ನಿಜಗುಣ ಶಿವಯೋಗಿಗಳು
From Wikipedia
ನಿಜಗುಣ ಶಿವಯೋಗಿಗಳ ಕಾಲಮಾನ ಕ್ರಿ.ಶ.೧೬೦೦ ಇರಬೇಕೆಂದು ವಿದ್ವಾಂಸರು ಅಭಿಪ್ರಾಯಪಡುತ್ತಾರೆ. ಇವರು ಚಾಮರಾಜನಗರ ಜಿಲ್ಲೆಯ ಚಿಲುಕವಾಡಿಯ ಸುತ್ತಲಿರುವ ಪ್ರದೇಶಕ್ಕೆ ಪಾಳೆಯಗಾರರಾಗಿದ್ದರು. ಆಧ್ಯಾತ್ಮಕ್ಕೆ ಒಲಿದ ನಿಜಗುಣ ಶಿವಯೊಗಿಗಳು ತಮ್ಮ ಪಟ್ಟವನ್ನು ತ್ಯಜಿಸಿ, ಚಿಲುಕವಾಡಿಯ ಬಳಿಯ ಶಂಭುಲಿಂಗನ ಬೆಟ್ಟದಲ್ಲಿ ಹಲವು ವರ್ಷ ತಪಸ್ಸುಗೈದರೆಂದು ಹೇಳಲಾಗುತ್ತಿದೆ.
[ಬದಲಾಯಿಸಿ] ನಿಜಗುಣ ಶಿವಯೋಗಿಗಳ ರಚನೆಗಳು
- (೧)ಅರುವತ್ತುಮೂವರು ಪುರಾತನರ ತ್ರಿವಿಧಿ
- (೨)ಕೈವಲ್ಯ ಪದ್ಧತಿ (ತತ್ವಪದಗಳ ಸಂಕಲನ. ಇದು ಕಾವ್ಯದ ಸೌಂದರ್ಯ, ಶಾಸ್ತ್ರದ ಗಾಂಭೀರ್ಯ ಹಾಗು ಸಂಗೀತದ ಮಾಧುರ್ಯಗಳು ಮಿಳಿತವಾದ ಅಪೂರ್ವವಾದ ಕೃತಿಯಾಗಿದೆ ಎಂದು ವಿಮರ್ಶಕರ ಅಭಿಪ್ರಾಯ)
- (೩)ಪರಮಾರ್ಥ ಪ್ರಕಾಶಿಕೆ
- (೪)ಅನುಭವಸಾರ
- (೫)ಪರಮಾನುಭವ ಬೋಧೆ
- (೬)ವಿವೇಕ ಚಿಂತಾಮಣಿ (ಇದರಲ್ಲಿ ಹತ್ತು ಪ್ರಕರಣಗಳಿದ್ದು ಭಾರತೀಯ ದರ್ಶನ, ಸಂಸ್ಕೃತಿ, ಧರ್ಮ, ಜ್ಯೋತಿಷ್ಯ, ಸಂಗೀತ, ಸಾಹಿತ್ಯ, ಖಗೋಳ, ಭೂಮಂಡಲ ಇತ್ಯಾದಿಗಳ ವಿವರಣೆಯಿದೆ)
ವರ್ಗಗಳು: ಆಧ್ಯಾತ್ಮ | ಧರ್ಮ | ಹಿಂದೂ ಧರ್ಮ | ಸಾಹಿತಿಗಳು