Static Wikipedia February 2008 (no images)

aa - ab - af - ak - als - am - an - ang - ar - arc - as - ast - av - ay - az - ba - bar - bat_smg - bcl - be - be_x_old - bg - bh - bi - bm - bn - bo - bpy - br - bs - bug - bxr - ca - cbk_zam - cdo - ce - ceb - ch - cho - chr - chy - co - cr - crh - cs - csb - cu - cv - cy - da - de - diq - dsb - dv - dz - ee - el - eml - en - eo - es - et - eu - ext - fa - ff - fi - fiu_vro - fj - fo - fr - frp - fur - fy - ga - gan - gd - gl - glk - gn - got - gu - gv - ha - hak - haw - he - hi - hif - ho - hr - hsb - ht - hu - hy - hz - ia - id - ie - ig - ii - ik - ilo - io - is - it - iu - ja - jbo - jv - ka - kaa - kab - kg - ki - kj - kk - kl - km - kn - ko - kr - ks - ksh - ku - kv - kw - ky - la - lad - lb - lbe - lg - li - lij - lmo - ln - lo - lt - lv - map_bms - mdf - mg - mh - mi - mk - ml - mn - mo - mr - mt - mus - my - myv - mzn - na - nah - nap - nds - nds_nl - ne - new - ng - nl - nn - no - nov - nrm - nv - ny - oc - om - or - os - pa - pag - pam - pap - pdc - pi - pih - pl - pms - ps - pt - qu - quality - rm - rmy - rn - ro - roa_rup - roa_tara - ru - rw - sa - sah - sc - scn - sco - sd - se - sg - sh - si - simple - sk - sl - sm - sn - so - sr - srn - ss - st - stq - su - sv - sw - szl - ta - te - tet - tg - th - ti - tk - tl - tlh - tn - to - tpi - tr - ts - tt - tum - tw - ty - udm - ug - uk - ur - uz - ve - vec - vi - vls - vo - wa - war - wo - wuu - xal - xh - yi - yo - za - zea - zh - zh_classical - zh_min_nan - zh_yue - zu

Web Analytics
Cookie Policy Terms and Conditions ವಿಜಯನಗರ - Wikipedia

ವಿಜಯನಗರ

From Wikipedia

ಉತ್ತರ ಕರ್ನಾಟಕದಲ್ಲಿರುವ ವಿಜಯನಗರ ಎಂಬುದು ಈಗ ನಿರ್ನಾಮವಾಗಿರುವ ಚಾರಿತ್ರಿಕ ವಿಜಯನಗರ ಸಾಮ್ರಾಜ್ಯದ ರಾಜಧಾನಿ.

ಈ ನಗರದ ಬಹುಭಾಗ ತುಂಗಭದ್ರಾ ನದಿಯ ದಕ್ಷಿಣ ದಂಡೆಯ ಮೇಲಿದೆ. ಈ ನಗರ ಹಂಪೆಯ ವಿರೂಪಾಕ್ಷ ದೇವಸ್ಥಾನದ ಪವಿತ್ರ ಮಧ್ಯಭಾಗದ ಸುತ್ತ ಕಟ್ಟಲಾದ ನಗರ. ಅದರ ವ್ಯಾಪ್ತಿಯಲ್ಲಿ ಇತರ ಪವಿತ್ರ ಸ್ಥಳಗಳು ಸಹ ಇವೆ - ಇವು ಸುಗ್ರೀವನ ಹುಟ್ಟೂರಾದ ಕಿಷ್ಕಿಂಧೆ ಇದ್ದ ಸ್ಥಳವೆಂದು ಹೇಳಲಾದ ಕ್ಷೇತ್ರವನ್ನು ಒಳಗೊಂಡಿವೆ.

