಟೀಕಾ ಸಹಿತ)
  • ಸಚಿತ್ರ ಭಾರತ ಯಾತ್ರೆ
  • Student’s Modern Practical English-Kannada Dictionary
  • English-English-Kannada Dictionary
  • ಜೀವನಚಿತ್ರ (ಕಥಾ ಸಂಕಲನ)
  • ದಾಂಪತ್ಯ ವಿಜ್ಞಾನ
  • ಜನನ ನಿಯಂತ್ರಣ

ದತ್ತಾತ್ರೇಯ ಕೃಷ್ಣಾಜಿ ಭಾರದ್ವಾಜರು ೧೯೫೩ ಫೆಬ್ರುವರಿ ೨೨ರಂದು ನಿಧನರಾದರು.

Static Wikipedia (no images)

aa - ab - af - ak - als - am - an - ang - ar - arc - as - ast - av - ay - az - ba - bar - bat_smg - bcl - be - be_x_old - bg - bh - bi - bm - bn - bo - bpy - br - bs - bug - bxr - ca - cbk_zam - cdo - ce - ceb - ch - cho - chr - chy - co - cr - crh - cs - csb - cu - cv - cy - da - de - diq - dsb - dv - dz - ee - el - eml - en - eo - es - et - eu - ext - fa - ff - fi - fiu_vro - fj - fo - fr - frp - fur - fy - ga - gan - gd - gl - glk - gn - got - gu - gv - ha - hak - haw - he - hi - hif - ho - hr - hsb - ht - hu - hy - hz - ia - id - ie - ig - ii - ik - ilo - io - is - it - iu - ja - jbo - jv - ka - kaa - kab - kg - ki - kj - kk - kl - km - kn - ko - kr - ks - ksh - ku - kv - kw - ky - la - lad - lb - lbe - lg - li - lij - lmo - ln - lo - lt - lv - map_bms - mdf - mg - mh - mi - mk - ml - mn - mo - mr - mt - mus - my - myv - mzn - na - nah - nap - nds - nds_nl - ne - new - ng - nl - nn - no - nov - nrm - nv - ny - oc - om - or - os - pa - pag - pam - pap - pdc - pi - pih - pl - pms - ps - pt - qu - quality - rm - rmy - rn - ro - roa_rup - roa_tara - ru - rw - sa - sah - sc - scn - sco - sd - se - sg - sh - si - simple - sk - sl - sm - sn - so - sr - srn - ss - st - stq - su - sv - sw - szl - ta - te - tet - tg - th - ti - tk - tl - tlh - tn - to - tpi - tr - ts - tt - tum - tw - ty - udm - ug - uk - ur - uz - ve - vec - vi - vls - vo - wa - war - wo - wuu - xal - xh - yi - yo - za - zea - zh - zh_classical - zh_min_nan - zh_yue - zu -

Static Wikipedia 2007 (no images)

aa - ab - af - ak - als - am - an - ang - ar - arc - as - ast - av - ay - az - ba - bar - bat_smg - bcl - be - be_x_old - bg - bh - bi - bm - bn - bo - bpy - br - bs - bug - bxr - ca - cbk_zam - cdo - ce - ceb - ch - cho - chr - chy - co - cr - crh - cs - csb - cu - cv - cy - da - de - diq - dsb - dv - dz - ee - el - eml - en - eo - es - et - eu - ext - fa - ff - fi - fiu_vro - fj - fo - fr - frp - fur - fy - ga - gan - gd - gl - glk - gn - got - gu - gv - ha - hak - haw - he - hi - hif - ho - hr - hsb - ht - hu - hy - hz - ia - id - ie - ig - ii - ik - ilo - io - is - it - iu - ja - jbo - jv - ka - kaa - kab - kg - ki - kj - kk - kl - km - kn - ko - kr - ks - ksh - ku - kv - kw - ky - la - lad - lb - lbe - lg - li - lij - lmo - ln - lo - lt - lv - map_bms - mdf - mg - mh - mi - mk - ml - mn - mo - mr - mt - mus - my - myv - mzn - na - nah - nap - nds - nds_nl - ne - new - ng - nl - nn - no - nov - nrm - nv - ny - oc - om - or - os - pa - pag - pam - pap - pdc - pi - pih - pl - pms - ps - pt - qu - quality - rm - rmy - rn - ro - roa_rup - roa_tara - ru - rw - sa - sah - sc - scn - sco - sd - se - sg - sh - si - simple - sk - sl - sm - sn - so - sr - srn - ss - st - stq - su - sv - sw - szl - ta - te - tet - tg - th - ti - tk - tl - tlh - tn - to - tpi - tr - ts - tt - tum - tw - ty - udm - ug - uk - ur - uz - ve - vec - vi - vls - vo - wa - war - wo - wuu - xal - xh - yi - yo - za - zea - zh - zh_classical - zh_min_nan - zh_yue - zu -

