ಅಹ್ಮದಾಬಾದ್
From Wikipedia
ಅಹ್ಮದಾಬಾದ್ ಗುಜರಾತ್ ರಾಜ್ಯದ ಪೂರ್ವ ರಾಜಧಾನಿ. ಇದು ಭಾರತದ ಪ್ರಮುಖ ಕೈಗಾರಿಕಾ ನಗರಗಳಲ್ಲೊಂದು. ಗುಜರಾತಿನ ಅತಿ ದೊಡ್ಡ ನಗರವಾದ ಇದು, ಭಾರತದ ೭ನೇ ದೊಡ್ಡ ನಗರ. ೫ ಮಿಲಿಯನ್ ಗಿಂತಲೂ ಹೆಚ್ಚು ಜನಸಂಖ್ಯೆ ಈ ನಗರದ್ದು. ಅಹ್ಮದಾಬಾದ್ ನಗರ ಕೆಲವೊಮ್ಮೆ ಕರ್ನಾವತಿ (ಹಳೆಯ ಹೆಸರು) ಎಂದೂ ಕೆಲವೊಮ್ಮೆ ಅಮ್ದವಾದ್ (ಗುಜರಾತಿ ಭಾಷೆಯಲ್ಲಿ ಉಚ್ಛರಿಸಿದಂತೆ) ಕರೆಯಲ್ಪಡುತ್ತದಂತೆ.
ಅಹ್ಮದಾಬಾದ್ ಪಟ್ಟಣವನ್ನು ೧೫ನೇ ಶತಮಾನದಲ್ಲಿ ಸುಲ್ತಾನ್ ಅಹ್ಮದ್ ಶಾ ಸಾಬರಮತಿ ನದಿ ತೀರದಲ್ಲಿ ಸ್ಥಾಪಿಸಿದನಂತೆ. ಗುಜರಾತಿನ ಸುಲ್ತನತೆಯ ರಾಜಧಾನಿಯೂ ಈ ನಗರ ಅಗಿತ್ತು ಎಂದು ಐತಿಹಾಸಿಕ ಮೂಲಗಳು ತಿಳಿಸುತ್ತವೆ.