ಈಗ ರಾಜಕೇಂದ್ರ ಮತ್ತು ಪವಿತ್ರಕೇಂದ್ರ ಎಂದು ಕರೆಯಲ್ಪಡುವ ಸ್ಥಳಗಳನ್ನು ಒಳಗೊಂಡ ನಗರದ ಮಧ್ಯಭಾಗ ೪೦ ಚ.ಕಿಮೀ ಗಿಂತ ಹೆಚ್ಚು ವಿಸ್ತೀರ್ಣದಲ್ಲಿ ಹಬ್ಬಿದೆ. ಇದು ಈಗಿನ ಹಂಪೆ ಗ್ರಾಮವನ್ನು ಸಹ ಕೂಡಿದೆ. ಕಮಲಾಪುರಮ್ ಎಂಬ ಗ್ರಾಮ ಹಳೆಯ ನಗರದ ಸ್ವಲ್ಪ ದೂರದಲ್ಲೇ ಇದ್ದು ಅನೇಕ ಸ್ಮಾರಕಗಳನ್ನು ಹೊಂದಿದೆ. ಇಲ್ಲಿಗೆ ಅತಿ ಹತ್ತಿರದ ನಗರ ಮತ್ತು ರೈಲ್ವೇ ನಿಲ್ದಾಣ ಎಂದರೆ ಹೊಸಪೇಟೆ, ೧೩ ಕಿಮೀ ದೂರದಲ್ಲಿದೆ.

ಪ್ರಾಕೃತಿಕವಾಗಿ, ಈ ನಗರ ಎಲ್ಲ ಗಾತ್ರದ ಜಲ್ಲಿಯ ಬಂಡೆಗಳಿಂದ ಕೂಡಿದ ಗುಡ್ಡಗಾಡು ಪ್ರದೇಶದಲ್ಲಿ ಇದೆ. ಇಲ್ಲಿರುವ ಒಂದು ಕೊರಕಲಿನ ಮೂಲಕ ತುಂಗಭದ್ರಾ ನದಿ ಹರಿಯುತ್ತದೆ ಮತ್ತು ಉತ್ತರ ದಿಕ್ಕಿನಲ್ಲಿ ರಕ್ಷಣೆಯನ್ನು ಒದಗಿಸುತ್ತಿತ್ತು. ದೊಡ್ಡ ಜಲ್ಲಿಕಲ್ಲಿನ ಕೋಟೆಗಳು ನಗರದ ಮಧ್ಯಭಾಗವನ್ನು ರಕ್ಷಿಸುತ್ತಿದ್ದವು.

ನಾಶವಾದ ಈ ನಗರ ಯುನೆಸ್ಕೋ ಪ್ರಪಂಚ ಸಂಸ್ಕೃತಿ ಕ್ಷೇತ್ರವಾಗಿ ಮಾನ್ಯತೆ ಪಡೆದಿದೆ.

ಪರಿವಿಡಿ

[ಬದಲಾಯಿಸಿ] ಚರಿತ್ರೆ

ಹಿಂದೂ ವಿಜಯನಗರ ಸಾಮ್ರಾಜ್ಯ ೧೩೩೬ ರಲ್ಲಿ ಹಕ್ಕ (ನಂತರ ಹರಿಹರ) ಮತ್ತು ಬುಕ್ಕ (ನಂತರ ಬುಕ್ಕ ರಾಯ) ಎಂಬ ಅಣ್ಣತಮ್ಮಂದಿರಿಂದ ಸ್ಥಾಪಿಸಲ್ಪಟ್ಟಿತ್ತು. ಅವರ ಮೂಲ ಸ್ಥಾನ ಇದೇ ಕ್ಷೇತ್ರದಲ್ಲೇ ಇತ್ತೆಂದು ತಿಳಿದುಬಂದಿದೆ. ರಾಜಧಾನಿ ಮೊದಲು ಪ್ರಾಯಶಃ ತುಂಗಭದ್ರಾ ನದಿಯ ಉತ್ತರದಲ್ಲಿ ವಿಠ್ಠಲ ದೇವಸ್ಥಾನದ ಬಳಿ ಇರುವ ಆನೆಗೊಂದಿ ಎಂಬ ಗ್ರಾಮದಲ್ಲಿತ್ತು. ಸಾಮ್ರಾಜ್ಯ ಬೆಳೆಯುತ್ತಾ ಸಮೃದ್ಧವಾದಂತೆ ರಾಜಧಾನಿಯನ್ನು ತುಂಗಭದ್ರೆಯ ದಕ್ಷಿಣದಲ್ಲಿರುವ ಹೆಚ್ಚು ಸುರಕ್ಷಿತ ವಿಜಯನಗರಕ್ಕೆ ವರ್ಗಾಯಿಸಲಾಯಿತು.

