ಶಿವರಾಜ್‍ಕುಮಾರ್
From Wikipedia
ಶಿವರಾಜ್‍ಕುಮಾರ್ ಕನ್ನಡದ ಪ್ರಸಿದ್ಧ ಚಿತ್ರನಟ. ಕನ್ನಡ ಚಿತ್ರಗಂಗದ ಮೇರುನಟ ಡಾ. ರಾಜ್‍ಕುಮಾರ್ ಅವರ ಮಗ. ೧೯೮೬ನೇ ಇಸವಿಯಲ್ಲಿ ಆನಂದ್ ಚಿತ್ರದ ಮೂಲಕ ಚಿತ್ರರಂಗ ಪ್ರವೇಶ.
ಅಭಿನಯದ ಮೊದಲ ಮೂರೂ ಚಿತ್ರಗಳೂ ಶತದಿನೋತ್ಸ್ವದ ಯಶಸ್ಸು ಪಡೆದದ್ದರಿಂದ 'ಹ್ಯಾಟ್ರಿಕ್ ಹೀರೋ' ಎಂಬ ಬಿರುದಿಗೂ, ಅತ್ಯುತ್ತಮ ನೃತ್ಯಗಾರ ಎಂಬ ವಿಮರ್ಶಕರ ಅಭಿಪ್ರಾಯದ ಮೇರೆಗೆ 'ನಾಟ್ಯಸಾರ್ವಭೌಮ' ಎಂಬ ಬಿರುದಿಗೂ ಪಾತ್ರರಾಗಿರುವರು. ಇವರು ಆಸೆಗೊಬ್ಬ ಮೀಸೆಗೊಬ್ಬ, ಮೋಡದ ಮರೆಯಲ್ಲಿ, ಅಂಡಮಾನ್, ಸಾರ್ವಭೌಮ ಮುಂತಾದ ಹಲವಾರು ಚಿತ್ರಗಳಲ್ಲಿ ಹಿನ್ನೆಲೆಗಾಯನ ಕೂಡ ಮಾಡಿದ್ದಾರೆ.
ಜನ್ಮದಿನ - ಜುಲೈ ೧೪
ಶಿವರಾಜ್‍ಕುಮಾರ್ ಅವರ ಪತ್ನಿಯ ಹೆಸರು ಗೀತಾ ಶಿವರಾಜ್‍ಕುಮಾರ್. ಇವರ ಪುತ್ರಿಯ ಹೆಸರು ನಿವೇದಿತಾ. ಈಕೆ, ಅಂಡಮಾನ್ ಚಿತ್ರದಲ್ಲಿ ನಟಿಸಿದ್ದಾಳೆ.
ಇವರ ಕಿರಿಯ ಸಹೋದರರಾದ ರಾಘವೇಂದ್ರ ರಾಜ್‍ಕುಮಾರ್ ಮತ್ತು ಪುನೀತ್ ರಾಜ್‍ಕುಮಾರ್ ಕೂಡ ಕನ್ನಡ ಚಿತ್ರಂಗದ ನಾಯಕನಟರುಗಳು.
ಪರಿವಿಡಿ |
[ಬದಲಾಯಿಸಿ] ಪ್ರಶಸ್ತಿಗಳು
[ಬದಲಾಯಿಸಿ] ರಾಜ್ಯ ಪ್ರಶಸ್ತಿಗಳು
- ಓಂ - ೧೯೯೫ - ಅತ್ಯುತ್ತಮ ನಟ ರಾಜ್ಯಪ್ರಶಸ್ತಿ
- ಹೃದಯ ಹೃದಯ - ೧೯೯೯ - ಅತ್ಯುತ್ತಮ ನಟ ರಾಜ್ಯಪ್ರಶಸ್ತಿ
- ಚಿಗುರಿದ ಕನಸು - ೨೦೦೩ - ಅತ್ಯುತ್ತಮ ನಟ ರಾಜ್ಯಪ್ರಶಸ್ತಿ
[ಬದಲಾಯಿಸಿ] ಉಜ್ವಲ ಪ್ರಶಸ್ತಿ
- ಆನಂದ್ - ೧೯೮೬
- ಭೂಮಿತಾಯಿಯ ಚೊಚ್ಚಲ ಮಗ - ೧೯೯೮
[ಬದಲಾಯಿಸಿ] ಚಿತ್ರ ರಸಿಕರ ಸಂಘ ಪ್ರಶಸ್ತಿ
- ಮಿಡಿದ ಶ್ರುತಿ - ೧೯೯೨
- ಜನುಮದ ಜೋಡಿ - ೧೯೯೬
- ಎ.ಕೆ.೪೭ - ೧೯೯೯
[ಬದಲಾಯಿಸಿ] ಫಿಲಮ್‍ಫೇರ್ ಪ್ರಶಸ್ತಿ
- ಓಂ - ೧೯೯೫
- ನಮ್ಮೊರ ಮಂದಾರ ಹೂವೆ - ೧೯೯೬
- ಎ.ಕೆ.೪೭ - ೧೯೯೯
[ಬದಲಾಯಿಸಿ] ಹೀರೋಹೋಂಡ ಎಕ್ಸ್ಪ್ರೆಸ್ ಪ್ರಶಸ್ತಿ
- ಓಂ - ೧೯೯೫
