ಬಿ.ಎ.ಸನದಿ
From Wikipedia
ಬಿ.ಎ.ಸನದಿ ಯವರು ೧೯೩೩ ಅಗಸ್ಟ ೧೮ ರಂದು ಬೆಳಗಾವಿ ಜಿಲ್ಲೆಯ ಸಿಂದೊಳ್ಳಿ ಗ್ರಾಮದಲ್ಲಿ ಜನಿಸಿದರು.
[ಬದಲಾಯಿಸಿ] ಶಿಕ್ಷಣ ಹಾಗು ಉದ್ಯೋಗ
ಮಾಧ್ಯಮಿಕ ಶಿಕ್ಷಣವನ್ನು ಬೆಳಗಾವಿಯ ಜಿ.ಎ.ಹೈಸ್ಕೂಲ್ ಹಾಗು ಬಿ.ಏ. ವ್ಯಾಸಂಗವನ್ನು ಲಿಂಗರಾಜ ಕಾಲೇಜ್ ಗಳಲ್ಲಿ ಪೂರೈಸಿದ ಸನದಿಯವರು ೧೯೫೪ ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯ ದ ಅರ್ಥಶಾಸ್ತ್ರ ಪದವಿ ಪಡೆದು, ಬೆಡಕೀಹಾಳ್-ಶಮನೇವಾಡಿ ಹೊಸ ಹೈಸ್ಕೂಲಿನಲ್ಲಿ ಶಿಕ್ಷಕ ವೃತ್ತಿಯನ್ನು ಆರಂಭಿಸಿದರು.
೧೯೫೬ರಲ್ಲಿ ಬೆಳಗಾವಿಯ ಶಿಕ್ಷಣ ಮಹಾವಿದ್ಯಾಲಯದಲ್ಲಿತರಬೇತಿ ಪಡೆದ ಸನದಿಯವರು, ೧೯೫೭ ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯ ದ ಬಿ.ಎಡ್. ಪದವಿ ಪಡೆದರು. ಅದೇ ವರ್ಷ ಕರ್ನಾಟಕ ಸರಕಾರ ದ ಸಮಾಜ ವಿಕಾಸ ಇಲಾಖೆಯಲ್ಲಿ ಸಮಾಜ ಶಿಕ್ಷಣಾಧಿಕಾರಿ ಎಂದು ಆಯ್ಕೆಯಾಗಿ ಅಥಣಿ ತಾಲೂಕಿನಲ್ಲಿ ಸರಕಾರಿ ಸೇವೆಯನ್ನು ಆರಂಭಿಸಿದರು. ೧೯೬೪ ರಲ್ಲಿ ರಾಜ್ಯ ಸರಕಾರದಿಂದ ಭಾರತ ಸರಕಾರ ದ ವಾರ್ತಾ ಇಲಾಖೆ ಗೆ ಬಡತಿಯ ಮೇಲೆ ವರ್ಗಾವಣೆ ಹೊಂದಿ ಕಲಬುರ್ಗಿ ವಿಭಾಗದ ಕ್ಷೇತ್ರ ಪ್ರಚಾರಾಧಿಕಾರಿಯಾದರು. ೧೯೬೯ ರಲ್ಲಿ ಪಶ್ಚಿಮ ವಲಯದ ಪ್ರದರ್ಶನಾಧಿಕಾರಿಯಾಗಿ ಬಡತಿ ಪಡೆದು ಅಹಮದಾಬಾದ ಕ್ಕೆ ತೆರಳಿದರು. ೧೯೭೨ ರಲ್ಲಿ ಶಿವಾಜಿ ವಿಶ್ವವಿದ್ಯಾಲಯ ದಿಂದ ಕನ್ನಡ ಹಾಗು ಸಂಸ್ಕೃತ ದಲ್ಲಿ ಸ್ನಾತಕೋತ್ತರ ಪದವಿ ಪಡೆದು, ಭಾರತ ಸರಕಾರದ ಪ್ರದರ್ಶನ ವಿಭಾಗದಿಂದ ಮುಂಬಯಿ ಆಕಾಶವಾಣಿಗೆ ಕುಟುಂಬ ಕಲ್ಯಾಣ ಕಾರ್ಯಕ್ರಮಾಧಿಕಾರಿ ಯಾಗಿ ವರ್ಗಾವಣೆಯಾಗಿ ಬಂದರು. ಜೊತೆಗೆ ಕನ್ನಡ ಕಾರ್ಯಕ್ರಮಗಳ ಪ್ರಸಾರದ ನಿರ್ವಹಣೆ ಮಾಡುತ್ತಿದ್ದರು ಹಾಗು ಮಹಾರಾಷ್ಟ್ರ ರಾಜ್ಯದ ಅಂತರ್ ಮಾಧ್ಯಮ ಸಂಯೋಜನಾ ಸಮಿತಿಯ ಸದಸ್ಯರಾಗಿದ್ದರು. ೧೯೯೧ ರಲ್ಲಿ ಆಕಾಶವಾಣಿ ಸೇವೆಯಿಂದ ನಿವೃತ್ತರಾದರು.