ನಗರ ೧೪ನೇ ಶತಮಾನದಿಂದ ೧೬ ನೇ ಶತಮಾನದ ವರೆಗೆ ಉಚ್ಛ್ರಾಯ ಸ್ಥಿತಿಯಲ್ಲಿತ್ತು, ವಿಜಯನಗರ ಸಾಮ್ರಾಜ್ಯದ ಶಕ್ತಿಯ ತುಟ್ಟತುದಿಯಲ್ಲಿ. ಇದೇ ಸಮಯದಲ್ಲಿ ಅದು ಕಾಲಕಾಲಕ್ಕೆ ಉತ್ತರ ದಖನ್ ಪ್ರದೇಶದಲ್ಲಿ ಇದ್ದು ಒಟ್ಟಾಗಿ ದಖನ್ ಸುಲ್ತಾನೇಟ್ ಎಂದು ಕರೆಯಲ್ಪಟ್ಟ ಮುಸ್ಲಿಮ್ ರಾಜ್ಯಗಳೊಂದಿಗೆ ಘಟ್ಟಿಸುತ್ತಿತ್ತು. ೧೫೬೫ ರಲ್ಲಿ ನಗರ ಅಂತಿಮವಾಗಿ ಈ ಸುಲ್ತಾನೇಟ್‌ಗಳ ಮೈತ್ರಿತ್ವಕ್ಕೆ ಸೋತಿತು ಮತ್ತು ರಾಜಧಾನಿಯನ್ನು ವಶಪಡಿಸಿಕೊಳ್ಳಲಾಯಿತು. ಜಯ ಪಡೆದ ಸೈನಿಕರು ಅನೇಕ ತಿಂಗಳುಗಳ ಕಾಲ ವಿಜಯನಗರದಲ್ಲಿ ಕೊಲೆ, ಲೂಟಿ ನಡೆಸಿದರು. ಇದರ ನಂತರವೂ ವಿಜಯನಗರ ಸಾಮ್ರಾಜ್ಯ ಉಳಿದರೂ ಸಹ ಅದು ನಿಧಾನವಾಗಿ ಕೆಳಮುಖವಾಯಿತು. ರಾಜಧಾನಿಯಾಗಿದ್ದ ವಿಜಯನಗರವನ್ನು ಪುನರ್ನಿರ್ಮಾಣ ಮಾಡಲಾಗಲಿಲ್ಲ. ಇಂದಿನವರೆಗೂ ಅಲ್ಲಿ ಜನವಸತಿಯಿಲ್ಲ.

ಅಂದಿನ ಮುಸ್ಲಿಮ್ ರಾಜ್ಯಗಳ ಸಂಪರ್ಕದ ಪರಿಣಾಮವಾಗಿ ವಿಜಯನಗರದ ಕಟ್ಟಡಗಳಲ್ಲಿ ಮುಸ್ಲಿಮ್ ಪ್ರಭಾವವನ್ನು ಸ್ವಲ್ಪ ಮಟ್ಟಿಗೆ ಕಾಣಬಹುದು.

ವಿರೂಪಾಕ್ಷ ದೇವಾಲಯ
ವಿರೂಪಾಕ್ಷ ದೇವಾಲಯ

[ಬದಲಾಯಿಸಿ] ಪವಿತ್ರ ಕೇಂದ್ರ

ಹಂಪೆ ಗ್ರಾಮದಿಂದ ಪೂರ್ವಕ್ಕೆ ಮಾತಂಗ ಪರ್ವತದ ವರೆಗೆ ಹಬ್ಬಿರುವ ಪ್ರದೇಶಕ್ಕೆ ಈ ಹೆಸರು. ಕೆಲವರ ಅಭಿಪ್ರಾಯದಂತೆ ವಿಠ್ಠಲ ದೇವಸ್ಥಾನದ ಪ್ರದೇಶವೂ ಇದಕ್ಕೆ ಸೇರುತ್ತದೆ.

