ಸಜ್ಜಪ್ಪ
From Wikipedia
ಕರ್ನಾಟಕದಲ್ಲಿ ಹಬ್ಬಗಳಲ್ಲಿ ಮಾಡುವ ಒಂದು ಬಗೆಯ ಸಿಹಿ ತಿಂಡಿ.
[ಬದಲಾಯಿಸಿ] ಬೇಕಾಗುವ ಪದಾರ್ಥಗಳು
- ಚಿರೋಟಿ ರವೆ -
- ಕೊಬ್ಬರಿ(ಹಸಿ ಕಾಯಿತುರಿ)
- ಬೆಲ್ಲ
- ಮೈದಾಹಿಟ್ಟು ಸ್ವಲ್ಪ
- ಕರಿಯಲು ಎಣ್ಣೆ
[ಬದಲಾಯಿಸಿ] ತಯಾರಿಸುವ ವಿಧಾನ
ಮೊದಲಿಗೆ ಚಿರೋಟಿ ರವೆಯನ್ನು ಒಂದು ಪಾತ್ರೆಗೆ ಹಾಕಿಕೊಳ್ಳಬೇಕು. ಅದಕ್ಕೆ ಮೈದಾಹಿಟ್ಟು ಮತ್ತು ತುಪ್ಪವನ್ನು ಸುರಿದು ಚೆನ್ನಾಗಿ ಕಲಸಬೇಕು. ಈ ಮಿಶ್ರಣಕ್ಕೆ ನೀರನ್ನು ಹಾಕಿ ಪೂರಿ ಹಿಟ್ಟಿನ ಹದಕ್ಕೆ ಕಲಸಿಕೊಂಡು, ಚೆನ್ನಾಗಿ ನಾದಬೇಕು. ಹತ್ತರಿಂದ ಹದಿನೈದು ನಿಮಿಷದವರೆಗೆ ಹಿಟ್ಟನ್ನು ನೆನೆಯಲು ಬಿಡಬೇಕು. ನಂತರ ಚಪಾತಿಯಂತೆ ಲಟ್ಟಿಸಿಕೊಂಡು ನಂತರ ಅದರಲ್ಲಿ ಹೂರಣವನ್ನು ಇಟ್ಟು , ಹಿಟ್ಟಿನ ತುದಿಯಿಂದ ಮುಚ್ಚಿ ಮತ್ತೆ ಅದನ್ನು ಲಟ್ಟಿಸಿ, ಗುಂಡನೆಯ ಆಕಾರಕ್ಕೆ ಬಂದಾಗ ಎಣ್ಣೆಯಲ್ಲಿ ಹಾಕಿ, ಗರಿಗರಿಯಾಗಿ, ಕೆಂಪು ಬಣ್ಣ ಬರುವರೆಗೂ ಕರಿಯಬೇಕು.
[ಬದಲಾಯಿಸಿ] ಹೂರಣ ತಯಾರಿಸುವ ವಿಧಾನ
ಕಾಯಿತುರಿ ಹಾಗೂ ನುಣ್ಣಗೆ ಜಜ್ಜಿಕೊಂಡ ಬೆಲ್ಲವನ್ನು ಒಂದು ಬಾಣಲೆಯಲ್ಲಿ ಹಾಕಿ ಹುರಿದುಕೊಂಡು, ಬೆಲ್ಲ ಕೆಂಪಾಗಾದ ಬಳಿಕ ಏಲಕ್ಕಿ ಪುಡಿಯನ್ನು ಸೇರಿಸಿಕೊಳ್ಳಬೇಕು. ಈ ಮಿಶ್ರಣಕ್ಕೆಹೂರಣ ಎನ್ನುತ್ತಾರೆ.
ವರ್ಗಗಳು: ಖಾದ್ಯ, ತಿನಿಸು | ಕರ್ನಾಟಕ | ಹಿಂದೂ ಧರ್ಮ | ಆಹಾರ | ಹಬ್ಬಗಳು