ಅಬ್ದುಲ್ ಕಲಾಮ್
From Wikipedia
ಡಾ. ಅಬ್ದುಲ್ ಕಲಾಮ್ | |
![]() |
|
೧೧ನೇ ಭಾರತದ ರಾಷ್ಟ್ರಪತಿ
|
|
ಪ್ರಸಕ್ತ | |
ಅಧಿಕಾರ ಪ್ರಾರಂಭ ಜುಲೈ ೨೫, ೨೦೦೨ |
|
ಉಪ ರಾಷ್ಟ್ರಪತಿ | ಭೈರೋನ್ ಸಿಂಗ್ ಶೇಖಾವತ್ |
---|---|
ಪೂರ್ವಾಧಿಕಾರಿ | ಕೆ.ಆರ್. ನಾರಾಯಣನ್ |
ಉತ್ತರಾಧಿಕಾರಿ | ಪ್ರಸಕ್ತ |
|
|
ಜನನ | ಅಕ್ಟೋಬರ್ ೧೫, ೧೯೩೧ ಧನುಷ್‍ಕೋಡಿ, ರಾಮೇಶ್ವರಮ್, ತಮಿಳುನಾಡು, ಭಾರತ |
ರಾಜಕೀಯ ಪಕ್ಷ | ಯಾವುದಕ್ಕೊ ಸೇರಿಲ್ಲ |
ಜೀವನಸಂಗಾತಿ | ಬ್ರಹ್ಮಚಾರಿ |
ಧರ್ಮ | ಇಸ್ಲಾಂ |
ಅವುಲ್ ಪಕೀರ್ ಜೈನುಲಬ್ದೀನ್ ಅಬ್ದುಲ್ ಕಲಾಮ್ ಭಾರತದ ಪ್ರಸಕ್ತ ರಾಷ್ತ್ರಪತಿಗಳು. ಇವರು ಭಾರತದ ಹನ್ನೊಂದನೇ ರಾಷ್ಟ್ರಪತಿಗಳಾಗಿ ಜುಲೈ ೨೫, ೨೦೦೨ ರಂದು ಅಧಿಕಾರ ಸ್ವೀಕರಿಸಿದರು.
ಇವರ ಜನನ ಅಕ್ಟೋಬರ್ ೧೫,೧೯೩೧ ರಂದು ತಮಿಳುನಾಡಿನ ರಾಮೇಶ್ವರಂನ ಧನುಷ್ಕೋಡಿಯಲ್ಲಿ ಆಯಿತು. ೧೯೫೮ರಲ್ಲಿ ಮದ್ರಾಸ್ ಇನ್ಸ್‍ಟಿಟ್ಯೂಟ್ ಆಫ್ ಟೆಕ್ನೋಲಜಿಯಿಂದ ಏರೋನಾಟಿಕಲ್ ಇಂಜಿನಿಯರಿಂಗ್‍ನಲ್ಲಿ ಪದವಿಯನ್ನು ಪಡೆದರು. ಡಿಆರ್‍ಡಿಓ ಹಾಗೂ ಇಸ್ರೋಗಳಲ್ಲಿ ವಿಜ್ಞಾನಿಯಾಗಿ ಕಾರ್ಯ ನಿರ್ವಹಿಸಿರುವ ಇವರು ಭಾರತದ ಅಣುಬಾಂಬು ಹಾಗು ಕ್ಷಿಪಣಿಗಳ ಜನಕ ಎಂದೇ ಪ್ರಸಿದ್ಧರು. ಇವರು ಬ್ರಹ್ಮಚಾರಿಗಳು.
ಇವರು ರಚಿಸಿದ ಕೆಳಗಿನ ಪುಸ್ತಕಗಳು ಇಂದಿನ ಯುವ ಜನಾಂಗಕ್ಕೆ ಸ್ಪೂರ್ಥಿಯ ಸೆಲೆಗಳು:
- Wings of Fire (ಕನ್ನಡ ಅನುವಾದ - ಅಗ್ನಿಯ ರೆಕ್ಕೆಗಳು): ಈ ಪುಸ್ತಕವು ಇವರ ಆತ್ಮಕಥೆಯಾಗಿದ್ದು, ಇವರ ಸರಳ ಹಾಗೂ ಮಾದರಿ ಜೀವನದ ಅನೇಕ ಘಟನೆಗಳನ್ನು ಓದುಗರಿಗೆ ತೆರೆದಿಡುತ್ತದೆ. ಇಂದಿನ ಯುವ ಪೀಳಿಗೆಗೆ ಇದೊಂದು ಅನುರೂಪವಾದ ಮಾರ್ಗದರ್ಶಿ.
- India 2020 : ಈ ಪುಸ್ತಕದಲ್ಲಿ ಕಲಾಮ್ ರವರು ೨೦೨೦ನೇ ಇಸ್ವಿಯಲ್ಲಿ ಭಾವಿ ಭಾರತವು ಹೇಗಿರಬೇಕೆಂದು ತಮ್ಮ ಕನಸನ್ನು ಬಿಚ್ಚಿಡುತ್ತಾರೆ. ಯುವ ಜನಾಂಗಕ್ಕೆ ಸ್ಪೂರ್ಥಿಯಾಗಬಲ್ಲಂಥಹ ಕೃತಿ.