ಶತಮಾನ
From Wikipedia
ಶತಮಾನ - ನೂರು ವರ್ಷಗಳ ಅವಧಿಗೆ ಶತಮಾನ ಎನ್ನಲಾಗುತ್ತದೆ. ಗ್ರೆಗೋರಿಯನ್ ಕ್ಯಾಲೆಂಡರ್ ಪ್ರಕಾರದಲ್ಲಿ ಈಗ ೨೧ನೇ ಶತಮಾನ ನಡೆಯುತ್ತಿದೆ. ಈ ಶತಮಾನವು ೨೦೦೧ನೇ ವರ್ಷದಲ್ಲಿ ಪ್ರಾರಂಭವಾಗಿದ್ದು, ೨೧೦೦ನೇ ವರ್ಷಕ್ಕೆ ಕೊನೆಗೊಳ್ಳುತ್ತದೆ. ಅದೇ ರೀತಿ ಇಪ್ಪತ್ತನೆಯ ಶತಮಾನವು ೧೯೦೧ರಲ್ಲಿ ಪ್ರಾರಂಭಗೊಂಡು, ೨೦೦೦ರಲ್ಲಿ ಕೊನೆಗೊಂಡಿತು.
ಹತ್ತು ಶತಮಾನಗಳ ಅವಧಿಗೆ "ಸಾವಿರ ವರ್ಷಾವಧಿ" ಅಥವಾ "ಸಹಸ್ರ ವರ್ಷಾವಧಿ" (ಮಿಲ್ಲೇನ್ನಿಯಂ) ಎನ್ನುವರು.