[ಬದಲಾಯಿಸಿ] ವಿರೂಪಾಕ್ಷ ದೇವಾಲಯ

ಉಳಿದಿರುವ ಈ ದೇವಾಲಯ ಮತ್ತು ಅದರ ಆವರಣ ಹಂಪೆ ಗ್ರಾಮದ ಮುಖ್ಯ ಭಾಗ. ಇದಕ್ಕೆ ಪಂಪಾಪತಿ ದೇವಸ್ಥಾನ ಎಂದೂ ಹೆಸರು. ೧೩ನೇ ಶತಮಾನದಿಂದ ೧೭ನೇ ಶತಮಾನದ ನಡುವೆ ಇದನ್ನು ಕಟ್ಟಿ ಬೆಳೆಸಲಾಯಿತು. ಈ ದೇವಸ್ಥಾನದಲ್ಲಿ ಎರಡು ಆವರಣಗಳು ಮತ್ತಿ ಗೋಪುರಗಳು ಇವೆ. ಇದರ ಎದುರು ಇರುವ ರಸ್ತೆ ಪೂರ್ವಕ್ಕೆ ಅರ್ಧ ಮೈಲು ಸಾಗುತ್ತದೆ, ನಂದಿಯ ಒಂದು ಶಿಲ್ಪದತ್ತ.

ಈ ದೇವಸ್ಥಾನ ಇಂದೂ ಸಹ ಉಪಯೋಗದಲ್ಲಿದೆ. ಶಿವನ ಒಂದು ರೂಪವಾದ ವಿರೂಪಾಕ್ಷ ಮತ್ತು ಪಂಪಾ ಎಂಬ ಸ್ಥಳೀಯ ದೇವತೆಯ ದೇವಾಲಯ ಇದು.

ಕೃಷ್ಣ ದೇವಾಲಯ
ಕೃಷ್ಣ ದೇವಾಲಯ

[ಬದಲಾಯಿಸಿ] ಕೃಷ್ಣ ದೇವಾಲಯ

ಇದು ಹಂಪೆಯ ದಕ್ಷಿಣದಲ್ಲಿ ಈಗ ಪಾಳು ಬಿದ್ದಿರುವ ದೇವಸ್ಥಾನ. ಒರಿಸ್ಸಾದಲ್ಲಿ ದಂಡಯಾತ್ರೆಯ ನಂತರ ಕೃಷ್ಣದೇವರಾಯ ಕಟ್ಟಿಸಿದ ದೇವಾಲಯ. ಇದರ ಕೆಲವು ಭಾಗಗಳು ಮತ್ತು ಆವರಣ ಈಗ ಕುಸಿದಿವೆ.

ಉಗ್ರ ನರಸಿಂಹ
ಉಗ್ರ ನರಸಿಂಹ

[ಬದಲಾಯಿಸಿ] ಉಗ್ರ ನರಸಿಂಹ

ಹಂಪೆಯ ದಕ್ಷಿಣದಲ್ಲೇ ಸುಮಾರು ೨೦ ಅಡಿ ಎತ್ತರದ ಬೃಹತ್ ಗಾತ್ರದ ಕಲ್ಲಿನಲ್ಲಿ ಕೆತ್ತಿದ ವಿಷ್ಣುವಿನ ಉಗ್ರರೂಪವಾದ ಉಗ್ರ ನರಸಿಂಹನ ಮೂರ್ತಿ ಇದೆ. ಇದನ್ನು ಇತ್ತೀಚೆಗೆ ಪುನಶ್ಚೇತನಗೊಳಿಸಲಾಗಿದೆ; ಮೂರ್ತಿಯ ಮಂಡಿಯ ಬಳಿ ಇರುವ ಜಲ್ಲಿಕಲ್ಲಿನ ಪಟ್ಟಿ ಅದಕ್ಕೆ ಭದ್ರತೆಯನ್ನು ಒದಗಿಸುತ್ತದೆ. ಈ ಮೂರ್ತಿಯ ಕೆತ್ತನೆ ಕೃಷ್ಣದೇವರಾಯನಿಂದ ಅಥವಾ ಅದೇ ಕಾಲದ ಓರ್ವ ಶ್ರೀಮಂತ ವರ್ತಕರಿಂದ ಸಂದ ಧನಸಹಾಯದಿಂದ ಆದದ್ದೆಂದು ನಂಬಲಾಗಿದೆ.

