ಕಾರವಾರ
Wikipedia ಇಂದ
ಕಾರವಾರ ಉತ್ತರ ಕನ್ನಡ ಜಿಲ್ಲೆಯ ಒಂದು ತಾಲೂಕು ಮತ್ತು ಜಿಲ್ಲಾ ಕೇಂದ್ರ. ಕಾರವಾರ, ಕರ್ನಾಟಕ ಹಾಗೂ ಗೋವೆಯ ಗಡಿಯಿಂದ ದಕ್ಷಿಣಕ್ಕೆ ಸುಮಾರು 15 ಕಿಲೋ ಮೀಟರ್ ದೂರದಲ್ಲಿದ್ದು, ಅರಬ್ಬೀ ಸಮುದ್ರದಂಚಿನಲ್ಲಿರುವ ನಗರವಾಗಿದೆ.
[ಬದಲಾಯಿಸಿ] ಕಾರವಾರ
ಕಾರವಾರವು ಕರ್ನಾಟಕದ ರಾಜಧಾನಿ ಬೆಂಗಳೂರಿನಿಂದ ಸುಮಾರು 520 ಕಿ.ಮೀ. ವಾಯುವ್ಯ ದಿಕ್ಕಿನಲ್ಲಿದೆ. ಕಡಲ ಕಿನಾರೆಯಲ್ಲಿರುವ ಈ ನಗರವು ಪ್ರವಾಸಿಗರ ತಾಣವೂ ಹೌದು. ಇಲ್ಲಿನ ಕಡಲು ಹಾಗೂ ಸುತ್ತಲೂ ಇರುವ ಪುರಾಣ ಪ್ರಸಿದ್ಧ ಸ್ಥಳಗಳಾದ ಗೋಕರ್ಣ, ಮುರುಡೇಶ್ವರ ಹಾಗೂ ಹಲವಾರು ಚಿಕ್ಕ, ದೊಡ್ಡ ಪವಿತ್ರ ಸ್ಥಳಗಳು, ಹತ್ತಾರು ಸುಂದರ ಕಡಲ ಕಿನಾರೆಗಳು ಎಲ್ಲರನ್ನೂ ಕೈಬೀಸಿ ಕರೆಯುತ್ತದೆ. ಇಲ್ಲಿನ ಸುಂದರ ಹಾಗೂ ಪ್ರಶಾಂತ ವಾತಾವರಣ ರಷ್ಟ್ರಕವಿ ಶ್ರೀ ರವೀಂದ್ರ ನಾಥ್ ಠಾಕೂರ್ ರವರ ಮೊದಲ ಕೃತಿ ರಚನೆಗೆ ಸ್ಫೂರ್ತಿಯಾಯಿತು.