- ಜನುಮದ ಜೋಡಿ - ೧೯೯೬
- ಎ.ಕೆ.೪೭ - ೧೯೯೯
[ಬದಲಾಯಿಸಿ] ಆರ್ಯಭಟ ಪ್ರಶಸ್ತಿ
- ಜನುಮದ ಜೋಡಿ - ೧೯೯೬
[ಬದಲಾಯಿಸಿ] ಸ್ಕ್ರೀನ್ ಅವಾರ್ಡ್ಸ್
- ನಮ್ಮೊರ ಮಂದಾರ ಹೂವೆ - ೧೯೯೬
[ಬದಲಾಯಿಸಿ] ಎಸ್.ಐ.ಸಿ.ಎ. ವಿಶೇಷ ಜ್ಯೂರಿ ಪ್ರಶಸ್ತಿ
- ತವರಿಗೆ ಬಾ ತಂಗಿ - ೨೦೦೨
- ಚಿಗುರಿದ ಕನಸು - ೨೦೦೪
[ಬದಲಾಯಿಸಿ] ಹಲೋ ಗಾಂಧಿನಗರ ಪ್ರಶಸ್ತಿ
- ಚಿಗುರಿದ ಕನಸು - ೨೦೦೪
[ಬದಲಾಯಿಸಿ] ಈ ಟಿವಿ ವಾಟಿಕಾ ಪ್ರಸಸ್ತಿ
- ಜೋಗಿ - ೨೦೦೫
[ಬದಲಾಯಿಸಿ] ಮೈಲಿಗಲ್ಲುಗಳು
- ೧ನೇ ಚಿತ್ರ: ಆನಂದ್ (೧೯೮೬)
- ೨೫ನೇ ಚಿತ್ರ: ಮನಮಿಡಿಯಿತು (೧೯೯೫)
- ೫೦ನೇ ಚಿತ್ರ: ಏ.ಕೆ. ೪೭ (೧೯೯೯)
- ೭೫ನೇ ಚಿತ್ರ: ಶ್ರೀರಾಮ್ (೨೦೦೩)
[ಬದಲಾಯಿಸಿ] ಅಭಿನಯಿಸಿದ ಚಲನಚಿತ್ರಗಳು
- ಆನಂದ್
- ರಥಸಪ್ತಮಿ
- ಮನ ಮೆಚ್ಚಿದ ಹುಡುಗಿ
- ಶಿವಮೆಚ್ಚಿದ ಕಣ್ಣಪ್ಪ
- ಸಂಯುಕ್ತ
- Krishnaleele
- Simhadamari
- Devaramaga
- Bhoomi Thayiya Chochhala Maga
- ರಣರಂಗ
- ಶಿವಸೈನ್ಯ
- ಅಣ್ಣಾವ್ರ ಮಕ್ಕಳು
- ಆದಿತ್ಯ
- ಮುತ್ತಣ್ಣ
- ಆಸೆಗೊಬ್ಬ ಮೀಸೆಗೊಬ್ಬ
- ದೊರೆ
- ಮಿಡಿದಶೃತಿ
- ಪುರುಷೋತ್ತಮ
- ಚಿರಬಾಂಧವ್ಯ
- ಮೋಡದ ಮರೆಯಲ್ಲಿ
- ಗಂಧದಗುಡಿ ಭಾಗ ೨
- ಸವ್ಯಸಾಚಿ
- ಸಮರ
- ಮನ ಮಿಡಿಯಿತು
- ಗಲಾಟೆ ಅಳಿಯಂದ್ರು
- ಓಂ
- ನಮ್ಮೂರ ಮಂದಾರ ಹೂವೆ
- ಭೂಮಿತಾಯಿಯ ಚೊಚ್ಚಿಲ ಮಗ
- ಅಮ್ಮಾವ್ರ ಗಂಡ
- ಕುರುಬನ ರಾಣಿ
- ಗಂಡುಗಲಿ
- ಏ.ಕೆ.೪೭
- ಅಂಡಮಾನ್
- ಜೋಡಿಹಕ್ಕಿ
- ಹೃದಯ ಹೃದಯ
- ಜನುಮದ ಜೋಡಿ
- ಹಗಲುವೇಷ
- ನಂಜುಂಡಿ
- ತವರಿಗೆ ಬಾ ತಂಗಿ
- ಕೋದಂಡರಾಮ
- ಚಿಗುರಿದ ಕನಸು
- ಶ್ರೀರಾಮ್
- Ninne Preethisuve
- Smile
- Valmiki
- ಸಾರ್ವಭೌಮ
- ರಿಷಿ
- Don
- ಜೋಗಿ
- ಅಣ್ಣ ತಂಗಿ
- Thayiya Madilu
- ಅಶೋಕ
- ಗಂಡುಗಲಿ ಕುಮಾರರಾಮ