ಕಟ್ಟಿದಾಗ ಮೂರ್ತಿಯ ಮಂಡಿಯ ಮೇಲೆ ಒಂದು ಸಣ್ಣ ಲಕ್ಷ್ಮಿಯ ಮೂರ್ತಿ ಸಹ ಇತ್ತು; ಇದು ಪ್ರಾಯಶಃ ಲೂಟಿಯ ಪರಿಣಾಮವಾಗಿ ಬಿದ್ದು ಹೋಗಿದೆ. ಈ ಮೂರ್ತಿ ಈಗ ಕಮಲಾಪುರದ ವಸ್ತು ಸಂಗ್ರಹಾಲಯದಲ್ಲಿ ಇದೆ.

[ಬದಲಾಯಿಸಿ] ಸುಗ್ರೀವನ ಗುಹೆ

ಇದು ಒಂದು ಪ್ರಾಕೃತಿಕ ಗುಹೆ, ಇಲ್ಲಿಯೇ ಶ್ರೀರಾಮ ಹನುಮಂತನನ್ನು ಮತ್ತು ಸುಗ್ರೀವನನ್ನು ಭೇಟಿಯಾದ ಎಂಬ ನಂಬಿಕೆ ಪ್ರಚಲಿತವಾಗಿದೆ. ಗುಹೆಯಲ್ಲಿ ಬಣ್ಣದ ಗುರುತುಗಳು ಮತ್ತು ತೀರ್ಥಯಾತ್ರಿಗಳ ಗುರುತುಗಳು ಕಾಣಬರುತ್ತವೆ.

[ಬದಲಾಯಿಸಿ] ಕೋದಂಡರಾಮ ದೇವಸ್ಥಾನ

ಹಂಪೆಯ ಪೂರ್ವಕ್ಕೆ ಇದ್ದು, ಪವಿತ್ರ ಕೇಂದ್ರದ ನಡುವೆ ತುಂಗಭದ್ರೆಯ ಒಂದು ತಟದಲ್ಲಿ ಇರುವ ದೇವಸ್ಥಾನ. ಈ ದೇವಸ್ಥಾನ ಶ್ರೀರಾಮ ಸುಗ್ರೀವನಿಗೆ ಪಟ್ಟ ಕಟ್ಟಿದ ಸ್ಥಳವೆಂಬ ಪ್ರತೀತಿ ಇದೆ. ಈ ದೇವಸ್ಥಾನ ಸಹ ಇನ್ನೂ ಉಪಯೋಗದಲ್ಲಿದೆ.

ವಿಠ್ಠಲ ದೇವಸ್ಥಾನದ ಕಲ್ಲಿನ ರಥ
ವಿಠ್ಠಲ ದೇವಸ್ಥಾನದ ಕಲ್ಲಿನ ರಥ

[ಬದಲಾಯಿಸಿ] ವಿಠ್ಠಲ ದೇವಸ್ಥಾನ

ಹಂಪೆಯ ಉತ್ತರ ಪೂರ್ವಕ್ಕೆ, ಆನೆಗೊಂಡಿಯ ಎದುರು ವಿಜಯನಗರದ ಪ್ರಮುಖ ಸ್ಮಾರಕಗಳಲ್ಲೊದಾದ ವಿಜಯವಿಠ್ಠಲ ದೇಗುಲವಿದೆ. ವಿಠ್ಠಲ ಮಹಾರಾಷ್ಟ್ರದಲ್ಲಿ ಪ್ರಚಲಿತವಾಗಿರುವ ವಿಷ್ಣುವಿನ ಒಂದು ರೂಪ. ಇದನ್ನು ೧೬ನೇ ಶತಮಾನದಲ್ಲಿ ಕಟ್ಟಲಾಯಿತೆಂದು ನಂಬಲಾಗಿದೆ.

