ವೈ.ಚಂದ್ರಶೇಖರ ಶಾಸ್ತ್ರಿ
From Wikipedia
ವೈ. ಚಂದ್ರಶೇಖರ ಶಾಸ್ತ್ರಿ ಗಳು ಬಳ್ಳಾರಿ ಜಿಲ್ಲೆಯ ಹೊಳಲು ಗ್ರಾಮದಲ್ಲಿ ಜನಿಸಿದರು. ಗದಗದಲ್ಲಿ ಆರಂಭದ ಶಿಕ್ಷಣ ಮುಗಿಸಿ ಕಾಶಿ, ಕೋಲಕಾಟಾಗಳಲ್ಲಿ ಸಂಸ್ಕೃತ ಶಿಕ್ಷಣ ಪಡೆದು ‘ ವ್ಯಾಕರಣ ತಿರ್ಥ’ ಪದವಿ ಪಡೆದರು. ನಂತರ ಯಾದಗಿರಿಯ ‘ ಶಂಕರ ಸಂಸ್ಕೃತ ಕಾಲೇಜಿ’ನಲ್ಲಿ , ಅಧ್ಯಾಪಕರಾಗಿ, ಹುಬ್ಬಳ್ಳಿಯ ‘ ಶ್ರೀ ಜಗದ್ಗುರು ಗಂಗಾಧರ ಕಾಲೇಜಿ’ ನಲ್ಲಿ ಪ್ರಿನ್ಸಿಪಾಲರಾಗಿ ಸೇವೆ ಸಲ್ಲಿಸಿದರು.
ಚಂದ್ರಶೇಖರ ಶಾಸ್ತ್ರಿಗಳ ಕೃತಿಗಳು: ಬಸವತತ್ವ ರತ್ನಾಕರ, ಚಾಣಕ್ಯನೀತಿ ದರ್ಪಣ, ರೇಣುಕಾವಿಜಯ, ಸಿದ್ಧೇಶ್ವರ ವಚನ, ರಾಜಗಿರಿ, ಮದನಮೋಹನ ಮಾಳವೀಯ ಚರಿತೆ
೧೯೪೦ರಲ್ಲಿ ಧಾರವಾಡದಲ್ಲಿ ಜರುಗಿದ ೨೫ ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.