ರಾಘವೇಂದ್ರ ಖಾಸನೀಸ
From Wikipedia
ರಾಘವೇಂದ್ರ ಖಾಸನೀಸ ಇವರು ನವೋದಯದ ಖ್ಯಾತ ಕತೆಗಾರರು.ಜನನ ೧೯೩೩ರಲ್ಲಿ ಬಿಜಾಪುರ ಜಿಲ್ಲೆಯ ಇಂಡಿ ಗ್ರಾಮದಲ್ಲಿ.ತಂದೆ ನಾರಾಯಣ ಖಾಸನೀಸ.ತಾಯಿ ಕಮಲಾಬಾಯಿ.ವಿದ್ಯಾರ್ಥಿಯಾಗಿದ್ದಾಗಲೇ ಇವರ ಕಥೆ ತಿ.ತಾ.ಶರ್ಮರ 'ವಿಶ್ವ ಕರ್ನಾಟಕ'ದ ಮಕ್ಕಳ ಪುಟದಲ್ಲಿ ಪ್ರಕಟವಾಯಿತು.ನಂತರದಲ್ಲಿ 'ಸಂಜಯ','ಕರ್ನಾಟಕ ವೈಭವ' ಮತ್ತು 'ಕರ್ನಾಟಕ ಬಂಧು' ಪತ್ರಿಕೆಗಳಲ್ಲಿ ಪ್ರಕಟಗೊಂಡವು.
ಧಾರವಾಡದಲ್ಲಿ ಬಿ.ಎ. ಪದವಿ ಗಳಿಸಿ,ಮುಂಬಯಿಯ ಎಲ್‌ಫಿನ್‌ಸ್ಟನ್ ಕಾಲೇಜಿನಲ್ಲಿ ಇಂಗ್ಲಿಷ್ ಎಂ.ಎ.ಪದವಿ ಪಡೆದರು.ಮುಂಬಯಿ ವಿಶ್ವವಿದ್ಯಾನಿಲಯದಿಂದ ಗ್ರಂಥಾಲಯ ವಿಜ್ಞಾನದಲ್ಲಿ ಡಿಪ್ಲೊಮಾ ಪಡೆದರು. ಖಾಸನೀಸರು ಪುಣೆಯ ಎಸ್.ಪಿ.ಕಾಲೇಜಿನ ಗ್ರಂಥಾಲಯದಿಂದ ವೃತ್ತಿ ಜೀವನ ಆರಂಭಿಸಿ,ವಲ್ಲಭ ವಿದ್ಯಾನಗರದ ಬಿರ್ಲಾ ಇಂಜಿನಿಯರಿಂಗ್ ಕಾಲೇಜಿನಲ್ಲಿ ಕೆಲಕಾಲವಿದ್ದು,ಬೆಂಗಳೂರು ವಿಶ್ವವಿದ್ಯಾಲಯದ ಸಹಾಯಕ ಗ್ರಂಥಪಾಲಕರಾಗಿ ೧೯೯೧ರಲ್ಲಿ ನಿವೃತ್ತರಾದರು. ಇವರ `ತಬ್ಬಲಿಗಳು' ಮತ್ತು`ಅಲ್ಲಾವುದ್ದೀನನ ಅದ್ಭುತದೀಪ' ಕನ್ನಡದ ಅತ್ಯುತ್ತಮ ಕತೆಗಳ ಸಾಲಿಗೆ ಸೇರುತ್ತವೆ.ಒಟ್ಟಾರೆ ೨೫ ಚಿನ್ನದಂತಹ ಕಥೆಗಳನ್ನು ಬರೆದು,ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದ್ದಾರೆ.
[ಬದಲಾಯಿಸಿ] ಪ್ರಶಸ್ತಿಗಳು
- ೧೯೮೪ರಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಖಾಸನೀಸರ ಕಥೆಗಳು ಕೃತಿಗೆ "ಅತ್ಯುತ್ತಮ ಸೃಜನಶೀಲ ಕೃತಿ" ಪ್ರಶಸ್ತಿ ನೀಡಿದೆ.
- ೧೯೯೫ರಲ್ಲಿ ಖಾಸನೀಸರಿಗೆ ಗೌರವ ಪ್ರಶಸ್ತಿಯನ್ನು ನೀಡಿದೆ.
[ಬದಲಾಯಿಸಿ] ಇವರ ಕೆಲವು ಕೃತಿಗಳು:
- ಬೇಡಿಕೊಂಡವರು
- ತಬ್ಬಲಿಗಳು
- ಖಾಸನೀಸರ ಕಥೆಗಳು
- ಖಾಸನೀಸರ ಸಮಗ್ರ ಕಥೆಗಳು
'ಹೀಗೂ ಇರಬಹುದು' ಕಥೆ ದೂರದರ್ಶನದ 'ಕಥೆಗಾರ ಮಾಲಿಕೆ'ಯಲ್ಲಿ ಪ್ರಸಾರವಾಗಿದೆ.ಇವರ ಅನೇಕ ಕಥೆಗಳು ಇಂಗ್ಲಿಷ್ ಮತ್ತಿತರ ಭಾಷೆಗಳಿಗೆ ಅನುವಾದಗೊಂಡಿವೆ.ಗ್ರಂಥಾಲಯಕ್ಕೆ ಸಂಬಂಧಿಸಿದ ಇವರ ಬಿಡಿಬರಹಗಳು ಪ್ರಕಟಗೊಂಡಿವೆ.
ಪಾರ್ಕಿನ್‌ಸನ್ ವ್ಯಾಧಿಯಿಂದ ಬಳಲುತ್ತಿದ್ದ ರಾಘವೇಂದ್ರ ಖಾಸನೀಸರು ಮಾರ್ಚ್೧೯, ೨೦೦೭ರಂದು ನಿಧನರಾದರು.