ಕೃಷ್ಣ ಮಠ
From Wikipedia
ಕೃಷ್ಣ ಮಠ - ಕರ್ನಾಟಕದ ಪ್ರಸಿದ್ಧ ಯಾತ್ರಾಸ್ಥಳಗಳಲ್ಲಿ ಒಂದಾದ ಉಡುಪಿಯಲ್ಲಿದೆ. ಇಲ್ಲಿರುವ ಶ್ರೀ ಕೃಷ್ಣನ ದೇವಾಲಯವನ್ನೇ ಕೃಷ್ಣ ಮಠ ಎಂದು ಕರೆಯಲಾಗುತ್ತದೆ. ಇದನ್ನು ಶ್ರೀ ಮಧ್ವಾಚಾರ್ಯರು ಸ್ಥಾಪಿಸಿದರು.
ಈ ದೇವಾಲಯದ ಪೂಜೆಯನ್ನು ಉಡುಪಿಯಲ್ಲಿರುವ ಅಷ್ಟ ಮಠಗಳು ನೋಡಿಕೊಳ್ಳುತ್ತವೆ. ಪ್ರತಿ ಎರದು ವರ್ಷಗಳಿಗೊಮ್ಮೆ ಒಂದು ಮಠದಿಂದ ಇನ್ನೊಂದು ಮಠಕ್ಕೆ ಕೃಷ್ಣ ಮಠದ ಪೂಜೆ ಹಸ್ತಾಂತರವಾಗುತ್ತದೆ. ಈ ಸಂದರ್ಭವನ್ನು ಪರ್ಯಾಯ ಮಹೋತ್ಸವ ಎಂದು ಅತಿ ವೈಭವದಿಂದ ಆಚರಿಸಲಾಗುತ್ತದೆ. ಒಮ್ಮೆ ಪರ್ಯಾಯ ಪೂರೈಸಿದ ಮಠಕ್ಕೆ, ಮತ್ತೊಮ್ಮೆ ಕೃಷ್ಣ ಮಠ ಪೂಜೆಯ ಅಧಿಕಾರ ಸಿಗಲು ಹದಿನಾರು ವರ್ಷಗಳು ಹಿಡಿಯುತ್ತವೆ.
ಶ್ರೀ ಮಧ್ವಾಚಾರ್ಯರು ಪ್ರಾರಂಭಿಸಿದ ಈ ಪದ್ಧತಿ ಇವತ್ತಿನವರೆಗೂ ಚಾಚೂ ತಪ್ಪದೆ ಮುಂದುವರೆದುಕೊಂಡು ಬಂದಿದೆ.