ಪಿ.ಬಿ.ದೇಸಾಯಿ
From Wikipedia
ಕರ್ನಾಟಕದ ಶ್ರೇಷ್ಠ ಇತಿಹಾಸ ಸಂಶೋಧಕರಲ್ಲಿ ಒಬ್ಬರಾದ ಪ್ರಹ್ಲಾದ ಭೀಮರಾವ ದೇಸಾಯಿ ಇವರು ೧೯೧೦ರಲ್ಲಿ ಜನಿಸಿದರು. ತಾಯಿ ಭಾಗೀರಥಿಬಾಯಿ; ತಂದೆ ಭೀಮರಾವ.
[ಬದಲಾಯಿಸಿ] ಶಿಕ್ಷಣ
ಪಿ.ಬಿ.ದೇಸಾಯಿಯವರು ಧಾರವಾಡದ ಕರ್ನಾಟಕ ಕಾಲೇಜಿನಿಂದ ೧೯೩೫ರಲ್ಲಿ ಬಿ.ಎ. ಪರೀಕ್ಷೆಯಲ್ಲಿ ಉತ್ತೀರ್ಣರಾದರು. ಮುಂಬಯಿ ವಿಶ್ವವಿದ್ಯಾಲಯದಿಂದ ೧೯೩೭ರಲ್ಲಿ ಎಮ್.ಎ. ಪದವಿ ಪಡೆದರು.
[ಬದಲಾಯಿಸಿ] ವೃತ್ತಿ ಹಾಗು ಸಾಧನೆ
ಪಿ.ಬಿ.ದೇಸಾಯಿಯವರು ೧೯೩೯ರಲ್ಲಿ ಭಾರತ ಸರಕಾರದ ಪುರಾತತ್ವ ಇಲಾಖೆಯಲ್ಲಿ ಶಾಸನಶಾಸ್ತ್ರ ವಿಭಾಗದಲ್ಲಿ ಸೇವೆ ಪ್ರಾರಂಭಿಸಿದರು.
ಮುಂಬಯಿ ಕರ್ನಾಟಕ, ಮಹಾರಾಷ್ಟ್ರ, ಆಂಧ್ರ ಮತ್ತು ತಮಿಳು ನಾಡುಗಳಲ್ಲಿ ಸಂಚರಿಸಿ ಸಾವಿರಾರು ಶಾಸನಗಳನ್ನು , ತಾಮ್ರಪಟಗಳನ್ನು ಬೆಳಕಿಗೆ ತಂದು ವಿಮರ್ಶಾತ್ಮಕವಾಗಿ ಪರಿಶೀಲಿಸಿದರು. ಇತಿಹಾಸ, ಶಾಸನಶಾಸ್ತ್ರ, ಕನ್ನಡ ಸಾಹಿತ್ಯ ಹಾಗು ಭಾಷೆಗೆ ಸಂಬಂಧಿಸಿದಂತೆ ಅನೇಕ ಪ್ರಬಂಧಗಳನ್ನು ಪ್ರಕಟಿಸಿದರು.
೧೯೫೭ರಲ್ಲಿಕರ್ನಾಟಕ ವಿಶ್ವವಿದ್ಯಾಲಯದ ಇತಿಹಾಸ ವಿಭಾಗದಲ್ಲಿ ಉಪಪ್ರಾಧ್ಯಾಪಕರಾಗಿ ಸೇರಿ,ಬಳಿಕ ಕನ್ನಡ ಸಂಶೋಧನಾ ಸಂಸ್ಥೆಯ ನಿರ್ದೇಶಕರಾಗಿ, ಪ್ರಾಚೀನ ಭಾರತ ಇತಿಹಾಸ ಹಾಗು ಸಂಸ್ಕೃತಿ ವಿಭಾಗದ ಮುಖ್ಯಸ್ಥರಾಗಿ, ೧೯೬೭ರಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ನಿವೃತ್ತರಾದರು.
೧೯೬೧ರಲ್ಲಿ ಇವರ ಜೈನಿಸಮ್ ಇನ್ ಸೌಥ್ ಇಂಡಿಯಾ ಎನ್ನುವ ಮಹಾಪ್ರಬಂಧವು ಇವರಿಗೆ ಡಿ.ಲಿಟ್ ಗೌರವವನ್ನು ದೊರಕಿಸಿತು.
೪೨೦ಕ್ಕೂ ಹೆಚ್ಚು ಸಂಶೋಧನಾ ಪ್ರಬಂಧಗಳನ್ನು ಹಾಗು ಕೃತಿಗಳನ್ನು ಪಿ.ಬಿ.ದೇಸಾಯಿಯವರು ರಚಿಸಿದ್ದಾರೆ.
[ಬದಲಾಯಿಸಿ] ಪುರಸ್ಕಾರ
೧೯೫೯ರಲ್ಲಿ ಕರ್ನಾಟಕ ರಾಜ್ಯ ಸರಕಾರವು ಪಿ.ಬಿ.ದೇಸಾಯಿಯವರಿಗೆ ವಿಶೇಷ ಗೌರವ ನೀಡಿ ಸನ್ಮಾನಿಸಿತು.
ಪಿ.ಬಿ.ದೇಸಾಯಿಯವರು ೧೯೭೪ರಲ್ಲಿ ನಿಧನರಾದರು.