ತಿಪಟೂರು
From Wikipedia
ತಿಪಟೂರು ಭಾರತದ ಕರ್ನಾಟಕ ರಾಜ್ಯದಲ್ಲಿರುವ ಒಂದು ಪುಟ್ಟ ನಗರ. ಇದು ತುಮಕೂರು ಜಿಲ್ಲೆಯ ಪ್ರಮುಖ ತಾಲ್ಲೂಕು ಕೇಂದ್ರ. ಇದು ಬೆಂಗಳೂರಿನಿಂದ ಸುಮಾರು 150 ಕಿ.ಮಿ. ದೂರದಲ್ಲಿದೆ. ರಾಷ್ಟ್ರೀಯ ಹೆದ್ದಾರಿ 206 ಈ ಪಟ್ಟಣದ ಮೂಲಕ ಹಾದು ಹೋಗಿದೆ. ಕೆಲವೊಮ್ಮೆ ತಿಪಟೂರನ್ನು ಕಲ್ಪತರು ಎಂದು ಸಂಭೋದಿಸಲಾಗುತ್ತದೆ. ಇದು ಕೊಬ್ಬರಿಗೆ ಬಹು ಪ್ರಸಿದ್ದಿಯಾಗಿದೆ. ಇದಲ್ಲದೆ ತಿಪಟೂರು ಒಂದು ಪ್ರಮುಖ ಶೈಕ್ಷಣಿಕ ಕೇಂದ್ರ.
[ಬದಲಾಯಿಸಿ] ಭೂಗೋಳ
ತಿಪಟೂರು ಸಮುದ್ರ ಮಟ್ಟದಿಂದ ೮೬೧ ಮೀ ಎತ್ತರದಲ್ಲಿದೆ. ಭೌಗೋಳಿಕವಾಗಿ ೧೩° ೧೫' ಉ. ಹಾಗೂ ೭೬° ೨೮' ಪೂ. ಅಕ್ಷಾ೦ಶದಲ್ಲಿದೆ.