[ಬದಲಾಯಿಸಿ] ಸಾಹಿತ್ಯಕ ಹಾಗು ಸಾಮಾಜಿಕ ಕಾರ್ಯ
ಸನದಿಯವರ ಪ್ರಥಮ ಕವನ ಜಯ ಕರ್ನಾಟಕ ವು ನವಯುಗ ಪತ್ರಿಕೆಯಲ್ಲಿ ಪ್ರಕಟವಾದದ್ದು ೧೯೪೯ರಲ್ಲಿ, ಅಂದರೆ ಅವರು ೧೬ ವರ್ಷದವರಿದ್ದಾಗ. ಅದೇ ವರ್ಷ ಅವರು ಬರೆದ ನಾಟಕ ಪತಿವ್ರತಾ ಪ್ರಭಾವ ವನ್ನು ಅವರ ಊರಾದ ಸಿಂದೊಳ್ಳಿ ಯಲ್ಲಿ ಆಡಲಾಯಿತು.
ಲಿಂಗರಾಜ ಕಾಲೇಜಿನಲ್ಲಿ ಕಲಿಯುತ್ತಿದ್ದಾಗ, ೧೯೫೨ರಲ್ಲಿ ಸನದಿಯವರು ಬರಹಗಾರರ ಬಳಗದ ಕಾರ್ಯದರ್ಶಿ, ಬೆಳಗಾವಿಯ ಯುವಕ ಕಲಾ ಕಲಾವೃಂದ ದ ಕಾರ್ಯದರ್ಶಿ ಹಾಗು ಶೋಭಾ ಗ್ರಂಥಮಾಲೆ ಯ ಸಂಚಾಲಕರಾಗಿದ್ದರು.
೧೯೫೫ ರಲ್ಲಿ ಶಮನೇವಾಡಿಯಲ್ಲಿ ಸ್ನೇಹ ಪ್ರಕಾಶನ ವನ್ನು ಪ್ರಾರಂಭಿಸಿ ಐದಳ ಮಲ್ಲಿಗೆ ಯನ್ನು ಪ್ರಕಟಿಸಿದರು.
೧೯೫೬ ರಲ್ಲಿ ದಿ.ಎಸ್.ಡಿ.ಇಂಚಲರ ಜೊತೆಗೂಡಿ ಚೇತನ ಪ್ರಕಾಶನ ವನ್ನು ಆರಂಭಿಸಿದರು ಹಾಗು ಕರ್ನಾಟಕ ಏಕೀಕರಣ ದಿನೋತ್ಸವದ ಅಂಗವಾಗಿ ಕರ್ನಾಟಕ ದರ್ಶನ ಹಾಗು ವಿಜಯ ದುಂದುಭಿ ಕವನ ಸಂಕಲನಗಳನ್ನು ಪ್ರಕಟಿಸಿದರು.