ಈ ದೇವಸ್ಥಾನದ ಎದುರು ಪ್ರಸಿದ್ಧ ಕಲ್ಲಿನ ರಥವಿದೆ. ಇದೇ ಒಂದು ಪುಟ್ಟ ದೇವಸ್ಥಾನವೂ ಹೌದು, ಒಂದೇ ಕಲ್ಲಿನಲ್ಲಿ ಕಡೆಯಲಾಗಿದೆ, ಮತ್ತು ಬೀದಿಗಳಲ್ಲಿ ರಥಯಾತ್ರೆ ಹೊರಡುವ ದೇವಸ್ಥಾನಗಳ ರಥಗಳನ್ನು ಹೋಲುತ್ತದೆ.

[ಬದಲಾಯಿಸಿ] ರಾಜ ಕೇಂದ್ರ

ಈ ವಿಶಾಲ ಪ್ರದೇಶ ಹಂಪೆಯ ದಕ್ಷಿಣಪೂರ್ವದಲ್ಲಿ ೨ ಕಿಮೀ ದೂರದಲ್ಲಿ ಆರಂಭವಾಗಿ ಸುಮಾರು ಕಮಲಾಪುರಮ್ ಗ್ರಾಮದ ವರೆಗೆ ಹಬ್ಬಿದೆ. ಈ ಪ್ರದೇಶದಲ್ಲಿ ಅರಮನೆಗಳ ಅವಶೇಷಗಳು, ಆಡಳಿತ ಕಟ್ಟಡಗಳು ಮತ್ತು ರಾಜಮನೆತನಕ್ಕೆ ನೇರವಾಗಿ ಸಂಬಂಧಪಟ್ಟ ಕೆಲವು ದೇವಸ್ಥಾನಗಳಿವೆ. ಅಡಿಪಾಯಗಳನ್ನು ಬಿಟ್ಟರೆ ಅರಮನೆಗಳ ಹೆಚ್ಚು ಅವಶೇಷಗಳು ಉಳಿದಿಲ್ಲ - ಮುಖ್ಯವಾಗಿ ಅರಮನೆಗಳು ಮರದ ದಿಮ್ಮಿಗಳಿಂದ ಕಟ್ಟಲ್ಪಟ್ಟಿದ್ದರಿಂದ. ದೇಗುಲಗಳು ಮತ್ತಿತರ ಕಲ್ಲಿನ ಕಟ್ಟಡಗಳು ಉಳಿದಿವೆ, ಸುತ್ತಲ ಕೋಟೆ ಗೋಡೆಗಳೊಂದಿಗೆ.

[ಬದಲಾಯಿಸಿ] ರಾಮಚಂದ್ರ ದೇವಸ್ಥಾನ

ರಾಮನ ಅನೇಕ ಪ್ರತಿಮೆಗಳು ಕಂಡುಬರುವುದರಿಂದ ಇದಕ್ಕೆ ಹಜಾರರಾಮ ದೇವಸ್ಥಾನ ಎಂದೂ ಹೆಸರು (ಸಾವಿರ ರಾಮರ ದೇವಸ್ಥಾನ).ಇದು ಹಂಪೆಯ ದಕ್ಷಿಣಪೂರ್ವದಲ್ಲಿ ರಾಜಕೇಂದ್ರದಲ್ಲಿ ಇದೆ.

[ಬದಲಾಯಿಸಿ] ಭೂಗತ ದೇವಸ್ಥಾನ

ಇದಕ್ಕೆ ಸಹ ವಿರೂಪಾಕ್ಷ ದೇವಾಲಯ ಎಂದು ಹೆಸರು. ಈ ವಿಶಾಲ ದೇಗುಲ ಉತ್ಖನನ ನಡೆಸಿದ ಪ್ರದೇಶದಲ್ಲಿ ನಿಂತಿದೆ, ಮಣ್ಣಿನ ಗೋಡೆಗಳಿಂದ ಸುತ್ತುವರಿದು.

ಲೋಟಸ್ ಅರಮನೆ
ಲೋಟಸ್ ಅರಮನೆ

[ಬದಲಾಯಿಸಿ] ಲೋಟಸ್ ಮಹಲ್

ಇದು ಮಹಾರಾಣಿಯವರ ಅರಮನೆಯಾಗಿತ್ತು. ಇದರಲ್ಲಿ ಹರಿಯುವ ನೀರಿನ ಸೌಕರ್ಯವನ್ನೊಳಗೊಂಡಂತೆ ಅನೇಕ ವಿಶೇಷ ಪರಿಸರ ನಿಯಂತ್ರಣ ಉಪಕರಣಗಳಿವೆ.