Static Wikipedia 2006 (no images)

aa - ab - af - ak - als - am - an - ang - ar - arc - as - ast - av - ay - az - ba - bar - bat_smg - bcl - be - be_x_old - bg - bh - bi - bm - bn - bo - bpy - br - bs - bug - bxr - ca - cbk_zam - cdo - ce - ceb - ch - cho - chr - chy - co - cr - crh - cs - csb - cu - cv - cy - da - de - diq - dsb - dv - dz - ee - el - eml - eo - es - et - eu - ext - fa - ff - fi - fiu_vro - fj - fo - fr - frp - fur - fy - ga - gan - gd - gl - glk - gn - got - gu - gv - ha - hak - haw - he - hi - hif - ho - hr - hsb - ht - hu - hy - hz - ia - id - ie - ig - ii - ik - ilo - io - is - it - iu - ja - jbo - jv - ka - kaa - kab - kg - ki - kj - kk - kl - km - kn - ko - kr - ks - ksh - ku - kv - kw - ky - la - lad - lb - lbe - lg - li - lij - lmo - ln - lo - lt - lv - map_bms - mdf - mg - mh - mi - mk - ml - mn - mo - mr - mt - mus - my - myv - mzn - na - nah - nap - nds - nds_nl - ne - new - ng - nl - nn - no - nov - nrm - nv - ny - oc - om - or - os - pa - pag - pam - pap - pdc - pi - pih - pl - pms - ps - pt - qu - quality - rm - rmy - rn - ro - roa_rup - roa_tara - ru - rw - sa - sah - sc - scn - sco - sd - se - sg - sh - si - simple - sk - sl - sm - sn - so - sr - srn - ss - st - stq - su - sv - sw - szl - ta - te - tet - tg - th - ti - tk - tl - tlh - tn - to - tpi - tr - ts - tt - tum - tw - ty - udm - ug - uk - ur - uz - ve - vec - vi - vls - vo - wa - war - wo - wuu - xal - xh - yi - yo - za - zea - zh - zh_classical - zh_min_nan - zh_yue - zu

Static Wikipedia February 2008 (no images)

aa - ab - af - ak - als - am - an - ang - ar - arc - as - ast - av - ay - az - ba - bar - bat_smg - bcl - be - be_x_old - bg - bh - bi - bm - bn - bo - bpy - br - bs - bug - bxr - ca - cbk_zam - cdo - ce - ceb - ch - cho - chr - chy - co - cr - crh - cs - csb - cu - cv - cy - da - de - diq - dsb - dv - dz - ee - el - eml - en - eo - es - et - eu - ext - fa - ff - fi - fiu_vro - fj - fo - fr - frp - fur - fy - ga - gan - gd - gl - glk - gn - got - gu - gv - ha - hak - haw - he - hi - hif - ho - hr - hsb - ht - hu - hy - hz - ia - id - ie - ig - ii - ik - ilo - io - is - it - iu - ja - jbo - jv - ka - kaa - kab - kg - ki - kj - kk - kl - km - kn - ko - kr - ks - ksh - ku - kv - kw - ky - la - lad - lb - lbe - lg - li - lij - lmo - ln - lo - lt - lv - map_bms - mdf - mg - mh - mi - mk - ml - mn - mo - mr - mt - mus - my - myv - mzn - na - nah - nap - nds - nds_nl - ne - new - ng - nl - nn - no - nov - nrm - nv - ny - oc - om - or - os - pa - pag - pam - pap - pdc - pi - pih - pl - pms - ps - pt - qu - quality - rm - rmy - rn - ro - roa_rup - roa_tara - ru - rw - sa - sah - sc - scn - sco - sd - se - sg - sh - si - simple - sk - sl - sm - sn - so - sr - srn - ss - st - stq - su - sv - sw - szl - ta - te - tet - tg - th - ti - tk - tl - tlh - tn - to - tpi - tr - ts - tt - tum - tw - ty - udm - ug - uk - ur - uz - ve - vec - vi - vls - vo - wa - war - wo - wuu - xal - xh - yi - yo - za - zea - zh - zh_classical - zh_min_nan - zh_yue - zu