ಸಿಂಧನೂರು
From Wikipedia

ಸಿಂಧನೂರು ನಗರ ಸಿಂಧನೂರು ತಾಲ್ಲೂಕಿನ ಕೇಂದ್ರವಾಗಿದ್ದು, ರಾಯಚೂರು ಜಿಲ್ಲೆಯ ಪ್ರಮುಖ ವಾಣಿಜ್ಯ ಕೇಂದ್ರವಾಗಿದೆ. ತಾಲ್ಲೂಕಿನ ಹೆಚ್ಚಿನ ಕೃಷಿ ಭೂಮಿಯು ತುಂಗಭದ್ರಾ ಎಡದಂಡೆ ಕಾಲುವೆಯ ನೀರಾವರಿ ಪ್ರದೇಶದ ವ್ಯಾಪ್ತಿಗೆ ಬರುತ್ತದೆ. ಇಲ್ಲಿ ನೀರಾವರಿಯ ಸೌಕರ್ಯ ವರ್ಷದ ಎರಡೂ ಬೆಳಗಳಿಗೆ ಲಭ್ಯವಾಗಿ ಭತ್ತವನ್ನು ಎಥೇಚ್ಛವಾಗಿ ಬೆಳೆಯಲಾಗುತ್ತದೆ. ಆದ್ದರಿಂದ ಈ ತಾಲ್ಲೂಕನ್ನು ಭತ್ತದ ಖಣಜ ಎಂದು ಕರೆಯಲಾಗುತ್ತದೆ. 2001 ನೇ ಜನಗಣತಿಯ ಪ್ರಕಾರ ತಾಲ್ಲೂಕಿನ ಜನಸಂಖ್ಯೆಯು 360164 ಇದ್ದು ಸಾಕ್ಷರತೆ ಪ್ರಮಾಣ ಶೇ. 50.6 ರಷ್ಟಿದೆ. ತಾಲ್ಲೂಕಿನ ವಿಸ್ತೀರ್ಣ 1567.70 ಚದರ ಕಿ.ಮೀ. ಇದೆ.
ಪರಿವಿಡಿ |
[ಬದಲಾಯಿಸಿ] ಭೌಗೋಳೀಕ ಲಕ್ಷಣಗಳು
ತಾಲ್ಲೂಕಿನ ವ್ಯಾಪ್ತಿಯ ಬಹುತೇಕ ಕೃಷಿ ಭೂಮಿಯು ಕಪ್ಪು ಮಣ್ಣಿನಿಂದ ಕೂಡಿದ್ದು, ಫಲವತ್ತಾಗಿದೆ. ಭೂಮಿಯು ಸಮತಟ್ಟಾಗಿದ್ದು, ಭತ್ತ ಬೆಳೆಯಲು ಯೋಗ್ಯವಾಗಿದೆ.
[ಬದಲಾಯಿಸಿ] ರಾಜಕೀಯ
- ಶ್ರೀ ಕೆ. ವಿರುಪಾಕ್ಷಪ್ಪ, ಸಂಸದರು, ಕೊಪ್ಪಳ ಕ್ಷೇತ್ರ ಇವರು ಸಿಂಧನೂರಿನವರಾಗಿದ್ದು, ಕಾಂಗ್ರೆಸ್ ಪಕ್ಷದಿಂದ ಚುನಾಯಿತರಾಗಿದ್ದಾರೆ.
- ಶ್ರೀ ಹಂಪನಗೌಡ ಬಾದರ್ಲಿ, ಶಾಸಕರು, ಸಿಂಧನೂರು ವಿಧಾನ ಸಭಾ ಕ್ಷೇತ್ರ.
- ಶ್ರೀ ರಾಜಶೇಖರ್ ಪಾಟೀಲ್, ಅಧ್ಯಕ್ಷರು, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ, ಸಿಂಧನೂರು ಇವರು ಕರ್ನಾಟಕ ರಾಜ್ಯ ಕೃಷಿ ಮಾರಾಟ ಮಂಡಳಿಯಲ್ಲಿ ರಾಯಚೂರು ಜಿಲ್ಲೆಯನ್ನು ಪ್ರತಿನಿಧಿಸುತ್ತಿದ್ದಾರೆ.
[ಬದಲಾಯಿಸಿ] ವಿಶೇಷತೆಗಳು
- ಒಂದು ಮೂಲದ ಪ್ರಕಾರ ಇಡೀ ದೇಶದಲ್ಲಿಯೇ ಅತಿ ಹೆಚ್ಚು ಟ್ರ್ಯಾಕ್ಟರ್ ಗಳು ಮಾರಾಟವಾಗುವ ಕೇಂದ್ರವಾಗಿದೆ.
- ಇಲ್ಲಿ ಉತ್ಕೃಷ್ಟ ಗುಣಮಟ್ಟದ ವಿದೇಶಗಳಿಗೆ ರಫ್ತಾಗುವ ಸೋನಾಮಸೂರಿ ಹಾಗೂ ಬಾಸುಮತಿ ಅಕ್ಕಿಯನ್ನು ಬೆಳೆಯಲಾಗುತ್ತದೆ.
[ಬದಲಾಯಿಸಿ] ಬಾಹ್ಯ ಸಂಪರ್ಕ
- ಸಿಂಧನೂರು ನಗರದ ಉಪಗ್ರಹ ಚಿತ್ರಣ, ಗೂಗಲ್ ಮಾಪ್ಸ್ ನ ಕಾಣಿಕೆ