ಮಹಾರಾಣಿಯ ಪುಷ್ಕರಿಣಿ
ಮಹಾರಾಣಿಯ ಪುಷ್ಕರಿಣಿ

[ಬದಲಾಯಿಸಿ] ಪುಷ್ಕರಿಣಿ

ಇದು ಒಂದು ಮೆಟ್ಟಲುಗಳುಳ್ಳ ವಿಶಾಲವಾದ ಬಾವಿ, ಸ್ನಾನ ಮಾಡುವುದಕ್ಕೆ ರಚಿಸಲಾದದ್ದು. ಹಗಲಿನ ಬಿಸಿಲಿನ ಬೇಗೆಯಿಂದ ಇ ರೀತಿಯ ಬಾವಿಗಳು ಆರಾಮವನ್ನು ತರುತ್ತಿದ್ದವು. ನಗರದಲ್ಲಿ ಜನವಸತಿಯಿದ್ದಾಗ ಪ್ರಾಯಶಃ ಈ ಬಾವಿ ಶಾಮಿಯಾನಗಳಿಂದ ಆವೃತವಾಗಿರುತ್ತಿತ್ತು.

ಆನೆ ಲಾಯ
ಆನೆ ಲಾಯ

[ಬದಲಾಯಿಸಿ] ಆನೆ ಲಾಯಗಳು

ವಿಶಾಲವಾದ ಆನೆಲಾಯಗಳ ಗುಂಪು ರಾಜಮನೆತನದ ಆನೆಗಳನ್ನು ಸಾಕುವುದಕ್ಕೆ ಮೀಸಲಾಗಿತ್ತು. ಈ ಲಾಯಗಳ ಎದುರು ಇದ್ದ ಪ್ರದೇಶ ಆನೆಗಳ ಮತ್ತು ಸೈನಿಕರ ಪ್ರಭಾತಭೇರಿಗಾಗಿ ಉಪಯೋಗಿಸಲ್ಪಡುತ್ತಿತ್ತು.

ಇತರ ಭಾಷೆಗಳು
Static Wikipedia 2008 (no images)

aa - ab - af - ak - als - am - an - ang - ar - arc - as - ast - av - ay - az - ba - bar - bat_smg - bcl - be - be_x_old - bg - bh - bi - bm - bn - bo - bpy - br - bs - bug - bxr - ca - cbk_zam - cdo - ce - ceb - ch - cho - chr - chy - co - cr - crh - cs - csb - cu - cv - cy - da - de - diq - dsb - dv - dz - ee - el - eml - en - eo - es - et - eu - ext - fa - ff - fi - fiu_vro - fj - fo - fr - frp - fur - fy - ga - gan - gd - gl - glk - gn - got - gu - gv - ha - hak - haw - he - hi - hif - ho - hr - hsb - ht - hu - hy - hz - ia - id - ie - ig - ii - ik - ilo - io - is - it - iu - ja - jbo - jv - ka - kaa - kab - kg - ki - kj - kk - kl - km - kn - ko - kr - ks - ksh - ku - kv - kw - ky - la - lad - lb - lbe - lg - li - lij - lmo - ln - lo - lt - lv - map_bms - mdf - mg - mh - mi - mk - ml - mn - mo - mr - mt - mus - my - myv - mzn - na - nah - nap - nds - nds_nl - ne - new - ng - nl - nn - no - nov - nrm - nv - ny - oc - om - or - os - pa - pag - pam - pap - pdc - pi - pih - pl - pms - ps - pt - qu - quality - rm - rmy - rn - ro - roa_rup - roa_tara - ru - rw - sa - sah - sc - scn - sco - sd - se - sg - sh - si - simple - sk - sl - sm - sn - so - sr - srn - ss - st - stq - su - sv - sw - szl - ta - te - tet - tg - th - ti - tk - tl - tlh - tn - to - tpi - tr - ts - tt - tum - tw - ty - udm - ug - uk - ur - uz - ve - vec - vi - vls - vo - wa - war - wo - wuu - xal - xh - yi - yo - za - zea - zh - zh_classical - zh_min_nan - zh_yue - zu -

