ಕ್ಷುದ್ರ ಗ್ರಹ
From Wikipedia

ನಕ್ಷತ್ರಾಕೃತಿಯ ಸಣ್ಣ ಗ್ರಹ.ಮಂಗಳ ಹಾಗೂ ಗುರು ಗ್ರಹಗಳ ನಡುವಣ ಅಂತರದಲ್ಲಿ ಅಸಂಖ್ಯಾತ ಎಸ್ಟೆರೊಇಡ್ ಗಳು ಇವೆ.ಖಗೋಳ ವಿಜ್ಞಾನಿಗಳು ಇಲ್ಲಿ ಸುಮಾರು ೨೦೦೦ದಷ್ಟು ಗುರುತಿಸಿದ್ದಾರೆ.ಗುರುತಿಸಲಾಗದ ಇನ್ನೂ ಸಾವಿರಾರು ಇರಬಹುದು.ಇವುಗಳಲ್ಲಿ ಅತ್ಯಂತ ದೊಡ್ಡದಾದ 'ಸೆರೆಸ್'(ceres)ನ ವ್ಯಾಸ ಕೇವಲ ೬೮೭ ಕಿ.ಮೀ.ಗಳು (೪೨೫ ಮೈಲಿಗಳು).ಇವುಗಳ ಗಾತ್ರ ೧೬ ರಿಂದ ೮೦೦ ಕಿ.ಮೀ.(೧ ರಿಂದ ೫೦೦ ಮೈಲಿಗಳು).ಇವು ಸೂರ್ಯನ ಸುತ್ತ ಪ್ರದಕ್ಷಿಣೆ ಹಾಕಲು ೬೪೩ ರಿಂದ ೫,೦೦೦ ದಿನಗಳನ್ನು ತೆಗೆದುಕೊಳ್ಳುತ್ತವೆ.
ಕೆಲವು ಖಗೋಳ ವಿಜ್ಞಾನಿಗಳ ಪ್ರಕಾರ ಎಸ್ಟೆರೊಇಡ್ ಗಳ ಹುಟ್ಟು,ಮಿಲಿಯಾಂತರ ವರ್ಷಗಳ ಹಿಂದೆ ಚೂರುಚೂರಾದ ಗ್ರಹಗಳಿಂದ ಆಗಿದೆ.