ಭದ್ರಾವತಿ
From Wikipedia
ಭದ್ರಾವತಿ ಭಾರತ ದೇಶದ, ಕರ್ನಾಟಕ ರಾಜ್ಯದ, ಶಿವಮೊಗ್ಗ ಜಿಲ್ಲೆಯಲ್ಲಿರುವ ಒಂದು ಕೈಗಾರಿಕಾ ನಗರ. ಇದು ರಾಜ್ಯದ ರಾಜಧಾನಿಯಾದ ಬೆಂಗಳೂರಿನಿಂದ ಸುಮಾರು ೨೫೫ ಕಿಲೋಮೀಟರ್ ಮತ್ತು ಜಿಲ್ಲೆಯ ರಾಜ್ಯಧಾನಿಯಾದ ಶಿವಮೊಗ್ಗದಿಂದ ೧೮ ಕಿಲೋಮೀಟರ್ ದೂರದಲ್ಲಿದೆ. ಇದು ಭದ್ರಾವತಿ ತಾಲ್ಲುಕಿನ ರಾಜ್ಯಧಾನಿಯೂ ಆಗಿದೆ. ಈ ಪಟ್ಟಣವು ೬೭ ಚದರ ಕಿಮಿ ಕ್ಷೇತ್ರಫಲ ಮತ್ತು ೨೦೦೧ ಜನಗಣತಿಯ ಪ್ರಕಾರ ೧೬೦,೬೬೨ ಜನ ಸಂಖ್ಯೆ ಹೊಂದಿದೆ.
ಪರಿವಿಡಿ |
[ಬದಲಾಯಿಸಿ] ಚರಿತ್ರೆ
ಭದ್ರಾವತಿಯ ಹೆಸರು ಅದರ ಮೂಲಕ ಹರಿಯುವ ಭದ್ರಾ ನದಿಯಿಂದ ಉತ್ಪನ್ನವಾಗಿದೆ. ಹಿಂದೆ ಬೆಂಕಿಪುರ (ಅಥವಾ ವೆಂಕಿಪುರ) ಎಂದು ಕರೆಯಲ್ಪಟ್ಟಿತ್ತು. ಇತ್ತೀಚಿನ ಚರಿತ್ರೆಯಲ್ಲಿ ಭದ್ರಾವತಿಯು ೧೯೧೮ರಲ್ಲಿ ಸ್ಥಾಪಿಸಲಾದ ಮೈಸೂರು ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಯಿಂದ ಪ್ರಾಶಸ್ತ್ಯಮಾನವಾಯಿತು. ಇದು ಒಂದು ದೊಡ್ಡ ಕಬ್ಬಿಣ ಮತ್ತು ಉಕ್ಕು ಉತ್ಪಾದಿಸುವ ಸೌಕರ್ಯ ಮತ್ತು ಭದ್ರಾವತಿಯ ದೊಡ್ಡ ಭಾಗವಾಗಿದೆ. ಕಾರ್ಖಾನೆಗಳ ನಗರ ಎಂಬ ಪ್ರಖ್ಯಾತಿಯನ್ನು ಹೆಚ್ಚಿಸಿದ್ದು ೧೯೩೬ರಲ್ಲಿ ಸ್ಥಾಪಿಸಲಾದ ಒಂದು ಕಾಗದ ಕಾರ್ಖಾನೆ, ಮೈಸೂರು ಕಾಗದ ಕಾರ್ಖಾನೆ.
[ಬದಲಾಯಿಸಿ] ಭೌಗೋಳಿಕ
ಭದ್ರಾವತಿಯು ಕರ್ನಾಟಕದ ಮಧ್ಯಭಾಗದಲ್ಲಿ, ಶಿವಮೊಗ್ಗ ಜಿಲ್ಲೆಯ ದಕ್ಷಿಣ-ಪೂರ್ವ ಕೋನೆಯಲ್ಲಿದೆ. ಭದ್ರಾವತಿಯು ೧೩° ೫೦' ಉ ಅಕ್ಷಾಂಶ ಹಾಗೂ ೭೫° ೪೨' ಪೂ ರೇಖಾಂಶದಲ್ಲಿದೆ. ಭದ್ರಾವತಿ ತಾಲ್ಲೂಕು ಪಶ್ಚಿಮಕ್ಕೆ ಶಿವಮೊಗ್ಗ ಜಿಲ್ಲೆಯ ಶಿವಮೊಗ್ಗ ತಾಲ್ಲೂಕಿನ ಜೊತೆಗೆ, ಉತ್ತರಕ್ಕೆ ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲ್ಲೂಕಿನ ಜೊತೆಗೆ, ಪೂರ್ವಕ್ಕೆ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲ್ಲಾಕಿನ ಜೊತೆಗೆ ಮತ್ತು ದಕ್ಷಿಣಕ್ಕೆ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲ್ಲೂಕಿನ ಜೊತೆಗೆ ಗಡಿಯನ್ಲು ಹಂಚಿಕೊಂಡಿದೆ. ಭದ್ರಾವತಿಯು ಸಮುದ್ರ ಮಟ್ಟದಿಂದ ೫೮೦ ಮಿ (೧೯೦೦ ಅಡಿ) ಮೇಲಿದೆ.
