ಪಕ್ಷಿ
From Wikipedia
ಹಾರಾಟಕ್ಕೆ ಅನುಕೂಲವಾದ ಪಕ್ಕಗಳು ಅಂದರೆ ರೆಕ್ಕೆಗಳುಳ್ಳ ಪ್ರಾಣಿಯಾದುದರಿಂದ ಪಕ್ಷಿ ಎಂಬ ಹೆಸರು ಬಂದಿದೆ.ಬೆನ್ನೆಲುಬು ಹೊಂದಿರುವ ಜೀವ ಜಾತಿ.ಇವುಗಳ ದೇಹದ ರಕ್ತ ಮಾನವರಿಗಿರುವಂತೆ ಬೆಚ್ಚಗಿದೆ.ಹಾರಾಟಕ್ಕೆ ಅನುಕೂಲವಾದ ರೆಕ್ಕೆ,ವಿಶಿಷ್ಟವಾದ ಕಾಲು,ಉಗುರು,ಕೊಕ್ಕುಗಳಿಂದ ಪಕ್ಷಿಗಳನ್ನು ಗುರುತಿಸುತ್ತೇವೆ. ಪಕ್ಷಿವರ್ಗ ಮೊಟ್ಟೆಯಿಟ್ಟು ಸಂತಾನ ಪಡೆಯುವ ಪ್ರಾಣಿ ಜಾತಿ.ಪಕ್ಷಿಗಳ ಸ್ವಭಾವ,ಗುಣ,ಶರೀರ ರಚನೆ ಕಾಲದಿಂದ ಕಾಲಕ್ಕೆ ಮಾರ್ಪಾಡಾಗುತ್ತಾ ಬಂದಿದೆ.ಹಾರುವ ಪಕ್ಷಿಗಳಲ್ಲದೆ,ಹಾರಾಡದ ಪಕ್ಷಿಗಳೂ ಇವೆ.