ಸೂರ್ಯನಾಥ ಕಾಮತ
From Wikipedia
ಡಾ|ಸೂರ್ಯನಾಥ ಕಾಮತ ಇವರು ೧೯೩೭ರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯಲ್ಲಿ ಜನಿಸಿದರು.
ಫ್ರೀ ಪ್ರೆಸ್ ಜರ್ನಲ್, ಉತ್ಥಾನ ಹಾಗು ಪ್ರಜಾವಾಣಿ ಪತ್ರಿಕೆಗಳಲ್ಲಿ ಸಂಪಾದಕೀಯ ವಿಭಾಗಗಳಲ್ಲಿ ಕೆಲಸ ಮಾಡಿದ್ದಾರೆ. ಬೆಂಗಳೂರಿನಲ್ಲಿರುವ ಮಿಥಿಕ್ ಸೊಸೈಟಿಯ ಇತಿಹಾಸ ದರ್ಶನ ನಿಯತಕಾಲಿಕೆಯ ಸಂಪಾದಕರಾಗಿದ್ದಾರೆ. ಕರ್ನಾಟಕ ಗೆಜೆಟಿಯರ್‍ದ ಮುಖ್ಯ ಸಂಪಾದಕರಾಗಿ ಸೂರ್ಯನಾಥ ಕಾಮತರು ಅತ್ಯಂತ ಜವಾಬುದಾರಿಯುತ ಕಾರ್ಯ ಮಾಡಿದ್ದಾರೆ.
ಕೃತಿಗಳು:
- ಕರ್ನಾಟಕದ ಸಂಕ್ಷಿಪ್ತ ಇತಿಹಾಸ
- ಜಾನ್ ಫ್ಲೀಟ್
- ಸ್ವಾತಂತ್ರ್ಯ ಸಂಗ್ರಾಮದ ಸ್ಮೃತಿಗಳು
ಇವರ “ಕರ್ನಾಟಕದ ಸಂಕ್ಷಿಪ್ತ ಇತಿಹಾಸ” ಕೃತಿಗೆ ರಾಜ್ಯ ಸಾಹಿತ್ಯ ಅಕಾಡೆಮಿ ಬಹುಮಾನ ಹಾಗು “ಜಾನ್ ಫ್ಲೀಟ್” ಕೃತಿಗೆ ಬೆಂಗಳೂರು ವಿಶ್ವವಿದ್ಯಾನಿಲಯದ ಸಂಶೋಧನಾ ಬಹುಮಾನ ಲಭಿಸಿವೆ.
ಲಭ್ಯವಿರುವ ವಿಳಾಸ: ೭೯೮, ೬ನೆಯ ಅಡ್ಡ ರಸ್ತೆ, ೧೧ನೆಯ ಮುಖ್ಯ ರಸ್ತೆ, ಹನುಮಂತನಗರ, ಬೆಂಗಳೂರು-೫೬೦ ೦೧೯