[ಬದಲಾಯಿಸಿ] ತಲುಪುವುದು ಹೇಗೆ
[ಬದಲಾಯಿಸಿ] ರಸ್ತೆ
ಬೆಂಗಳೂರಿನಿಂದ ತುಮಕೂರು, ತಿಪಟೂರು, ಅರಸೀಕೆರೆ, ಕಡೂರು, ಬೀರೂರು ಮತ್ತು ತರೀಕೆರೆ ಮೂಲಕ ಸಾಗುವ NH-206 ಹೆದ್ದಾರಿಯ ಮೂಲಕ ಭದ್ರಾವತಿಯನ್ನು ತಲುಪಬಹುದು. ಬೆಂಗಳೂರಿನಿಂದ ಶಿವಮೊಗ್ಗಕ್ಕೆ ಹೋಗುವ ಬಸ್ಸುಗಳು ಭದ್ರಾವತಿಯಲ್ಲಿಯೂ ನಿಲ್ಲಿಸುತ್ತವೆ ಮತ್ತು ಪ್ರಯಾಣ ಮುಗಿಸಲು ಸುಮಾರು ಆರು ಘಂಟೆ ಸಮಯ ತೆಗೆದುಕೊಳ್ಳುತ್ತವೆ.
[ಬದಲಾಯಿಸಿ] ರೈಲು
ಬೀರೂರು-ಭದ್ರಾವತಿ ರೈಲು ಈ ನಗರದ ಮೂಲಕ ಸಾಗುತ್ತದೆ. ಬೆಂಗಳೂರಿನಿಂದ ಶಿವಮೊಗ್ಗ ಚಾಲಿಸುವ ಹಲವಾರು ಪ್ರತಿದಿನ ರೈಲುಗಳು ಭದ್ರಾವತಿಯಲ್ಲಿ ನಿಲ್ಲುತ್ತವೆ. ಇದಲ್ಲದೆ, ಬೆಂಗಳೂರಿನಿಂದ ಬೀರೂರಿನ ತನಕ ರೈಲಿನಲ್ಲಿ ಬಂದು, ಅಲ್ಲಿಂದ ರೈಲು ಅಥವಾ ಬಸ್ಸಿನಿಂದ ಭದ್ರಾವತಿಗೆ ಬರಬಹುದು. The Birur-Bhadravathi railway line passes through the city. Many trains run daily from Bangalore to Shimoga that stop at Bhadravathi. Alternatively, one can catch a train that goes to Birur and engage another train/bus from Birur to Bhadravathi. It takes around an hour to reach Bhadravathi from Birur by bus. Recently a daily train is being run from Mysore to Shimoga which can be used to reach Bhadravathi from Mysore.
[ಬದಲಾಯಿಸಿ] Air
The nearest airport is Hubli which is at a distance of around 170 km from Bhadravathi. Hubli has daily flights from Bangalore and Belgaum. Airports at Bangalore and Mangalore are also viable alternatives that can be used to reach Bhadravathi.
[ಬದಲಾಯಿಸಿ] ಕೈಗಾರಿಕೆಗಳು
[ಬದಲಾಯಿಸಿ] ಪ್ರವಾಸೀ ತಾಣಗಳು
[ಬದಲಾಯಿಸಿ] ಪ್ರಮುಖ ವ್ಯಕ್ತಿಗಳು
[ಬದಲಾಯಿಸಿ] ಬೇರೆ ವಿವರಗಳು
ಈ ಊರು, ಭದ್ರಾ ನದಿಯ ತೀರದಲ್ಲಿದೆ. ಕಬ್ಬಿಣ, ಕಾಗದ, ಸಕ್ಕರೆ ಮತ್ತು ಹಲವು ಇತರೆ ವಸ್ತುಗಳ ದೊಡ್ಡ ದೊಡ್ಡ ಕೈಗಾರಿಕೆಗಳು ಈ ಊರಿನಲ್ಲಿ ಮನೆ ಮಾಡಿವೆ.
[ಬದಲಾಯಿಸಿ] ಹೊರಗಿನ ಸಂಪರ್ಕಗಳು