ಪುರಾಣಗಳು
From Wikipedia
ಅನೇಕ ಧರ್ಮಗಳಲ್ಲಿ ಮತ್ತು ಸಂಸ್ಕೃತಿಗಳಲ್ಲಿನ ದಂತಕಥೆಗಳ ಸಮೂಹದ ಬಗ್ಗೆ ಲೇಖನವು ಪುರಾಣ ಎಂಬ ಪುಟದಲ್ಲಿ ಇದೆ.
ಪುರಾಣಗಳು ಪುರಾತನ ಹಿಂದೂ ಧರ್ಮದ ಒಂದು ಸಾಹಿತ್ಯ ಪ್ರಕಾರ. ಇವು ವೇದಗಳಲ್ಲಿ ವರ್ಣಿಸಲಾದ ರಹಸ್ಯ, ಅರ್ಥಗಳನ್ನು ವಿವರವಾಗಿ ಬೋಧಿಸುವ ಗ್ರಂಥಗಳು . ಪುರಾಣಗಳಲ್ಲಿ ಮಹಾಪುರಾಣವೆಂದೂ, ಉಪಪುರಾಣವೆಂದೂ ಎರಡು ಭೇದಗಳಿವೆ. ಪುರಾಣಗಳನ್ನು ಅನೇಕ ಮಂದಿ ಮಹರ್ಷಿಗಳು ಬೇರೆ ಬೇರೆ ಕಾಲಗಳಲ್ಲಿ ರಚಿಸಿದರು.
ಮಹಾಪುರಾಣಗಳು ೧೮.ಮಹಾಪುರಾಣಗಳು ಮತ್ತು ಅವುಗಳ ಗ್ರಂಥ ಪರಿಮಾಣ( ೩೨ ಅಕ್ಷರಗಳುಳ್ಳ ಒಂದು ಅನುಷ್ಟುಪ್ ಶ್ಲೋಕಕ್ಕೆ ಗ್ರಂಥವೆಂದು ಹೆಸರು.) ಹೀಗಿವೆ:-
೧.ಬ್ರಾಹ್ಮಪುರಾಣ - ೧೦೦೦೦. ೨.ಪಾದ್ಮಪುರಾಣ - ೫೫೦೦೦. ೩.ವೈಷ್ಣವಪುರಾಣ - ೨೩೦೦೦.
೪.ಶೈವಪುರಾಣ - ೨೪೦೦೦. ೫.ಭಾಗವತಪುರಾಣ - ೧೮೦೦೦. ೬.ನಾರದೀಯಪುರಾಣ - ೨೫೦೦೦.
೭.ಮಾರ್ಕಂಡೇಯಪುರಾಣ - ೯೦೦೦. ೮.ಆಗ್ನೇಯಪುರಾಣ - ೧೫೪೦೦. ೯.ಭವಿಷ್ಯಪುರಾಣ - ೧೪೫೦೦
೧೦.ಬ್ರಹ್ಮವೈವರ್ತಪುರಾಣ - ೧೭೦೦೦. ೧೧.ಲೈಂಗಪುರಾಣ - ೧೧೦೦೦. ೧೨.ವಾರಾಹಪುರಾಣ - ೨೪೦೦೦.
೧೩.ಸ್ಕಾಂದಪುರಾಣ - ೮೦೧೦೦. ೧೪.ವಾಮನಪುರಾಣ - ೧೦೦೦೦. ೧೫.ಕೌರ್ಮಪುರಾಣ - ೧೭೦೦೦.
೧೬.ಮಾತ್ಸ್ಯಪುರಾಣ - ೧೪೦೦೦. ೧೭.ಗಾರುಡಪುರಾಣ - ೯೮೦ ೧೮.ಬ್ರಹ್ಮಾಂಡಪುರಾಣ - ೧೨೦೦೦.