ಬೆಂಗಳೂರು
From Wikipedia
ಬೆಂಗಳೂರು ಕರ್ನಾಟಕದ ರಾಜಧಾನಿ. ಭಾರತದ ೩ನೇ ದೊಡ್ಡ ಊರು. ಸುಮಾರು ೪೫ ಲಕ್ಷ ಜನರಿರುವ ಈ ಊರು ಭಾರತದ 'ಸಿಲಿಕಾನ್ ವ್ಯಾಲಿ' ಎಂದೇ ಪ್ರಸಿದ್ಧ. ಸ್ವಾತಂತ್ರ್ಯಾನಂತರ ಬೆಂಗಳೂರು ಬಹು ದೊಡ್ಡ ಕೈಗಾರಿಕಾ ಉತ್ಪಾದನಾ ಕ್ಷೇತ್ರಗಳಿಗೆ ಮನೆಯಾಯಿತು. ಶಾಂತಿ ಸಮೃದ್ಧಿಯೂ, ಪರಿಸರ ಸಮೃದ್ಧಿಯೂ ಜನರನ್ನು ಈ ಊರಿನೆಡೆಗೆ ಆಕರ್ಷಿಸಿತು. ಹೆಚ್ ಎ ಎಲ್, ಬಿ ಇ, ಐ ಟಿ ಐ, ಇಸ್ರೋ ನಂತಹ ಬಹು ದೊಡ್ಡ ಉತ್ಪಾದನಾ ಘಟಕಗಳಿಗೆ ಮನೆಯಾಯಿತು. ಬೆಂಗಳೂರು ಜಗತ್ತಿನ ಮಾಹಿತಿ ತಂತ್ರಜ್ಞಾನಕ್ಕೆ ಮಹತ್ತರವಾದ ಕಾಣಿಕೆ ನೀಡುತ್ತಾ ಬಂದಿದೆ ಮತ್ತು ಭಾರತದ ಸಿಲಿಕಾನ್ ವ್ಯಾಲಿ ಎಂದು ಪರಿಗಣಿಸಲಾಗಿದೆ.
[ಬದಲಾಯಿಸಿ] ಭೂಗೋಳಬೆಂಗಳೂರು ಸಮುದ್ರ ಮಟ್ಟದಿಂದ ೯೦೦ ಮೀ ಎತ್ತರದಲ್ಲಿದೆ. ಭೌಗೋಳಿಕವಾಗಿ ೧೨° ೩೯' ಉ ಹಾಗೂ ೧೩° ಉ ಅಕ್ಷಾ೦ಶದಲ್ಲಿದ್ದರೂ ಕೂಡ ಬೆಂಗಳೂರಿನಲ್ಲಿ ಸದಾಕಾಲ ತಂಪು ವಾತಾವರಣವಿರುವುದು, ಸುಮಾರು ೨೪°C ರಿಂದ ೩೫°C ರವರೆಗೆ ಉಷ್ಣಾಂಶವಿರುವುದು. [ಬದಲಾಯಿಸಿ] ಇತಿಹಾಸಬೆಂಗಳೂರು ೧೫೩೭ರಲ್ಲಿ ಕೆಂಪೇಗೌಡ (೧೫೧೦ - ೧೫೭೦) ರಿಂದ ಕಟ್ಟಲ್ಪಟ್ಟ ಊರು ಎಂದು ಹೇಳಲಾಗುತ್ತದೆ. ಪೌರಾಣಿಕ ಕಾಲದಲ್ಲಿ ಈ ಪ್ರದೇಶವು 'ಕಲ್ಯಾಣಪುರಿ' ಅಥವಾ 'ಕಲ್ಯಾಣನಗರ' ಎಂದು ಕರೆಯಲ್ಪಡುತ್ತಿತ್ತಂತೆ. ಬ್ರಿಟಿಷರು ಬಂದ ಬಳಿಕ ಈ ಊರು 'ಬೆಂಗಳೂರು' ಎಂದು ಕರೆಯಲ್ಪಟ್ಟಿತಂತೆ. ಹಿಂದೆ ಉದ್ಯಾನ ಗಳಿಗೆ ಪ್ರಸಿದ್ಧವಾಗಿದ್ದು 'ಉದ್ಯಾನ ನಗರಿ' ಎಂದು ಕರೆಯಲ್ಪಡುತ್ತಿತ್ತು. [ಬದಲಾಯಿಸಿ] ಸಂಸ್ಕೃತಿ ಮತ್ತು ವಿದ್ಯಾಭ್ಯಾಸಕಲೆ ಮತ್ತು ಸಂಸ್ಕೃತಿಯ ಬೀಡಾಗಿರುವ ಬೆಂಗಳೂರು ವಿಧ್ಯಾಭ್ಯಾಸಕ್ಕೆ ಬಹಳ ಹೆಸರುವಾಸಿ. ಇಲ್ಲಿಯ ಸಂಸ್ಕೃತಿಯೂ ಹಲವು ಪರದೇಶೀಯರನ್ನು ಶತಮಾನಗಳಿಂದ ಆಕರ್ಶಿಸಿದೆ. ಬೆಂಗಳೂರಿನ 'ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್' ಜಗತ್ತಿನಲ್ಲೇ ಹೆಸರುವಾಸಿ. [ಬದಲಾಯಿಸಿ] ಸಂಬಂಧಪಟ್ಟ ವಿಷಯಗಳು[ಬದಲಾಯಿಸಿ] ಇತರೆ ಸಂಪರ್ಕ
|
||
ಬಾಗಲಕೋಟೆ | ಬೆಂಗಳೂರು ನಗರ ಜಿಲ್ಲೆ | ಬೆಂಗಳೂರು ಗ್ರಾಮಾಂತರ | ಬೆಳಗಾವಿ | ಬಳ್ಳಾರಿ | ಬೀದರ್ | ಬಿಜಾಪುರ | ಚಾಮರಾಜನಗರ | ಚಿಕ್ಕಮಗಳೂರು | ಚಿತ್ರದುರ್ಗ | ದಕ್ಷಿಣ ಕನ್ನಡ | ದಾವಣಗೆರೆ | ಧಾರವಾಡ | ಗದಗ್ | ಗುಲ್ಬರ್ಗ | ಹಾಸನ | ಹಾವೇರಿ | ಕೊಡಗು | ಕೋಲಾರ | ಕೊಪ್ಪಳ | ಮಂಡ್ಯ | ಮೈಸೂರು | ರಾಯಚೂರು | ಶಿವಮೊಗ್ಗ | ತುಮಕೂರು | ಉಡುಪಿ | ಉತ್ತರ ಕನ್ನಡ