೧೯೬೨ ರಲ್ಲಿ ಬೆಳಗಾವಿಯ ವಿಕಾಸ ಪತ್ರಿಕೆಯ ಸಹಾಯಕ ಸಂಪಾದಕತ್ವ ನಿರ್ವಹಿಸಿದರು. ೧೯೬೫ ರಲ್ಲಿ ಕಲಬುರ್ಗಿ ಯಲ್ಲಿ ನೃಪತುಂಗ ಪ್ರಕಾಶನ ಆರಂಭಿಸಿದರು.
೧೯೮೧ ರಲ್ಲಿ ಮಹಾರಾಷ್ಟ್ರ ಸರಕಾರದ ಕನ್ನಡ ಪಠ್ಯಪುಸ್ತಕ ಸಮಿತಿ ಯ ಸದಸ್ಯರಾಗಿ ೬ ವರ್ಷ ಸೇವೆ ಸಲ್ಲಿಸಿದರು.
೧೯೮೫ ರಲ್ಲಿ ಮಲೇಶಿಯಾದ ರಾಜಧಾನಿ ಕೌಲಾಲಂಪುರ ದಲ್ಲಿ ನಡೆದ ಏಶಿಯಾ ಪೆಸಿಫಿಕ್ ಪ್ರದೇಶದ ಪ್ರಾತಿನಿಧಿಕ ಪ್ರಸಾರ ಕಮ್ಮಟ ದಲ್ಲಿ ಅಖಿಲ ಭಾರತ ಆಕಾಶವಾಣಿ ಯ ಪ್ರತಿನಿಧಿಯಾಗಿ ಪಾಲ್ಗೊಂಡರು.
೧೯೮೭ ರಲ್ಲಿ ಕರ್ನಾಟಕ ಸಾಹಿತ್ಯ ಆಅಡೆಮಿ ಯ ಸದಸ್ಯತ್ವವನ್ನು ಪಡೆದರು.
೧೯೯೪ ರಲ್ಲಿ ಮುಂಬಯಿ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಪ್ರಗತಿ ಪರಿಶೀಲನಾ ಸಮಿತಿಯ ಸದಸ್ಯರಾದರು.
[ಬದಲಾಯಿಸಿ] ಪುರಸ್ಕಾರಗಳು
- ತಾಜಮಹಲು (ಕವನಸಂಗ್ರಹ) : ೧೯೬೨ ರಲ್ಲಿ ರಾಜ್ಯ ಸರಕಾರದ ಪ್ರಶಸ್ತಿ
- ಪ್ರತಿಬಿಂಬ (ಕವನ ಸಂಗ್ರಹ) : ೧೯೬೭ ರಲ್ಲಿ ರಾಜ್ಯ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ
- ಧ್ರುವಬಿಂದು (ಕವನ ಸಂಗ್ರಹ) : ೧೯೬೯ ರಲ್ಲಿ ಭಾರತ ಸರಕಾರದ ಪ್ರಶಸ್ತಿ
- ಇಲ್ಲಿ ಸಲ್ಲುವರು (ವಚನ ವಿಮರ್ಶೆ) : ೧೯೮೪ ರಲ್ಲಿ ಕಾವ್ಯಾನಂದ ಪುರಸ್ಕಾರ ಹಾಗು ಇಳಕಲ್ಲದ ಚಿತ್ತರಗಿ ಸಂಸ್ಥಾನ ಮಠ ದ ವೀರಶೈವ ಸಾಹಿತ್ಯ ಪ್ರಶಸ್ತಿ
- ಸಮಗ್ರ ಸಾಹಿತ್ಯ : ೧೯೯೨ ರಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ
- ಸಮಗ್ರ ಸಾಹಿತ್ಯ ; ೧೯೯೫ರಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಸನ್ಮಾನ ಹಾಗು ಕರ್ನಾಟಕ ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿ
- ೧೯೯೧ ರಲ್ಲಿ ದೆಹಲಿ ಕನ್ನಡಿಗ ಪರವಾಗಿ ಶ್ರೇಷ್ಠ ಹೊರನಾಡ ಕನ್ನಡಿಗ ಪ್ರಶಸ್ತಿ.