ರಾಹುಲ್ ದ್ರಾವಿಡ್
From Wikipedia
ರಾಹುಲ್ ಶರದ್ ದ್ರಾವಿಡ್ (ಜನನ: ಜನವರಿ ೧೧, ೧೯೭೩) - ಭಾರತ ಕ್ರಿಕೆಟ್ ತಂಡದ ಆಟಗಾರರೊಲ್ಲಬ್ಬರು ಮತ್ತು ಪ್ರಸ್ತುತ ತಂಡದ ನಾಯಕ.
[ಬದಲಾಯಿಸಿ] ಜನನ ಮತ್ತು ಬಾಲ್ಯ
ರಾಹುಲ್ ದ್ರಾವಿಡ್ ಮಧ್ಯಪ್ರದೇಶದ ಇಂದೋರಿನಲ್ಲಿ , ೧೯೭೩ರ ಜನವರಿ ೧೧ರಂದು ಜನಿಸಿದರು. ಬೆಂಗಳೂರಿನ ಸೇಂಟ್ ಜೋಸೆಫ್ ಬಾಯ್ಸ್ ಹೈ ಸ್ಕೂಲ್‌ನಲ್ಲಿ. ಅಡ್ಡ ಹೆಸರು - 'ಜ್ಯಾಮ್ಮಿ'.
[ಬದಲಾಯಿಸಿ] ಕ್ರಿಕೆಟ್
೧೯೯೬ರಿಂದ ಭಾರತ ಕ್ರಿಕೆಟ್ ತಂಡದ ಸದಸ್ಯರಾಗಿರುವ ರಾಹುಲ್ ದ್ರಾವಿಡ್ ಬಲಗೈ ಬ್ಯಾಟ್ಸ್‌ಮನ್. ಕೆಕಿ ತಾರಾಪೊರ್‌ರವರ ಬಳಿ ಅಭ್ಯಾಸ ಮಾಡಿದ ಇವರು ಬ್ಯಾಟಿಂಗ್‌ನ ಅತ್ಯುತ್ತಮ ತಾಂತ್ರಿಕತೆಗೆ ಹೆಸರುವಾಸಿ. ಔಟಾಗದೆಯೇ ತೀಕ್ಷ್ಣವಾಗಿ ಬ್ಯಾಟಿಂಗ್ ಮಾಡುವ ಇವರಿಗೆ ಸುದ್ದಿ ಮಾಧ್ಯಮದವರಿಂದ "ದ ವಾಲ್" (ಗೋಡೆ) ಎಂದೂ ಬಣ್ಣಿಸಲಾಗುತ್ತದೆ. ಇವರ ಖಾತೆಯಲ್ಲಿ ಈಗಾಗಲೆ ಟೆಸ್ಟ್ ಕ್ರಿಕೆಟ್‌ನ ೧೭ ಶತಕಗಳು (ಸರಾಸರಿ ೫೮ರಲ್ಲಿ) ಇವೆ. ಒಂದು ದಿನದ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಇವರ ಸರಾಸರಿ ೩೯ (ಸ್ಟ್ರೈಕ್ ರೇಟ್ - ೬೯). ಇವರು ಆಗಿಂದಾಗ್ಗೆ ತಂಡಕ್ಕೆ ವಿಕೆಟ್ ಕೀಪಿಂಗ್ ಕೂಡ ಮಾಡುತ್ತಿದ್ದರು.
ಭಾರತ ಹಾಗೂ ಕರ್ನಾಟಕಕ್ಕೆ ಆಡುವುದಲ್ಲದೆ ದ್ರಾವಿಡ್ ಕೆಂಟ್ ಹಾಗೂ ಸ್ಕಾಟ್ಲ್ಯಾಂಡ್‌ಗೆ ಕೂಡ ಆಡಿದ್ದಾರೆ. ಇವರ ಚೊಚ್ಚಲ ಟೆಸ್ಟ್ ಇಂಗ್ಲೆಂಡ್‌ನ ಲಾರ್ಡ್ಸ್ ಮೈದಾನದಲ್ಲಿ ನಡೆದ ಭಾರತದ ೧೯೯೬ರ ಇಂಗ್ಲೆಂಡ್ ಪ್ರವಾಸದ ಎರಡನೆಯ ಟೆಸ್ಟ್ ಪಂದ್ಯ. ಒಂದು ದಿನದ ಅಂತಾರಾಷ್ಟ್ರೀಯ ಪಂದ್ಯಗಳಿಗೆ ಅದೇ ವರ್ಷ ಸಿಂಗಪೂರಿನಲ್ಲಿ ನಡೆದ ಸಿಂಗರ್ ಕಪ್‌ನ ಶ್ರೀಲಂಕಾ ವಿರುದ್ಧದ ಪಂದ್ಯದಿಂದ ಪಾದಾರ್ಪಣೆ ಮಾಡಿದರು. ವಿಸ್ಡನ್ ಸಂಸ್ಥೆಯು ಇವರನ್ನು ೨೦೦೦ನೆ ವರ್ಷದಲ್ಲಿ, ವರ್ಷದ ಕ್ರಿಕೆಟಿಗನೆಂದು ಪುರಸ್ಕರಿಸಿತು.
೨೦೦೪ ರಲ್ಲಿ ಇವರಿಗೆ ಭಾರತ ಸರಕಾರವು ಪದ್ಮಶ್ರೀ ಪ್ರಶಸ್ತಿ ಕೊಟ್ಟು ಗೌರವಿಸಿತು. ೨೦೦೪, ಸೆಪ್ಟೆಂಬರ್ ೭ರಂದು ಇವರಿಗೆ ಐಸಿಸಿಯು ವರ್ಷದ ಆಟಗಾರನೆಂದೂ, ವರ್ಷದ ಅತ್ಯುತ್ತಮ ಟೆಸ್ಟ್ ಆಟಗಾರನೆಂದೂ ಗೌರವಿಸಿತು. ೨೦೦೪ರಲ್ಲಿ ಇವರು ಭಾರತ ತಂಡದ ಉಪನಾಯಕರಾಗಿದ್ದರು. ಕೆಲವೊಮ್ಮೆ ಸೌರವ್ ಗಂಗೂಲಿ ಇಲ್ಲದಿರುವಾಗ ಭಾರತ ತಂಡದ ನಾಯಕತ್ವ ವಹಿಸಿದ್ದರು.
೨೦೦೫ರಲ್ಲಿ ಭಾರತದ ನಾಯಕತ್ವವಹಿಸಿಕೊಂಡ ಇವರು, ಶ್ರೀಲಂಕಾ ವಿರುದ್ಧ ಸರಣಿ ಜಯ ಪಡೆದು, ದಕ್ಷಿಣ ಆಫ್ರಿಕಾ ತಂಡದ ವಿರುದ್ಧ ಭಾರತದಲ್ಲಿ ನಡೆದ ಸರಣಿಯನ್ನು ೨-೨ರಿಂದ ಡ್ರಾ ಮಾಡಿಕೊಳ್ಳುವಲ್ಲಿ ಯಶಸ್ವಿಯಾದರು.