Static Wikipedia 2007 (no images)

aa - ab - af - ak - als - am - an - ang - ar - arc - as - ast - av - ay - az - ba - bar - bat_smg - bcl - be - be_x_old - bg - bh - bi - bm - bn - bo - bpy - br - bs - bug - bxr - ca - cbk_zam - cdo - ce - ceb - ch - cho - chr - chy - co - cr - crh - cs - csb - cu - cv - cy - da - de - diq - dsb - dv - dz - ee - el - eml - en - eo - es - et - eu - ext - fa - ff - fi - fiu_vro - fj - fo - fr - frp - fur - fy - ga - gan - gd - gl - glk - gn - got - gu - gv - ha - hak - haw - he - hi - hif - ho - hr - hsb - ht - hu - hy - hz - ia - id - ie - ig - ii - ik - ilo - io - is - it - iu - ja - jbo - jv - ka - kaa - kab - kg - ki - kj - kk - kl - km - kn - ko - kr - ks - ksh - ku - kv - kw - ky - la - lad - lb - lbe - lg - li - lij - lmo - ln - lo - lt - lv - map_bms - mdf - mg - mh - mi - mk - ml - mn - mo - mr - mt - mus - my - myv - mzn - na - nah - nap - nds - nds_nl - ne - new - ng - nl - nn - no - nov - nrm - nv - ny - oc - om - or - os - pa - pag - pam - pap - pdc - pi - pih - pl - pms - ps - pt - qu - quality - rm - rmy - rn - ro - roa_rup - roa_tara - ru - rw - sa - sah - sc - scn - sco - sd - se - sg - sh - si - simple - sk - sl - sm - sn - so - sr - srn - ss - st - stq - su - sv - sw - szl - ta - te - tet - tg - th - ti - tk - tl - tlh - tn - to - tpi - tr - ts - tt - tum - tw - ty - udm - ug - uk - ur - uz - ve - vec - vi - vls - vo - wa - war - wo - wuu - xal - xh - yi - yo - za - zea - zh - zh_classical - zh_min_nan - zh_yue - zu -

Static Wikipedia 2006 (no images)

aa - ab - af - ak - als - am - an - ang - ar - arc - as - ast - av - ay - az - ba - bar - bat_smg - bcl - be - be_x_old - bg - bh - bi - bm - bn - bo - bpy - br - bs - bug - bxr - ca - cbk_zam - cdo - ce - ceb - ch - cho - chr - chy - co - cr - crh - cs - csb - cu - cv - cy - da - de - diq - dsb - dv - dz - ee - el - eml - eo - es - et - eu - ext - fa - ff - fi - fiu_vro - fj - fo - fr - frp - fur - fy - ga - gan - gd - gl - glk - gn - got - gu - gv - ha - hak - haw - he - hi - hif - ho - hr - hsb - ht - hu - hy - hz - ia - id - ie - ig - ii - ik - ilo - io - is - it - iu - ja - jbo - jv - ka - kaa - kab - kg - ki - kj - kk - kl - km - kn - ko - kr - ks - ksh - ku - kv - kw - ky - la - lad - lb - lbe - lg - li - lij - lmo - ln - lo - lt - lv - map_bms - mdf - mg - mh - mi - mk - ml - mn - mo - mr - mt - mus - my - myv - mzn - na - nah - nap - nds - nds_nl - ne - new - ng - nl - nn - no - nov - nrm - nv - ny - oc - om - or - os - pa - pag - pam - pap - pdc - pi - pih - pl - pms - ps - pt - qu - quality - rm - rmy - rn - ro - roa_rup - roa_tara - ru - rw - sa - sah - sc - scn - sco - sd - se - sg - sh - si - simple - sk - sl - sm - sn - so - sr - srn - ss - st - stq - su - sv - sw - szl - ta - te - tet - tg - th - ti - tk - tl - tlh - tn - to - tpi - tr - ts - tt - tum - tw - ty - udm - ug - uk - ur - uz - ve - vec - vi - vls - vo - wa - war - wo - wuu - xal - xh - yi - yo - za - zea - zh - zh_classical - zh_min_nan - zh_yue - zu