ಶ್ರೀರಂಗ
From Wikipedia
ಆದ್ಯ ರಂಗಾಚಾರ್ಯ - ಕನ್ನಡದ ಖ್ಯಾತ ವಿದ್ವಾಂಸ, ನಾಟಕಕಾರ ಮತ್ತು ಸಾಹಿತಿ. ಇವರ "ಕಾಳಿದಾಸ" ಎಂಬ ಕೃತಿಗೆ ೧೯೭೧ರ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರಕಿದೆ.
ಆದ್ಯ ರಂಗಾಚಾರ್ಯರ ಮೂಲ ಹೆಸರು ಆರ್.ವಿ.ಜಾಗೀರದಾರ.ಇವರು ೨೬ ಸಪ್ಟಂಬರ ೧೯೦೪ ರಂದು ಇಂಡಿ ತಾಲೂಕಿನ ಅಗರಖೇಡದಲ್ಲಿ ಜನಿಸಿದರು.ಲಂಡನ್ನಿನಲ್ಲಿಯ School of Oriental Studies ದಿಂದ ಎಮ್.ಏ.ಪದವಿಯನ್ನು ಪಡೆದ ಬಳಿಕ ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ೧೯೩೮ರಲ್ಲಿ ಸಂಸ್ಕೃತ ಪ್ರಾಧ್ಯಾಪಕರಾಗಿ ಸೇವೆ ಪ್ರಾರಂಭಿಸಿದರು ಹಾಗು ೧೮ ವರ್ಷಗಳ ಕಾಲ ಅಲ್ಲಿ ದುಡಿದರು. ಇವರು "ಶ್ರೀ ರಂಗ" ಎಂಬ ಕಾವ್ಯನಾಮದಿಂದಲೂ ಪ್ರಸಿಧ್ಧರಾಗಿದ್ದಾರೆ.
ಭರತನ ನಾಟ್ಯಶಾಸ್ತ್ರ ಇವರ ಇನ್ನೊಂದು ಪ್ರಸಿಧ್ಧ ಕೃತಿ.
" ಹರಿಜನ್ವಾರ,ಸಂಸಾರಿಗ ಕಂಸ,ಪ್ರಪಂಚ ಪಾಣಿಪತ್ತು,ಜರಾಸಂಧಿ,ವೈದ್ಯರಾಜ,ದರಿದ್ರನಾರಾಯಣ,ನರಕದಲ್ಲಿ ನರಸಿಂಹ,ಗೆಳೆಯ ನೀನು ಹಳೆಯ ನಾನು, ಸಂಧ್ಯಾಕಾಲ,ಕತ್ತಲೆ ಬೆಳಕು" ಇವು ೧೯೫೯ನೆಯ ಇಸವಿಗಿಂತ ಮೊದಲು ಶ್ರೀರಂಗರು ಬರೆದ ನಾಟಕಗಳು. " ಕತ್ತಲೆ ಬೆಳಕು" ನಾಟಕದ ನಂತರ ಅವರ ಬರವಣಿಗೆಯಲ್ಲಿ ಹೊಸ ಬದಲಾವಣೆ ಬಂದಿತು." ದಾರಿ ಯಾವುದಯ್ಯಾ ವೈಕುಂಠಕೆ?,ರಂಗಭಾರತ, ಸ್ವರ್ಗಕ್ಕೆ ಮೂರೆ ಬಾಗಿಲು " ಇವು ೧೯೫೯ರ ನಂತರದ ಅವರ ಶ್ರೇಷ್ಠ ನಾಟಕಗಳು.ಅವರ ನಾಟಕಗಳನ್ನು ಹೆಚ್ಚಾಗಿ ಕಲಾವಿಲಾಸಿ ನಾಟಕಕಾರರು ಆಡುತ್ತಲಿದ್ದಾರೆ." ದಾರಿ ಯಾವುದಯ್ಯಾ ವೈಕುಂಠಕೆ?" ನಾಟಕವು ಬಿ.ವಿ. ಕಾರಂತರಿಂದ ರಂಗದ ಮೇಲೆ ತರಲ್ಪಟ್ಟಿದೆ.
ನಾಟಕಗಳನ್ನಲ್ಲದೆ ಶ್ರೀರಂಗರು ಹರಟೆಗಳನ್ನು ಹಾಗು ಕಾದಂಬರಿಗಳನ್ನು ಸಹ ಬರೆದಿದ್ದಾರೆ.ಇವರ ಕಾದಂಬರಿಗಳಲ್ಲಿ ಬರುವ ಪ್ರಜ್ಞಾಪ್ರವಾಹ ತಂತ್ರವು ಕನ್ನಡ ಕಾದಂಬರಿಗಳಲ್ಲಿ ವಿಶಿಷ್ಟವಾದದ್ದಾಗಿದೆ.ಭರಮಪ್ಪನ ಭೂತ,ವಿಶ್ವಾಮಿತ್ರನ ಸೃಷ್ಟಿ, ಕುಮಾರ ಸಂಭವ, ಅನಾದಿ ಇವು ಶ್ರೀರಂಗರ ಕಾದಂಬರಿಗಳು. ಇವರು " ಆಹ್ವಾನ" ಎನ್ನುವ ಕವನ ಸಂಕಲನವನ್ನೂ ಸಹ ರಚಿಸಿದ್ದಾರೆ. ೧೯೫೪ರಲ್ಲಿ ರಾಯಚೂರಿನಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಶ್ರೀರಂಗರು ಅಧ್ಯಕ್ಷರಾಗಿದ್ದರು.
ಹೆಸರಾಂತ ಭಾರತೀಯ ಆಂಗ್ಲ ಲೇಖಕಿ ಶಶಿ ದೇಶಪಾಂಡೆ ಶ್ರೀರಂಗರ ಮಗಳು. ೧೯೮೪ರಲ್ಲಿ ಶ್ರೀರಂಗರು ಬೆಂಗಳೂರಿನಲ್ಲಿ ನಿಧನರಾದರು.
ಟೆಂಪ್ಲೇಟ್ ದೊಡ್ಡದಾಗಿರುವುದರಿಂದ ಇನ್ನು ಮುಂದೆ ಸಾಹಿತಿಗಳು ಟೆಂಪ್ಲೇಟನ್ನು ಬಳಸಲಾಗುವುದಿಲ್ಲ. ಈ ಟೆಂಪ್ಲೇಟ್ ಲೇಖನವೊಂದರಲ್ಲಿ ನಿಮಗೆ ಕಂಡುಬಂದಲ್ಲಿ ಲೇಖನ ಪುಟದಿಂದ {{ಸಾಹಿತಿಗಳು}}ಎಂಬ ಸೇರ್ಪಡೆಯನ್ನು ತೆಗೆದುಹಾಕಿ.