ಮಲಪ್ರಭಾ
From Wikipedia
ಮಲಪ್ರಭಾ ನದಿಯು ಕೃಷ್ಣಾ ನದಿಯ ಉಪನದಿ
ಪರಿವಿಡಿ |
[ಬದಲಾಯಿಸಿ] ಉಗಮ
ಮಲಪ್ರಭಾ ನದಿಯು ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಜಾಂಬೋಟಿ ಗ್ರಾಮದಿಂದ ಪಶ್ಚಿಮಕ್ಕೆ ೧೬ ಕಿಲೊಮೀಟರ ದೂರದಲ್ಲಿ, ಸಮುದ್ರ ಮಟ್ಟದಿಂದ ೭೯೨ ಮೀಟರ ಎತ್ತರದಲ್ಲಿ ಸಹ್ಯಾದ್ರಿ ಪರ್ವತಶ್ರೇಣಿಯಲ್ಲಿ ಹುಟ್ಟುತ್ತದೆ. ೩೦೪ ಕಿಲೊಮೀಟರುಗಳವರೆಗೆ ಹರಿದು ಕೃಷ್ಣಾ ನದಿಯನ್ನು, ಸಮುದ್ರಮಟ್ಟದಿಂದ ೪೮೮ ಮೀಟರ ಎತ್ತರದಲ್ಲಿರುವ ಕೂಡಲ ಸಂಗಮದಲ್ಲಿ ಕೂಡುತ್ತದೆ. ಸಂಗಮದ ವರೆಗೆ ಇದರ ಜಲಾನಯನ ಪ್ರದೇಶದ ವಿಸ್ತೀರ್ಣ ೧೧,೫೪೯ ಚದುರು ಕಿಲೊಮೀಟರುಗಳು.
[ಬದಲಾಯಿಸಿ] ಉಪನದಿಗಳು
ಬೆಣ್ಣಿಹಳ್ಳ, ಹಿರೆಹಳ್ಳ, ತುಪರಿಹಳ್ಳ ಹಾಗು ತಾಸಹಳ್ಳಗಳು ಮಲಪ್ರಭಾ ನದಿಯನ್ನು ಸಂಗಮಿಸುವ ಕೆಲವು ಪ್ರಮುಖ ಹಳ್ಳಗಳು.
[ಬದಲಾಯಿಸಿ] ರೇಣುಕಾಸಾಗರ
ಮಲಪ್ರಭಾ ನದಿಗೆ ಅಡ್ಡಲಾಗಿ ಸವದತ್ತಿ ತಾಲೂಕಿನ ಮುನವಳ್ಳಿ ಗ್ರಾಮದ ಹತ್ತಿರ ನವಿಲುತೀರ್ಥ ದಲ್ಲಿ ಕಲ್ಲಿನ ಬಾಂಧಕಾಮಿನ ಆಣೆಕಟ್ಟು ಕಟ್ಟಲಾಗಿದೆ. ಈ ಆಣೆಕಟ್ಟು ೧೫೪.೫೩ ಮೀಟರ ಉದ್ದವಿದ್ದು ೪೦.೨೩ ಮೀಟರ ಎತ್ತರವಿದೆ. ಆಣೆಕಟ್ಟಿನ ಸಂಗ್ರಹ ಸಾಮರ್ಥ್ಯವು ೩೦.೨೬ ಘನ ಮೀಟರಗಳಿಷ್ಟಿದೆ. ಆಣೆಕಟ್ಟಿನ ಹಿನ್ನೀರಿನಲ್ಲಿ ೧೩,೫೭೮ ಹೆಕ್ಟೇರುಗಳಷ್ಟು ಪ್ರದೇಶವು ಮುಳುಗಡೆಯಾಗಿದೆ. ಈ ಜಲಾಶಯಕ್ಕೆ ರೇಣುಕಾ ಜಲಾಶಯವೆಂದು ಕರೆಯಲಾಗುತ್ತದೆ.
[ಬದಲಾಯಿಸಿ] ಕಾಲುವೆಗಳು
ಮಲಪ್ರಭಾ ಆಣೆಕಟ್ಟಿನ ಎಡದಂಡೆಯ ಕಾಲುವೆಯು ೧೫೦ ಕಿಮೀ ಉದ್ದವಿದ್ದು, ಇದರಿಂದ ೫೩,೧೩೬ ಹೆಕ್ಟೇರ್ ಜಮೀನಿಗೆ ನೀರಾವರಿಯಾಗುತ್ತದೆ. ಉತ್ತರ ಕರ್ನಾಟಕದ ನೀರಾವರಿ ಯೋಜನೆಗಳ ರೂವಾರಿಯಾದ ಇಂಜನಿಯರ ಎಸ್.ಜಿ.ಬಾಳೆಕುಂದ್ರಿಯವರ ಗೌರವಾರ್ಥ ಈ ಕಾಲುವೆಗೆ ಬಾಳೆಕುಂದ್ರಿ ಕಾಲುವೆ ಎಂದು ಹೆಸರಿಡಲಾಗಿದೆ.
ಬಲದಂಡೆಯು ೧೪೨ ಕಿಮೀ ಉದ್ದವಿದ್ದು ೧,೩೯,೯೨೧ ಹೆಕ್ಟೇರ್ ಭೂಮಿಗೆ ನೀರುಣ್ಣಿಸುತ್ತದೆ.
ರೇಣುಕಾ ಜಲಾಶಯ ದಿಂದ ಹುಬ್ಬಳ್ಳಿ ಹಾಗು ಧಾರವಾಡ ನಗರಗಳಿಗೆ ನೀರಿನ ಪೂರೈಕೆಯಾಗುತ್ತದೆ.
[ಬದಲಾಯಿಸಿ] ಯಾತ್ರಾಸ್ಥಳಗಳು
ರೇಣುಕಾ ಜಲಾಶಯಕ್ಕೆ ಸುಮಾರು ೧೫ ಕಿಮೀ ದೂರದಲ್ಲಿ ಹೆಸರಾಂತ ಎಲ್ಲಮ್ಮ ನ ಗುಡಿ ಇರುತ್ತದೆ. ಕರ್ನಾಟಕ ಹಾಗು ಮಹಾರಾಷ್ಟ್ರದ ಲಕ್ಷಾಂತರ ಜನರು ಎಲ್ಲಮ್ಮ ದೇವಿಯ ಭಕ್ತರಿರುತ್ತಾರೆ. ಪ್ರತಿ ವರ್ಷ ಭಾರತ ಹುಣ್ಣಿಮೆ ದಿನ ಎಲ್ಲಮ್ಮನ ಜಾತ್ರೆ ಯಾಗುತ್ತದೆ.
ಹತ್ತಿರದಲ್ಲಿಯೆ ಸೊಗಲ ಗ್ರಾಮವಿದ್ದು ಪುರಾತನ ಸೋಮೇಶ್ವರ ಗುಡಿ ಯಿಂದಾಗಿ ಹಾಗು ಮನೋಹರವಾದ, ಚಿಕ್ಕ ಜಲಪಾತಕ್ಕಾಗಿ ಆಕರ್ಷಕವಾದ ಯಾತ್ರಾಸ್ಥಳ ಹಾಗು ಪ್ರವಾಸಿ ತಾಣವಾಗಿದೆ.