ಸೌಗಂಧಿಕಾ ಪುಷ್ಪ
From Wikipedia
ಸೌಗಂಧಿಕಾ ಪುಷ್ಪ - ಒಂದು ಪರಿಮಳ ಭರಿತವಾದ ಹೂವು. ಮಹಾಭಾರತದಲ್ಲಿ ಈ ಹೂವನ್ನು ಭೀಮನು ತನ್ನ ಪತ್ನಿಯಾದ ದ್ರೌಪದಿಗೆ ತಂದುಕೊಟ್ಟನೆಂಬ ಕಥೆ ಇದೆ.
[ಬದಲಾಯಿಸಿ] ವಿವರಗಳು
ಇದು ಮಹಾಭಾರತದ ಅರಣ್ಯ ಪರ್ವದಲ್ಲಿ ಬರುವ ಒಂದು ಪ್ರಸಂಗ. ಗಾಳಿಯಲ್ಲಿ ತೇಲಿ ಬಂದ ಸೌಗಂಧಿಕಾ ಪುಷ್ಪದ ಪರಿಮಳಕ್ಕೆ ಮನಸೋತು ದ್ರೌಪದಿ ಅದನ್ನು ತಂದುಕೊಡುವಂತೆಭೀಮನನ್ನು ಕೇಳುತ್ತಾಳೆ. ಆಗ ಭೀಮ ಹೂವನ್ನು ತರಲು ಹೋದಾಗ ದಾರಿಯಲ್ಲಿ ಒಂದು ವಯಸ್ಸಾದ ಕಪಿಯು ಮಲಗಿರುತ್ತದೆ. ಅದರ ಬಾಲವನ್ನು ದಾಟದೆ, ಬಾಲವನ್ನು ತೆಗೆದು ದಾರಿ ಬಿಡುವಂತೆ ಕೇಳಿಕೊಳ್ಳುತ್ತಾನೆ. ಆಗ ಭೀಮ ಬಾಲವನ್ನು ಎತ್ತಲು ಪ್ರಯತ್ನಿಸುತ್ತಾನೆ. ಅದು ಭೀಮನಂತಹ ಶಕ್ತಿಶಾಲಿಗೂ ಎತ್ತದಷ್ಟು ಭಾರವಾಗಿರುತ್ತದೆ. ಭೀಮ ಬಹಳ ಪ್ರಯತ್ನ ಮಾಡಿದರೂ ಬಾಲವನ್ನು ಸ್ವಲ್ಪವೂ ಸರಿಸಲು ಸಾಧ್ಯವಾಗುವುದಿಲ್ಲ.
ಆಗ ಭೀಮನಿಗೆ ತಾನು ಮಹಾನ್ ಶಕ್ತಿವಂತನೆಂಬ ಗರ್ವಭಂಗವಾಗುತ್ತದೆ. ಹೀಗೆ ಸೋತು ಹೋದ ಭೀಮನಿಗೆ ತಾನು ಯಾರೆಂದು ಕಪಿಯು ತಿಳಿಸುತ್ತದೆ. ಆ ಕಪಿಯೇ ತ್ರೇತಾಯುಗದಲ್ಲಿ ರಾಮನ ಬಂಟನಾಗಿದ್ದ ಹನುಮಂತನೆಂದು ಭೀಮನಿಗೆ ತಿಳಿದು ಬರುತ್ತದೆ.