ಜನವರಿ
Wikipedia ಇಂದ
ಜನವರಿ | ||||||
ರವಿ | ಸೋಮ | ಮಂಗಳ | ಬುಧ | ಗುರು | ಶುಕ್ರ | ಶನಿ |
೧ | ೨ | ೩ | ೪ | ೫ | ||
೬ | ೭ | ೮ | ೯ | ೧೦ | ೧೧ | ೧೨ |
೧೩ | ೧೪ | ೧೫ | ೧೬ | ೧೭ | ೧೮ | ೧೯ |
೨೦ | ೨೧ | ೨೨ | ೨೩ | ೨೪ | ೨೫ | ೨೬ |
೨೭ | ೨೮ | ೨೯ | ೩೦ | ೩೧ | ||
೨೦೦೮ |
ಜನವರಿ - ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ಮೊದಲನೇ ತಿಂಗಳು. ಈ ತಿಂಗಳಿನಲ್ಲಿ ಮೂವತ್ತೊಂದು ದಿನಗಳು ಇರುತ್ತವೆ. ರೋಮ್ನ ಪುರಾಣದಲ್ಲಿ ದ್ವಾರಗಳ ದೇವತೆಯಾದ ಜಾನಸ್ನಿಂದ ಈ ತಿಂಗಳ ಹೆಸರನ್ನು ಪಡೆಯಲಾಗಿದೆ - ಜನವರಿ ತಿಂಗಳು ಹೊಸ ವರ್ಷಕ್ಕೆ ದ್ವಾರದಂತೆ ಎಂಬುದು ಈ ಹೆಸರಿಗೆ ಪ್ರೇರಣೆ.
[ಬದಲಾಯಿಸಿ] ಪ್ರಮುಖ ದಿನಗಳು
- ಪ್ರತಿ ವರ್ಷದ ಮೊದಲ ದಿನ ಅಂದರೆ, ೧ನೇ ತಾರೀಖು ವಿಶ್ವದಾದ್ಯಂತ 'ಹೊಸ ವರ್ಷದ ದಿನ'ವಾಗಿ ಸಂಭ್ರಮದಿಂದ ಆಚರಿಸಲಾಗುತ್ತದೆ.
- ಜನವರಿ ೧೪ ಅಥವಾ ೧೫ ರಂದು ಮಕರ ಸಂಕ್ರಾಂತಿ ಹಬ್ಬವಾಗಿ ಆಚರಿಸಲಾಗುತ್ತದೆ. ಇದು ಸೂರ್ಯನು ಮಕರ ರಾಶಿಯನ್ನು ಪ್ರವೇಶಿಸುವ ದಿನ.
- ಜನವರಿ ೨೬: ಭಾರತದ ಗಣರಾಜ್ಯೋತ್ಸವ ದಿನ.ಭಾರತವು ೧೯೫೦ನೇ ಇಸವಿಯಲ್ಲಿ ಈ ದಿನದಂದು ಗಣರಾಜ್ಯವಾಗಿ ಘೋಷಿಸಲ್ಪಟ್ಟಿತು.
- ಜನವರಿ ೩೦: ಭಾರತದ ರಾಷ್ತ್ರಪಿತ ಮಹಾತ್ಮ ಗಾಂಧೀಜಿಯವರು ಮರಣ ಹೊಂದಿದ ದಿನ. ಈ ದಿನವನ್ನು ಹುತಾತ್ಮರ ದಿನವಾಗಿ ಆಚರಿಸಲಾಗುತ್ತದೆ.
ಜನವರಿ | ಫೆಬ್ರುವರಿ | ಮಾರ್ಚ್ | ಏಪ್ರಿಲ್ | ಮೇ | ಜೂನ್ | ಜುಲೈ | ಆಗಸ್ಟ್ | ಸೆಪ್ಟೆಂಬರ್ | ಅಕ್ಟೋಬರ್ | ನವೆಂಬರ್ | ಡಿಸೆಂಬರ್ |