ಚಂದ್ರಶೇಖರ ವೆಂಕಟ ರಾಮನ್
From Wikipedia
ಡಾ|ಸರ್. ಸಿ. ವಿ. ರಾಮನ್ ನೋಬೆಲ್ ಪ್ರಶಸ್ತಿ ಗೆದ್ದ ಪ್ರಪ್ರಥಮ ಭಾರತೀಯ ವಿಜ್ಞಾನಿ. ಈ ಪ್ರಶಸ್ತಿಯನ್ನು ೧೯೩೦ರಲ್ಲಿ ಅವರದೆ ಹೆಸರಿಂದ ಅಲಂಕೃತವಾದ "ರಾಮನ್ ಎಫೆಕ್ಟ್" ಎಂಬ ಶೋಧನೆಗಾಗಿ ಭೌತಶಾಸ್ತ್ರ ಕ್ಷೆತ್ರದಲ್ಲಿ ಪಡೆದರು.
[ಬದಲಾಯಿಸಿ] ಜೀವನ
ಸಿ. ವಿ. ರಾಮನ್ ನವೆಂಬರ್ ೭, ೧೮೮೮ರಲ್ಲಿ ತಮಿಳುನಾಡಿನ ತಿರುಚಿನಾಪಳ್ಳಿಯಲ್ಲಿ ಜನಿಸಿದರು. ಅವರ ತಂದೆ ಕಾಲೇಜಿನಲ್ಲಿ ಭೌತಶಾಸ್ತ್ರ ಪ್ರಾಧ್ಯಾಪಕರಾಗಿದ್ದರು. ತಮ್ಮ ೧೨ನೆ ವಯಸ್ಸಿನಲ್ಲಿ ಮೆಟ್ರಿಕ್ಯುಲೆಶನ್ ಮುಗಿಸಿದ ರಾಮನ್ ನಂತರ ಮದ್ರಾಸಿನ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಬಿ ಎಸ್ಸಿ (೧೯೦೪) ಹಾಗು ಎಂ ಎಸ್ಸಿ (೧೯೦೭) ಪದವಿಗಳನ್ನು ಪಡೆದರು. ೧೯೦೭ರಲ್ಲಿ ಭಾರತೀಯ ಸಿವಿಲ್ ಸರ್ವಿಸ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಕಲ್ಕತ್ತೆಯಲ್ಲಿ ಡೆಪ್ಯುಟಿ ಅಕೌಂಟೆಂಟ್ ಜನರಲ್ ಆಗಿ ವೃತ್ತಿ ಜೀವನ ಆರಂಭಿಸಿ, ೧೯೧೭ರಲ್ಲಿ ಕಲ್ಕತ್ತಾ ವಿಶ್ವವಿದ್ಯಾಲಯದಲ್ಲಿ ಭೌತಶಾಸ್ತ್ರದ ಪ್ರಾಚಾರ್ಯರಾದರು. ೧೯೨೪ರಲ್ಲಿ ಲಂಡನಿನ ಫೆಲೊ ಆಫ್ ರಾಯಲ್ ಸೊಸೈಟಿಗೆ ರಾಮನ್ ಆಯ್ಕೆಯಾದರು. ಮಾರ್ಚ್ ೧೬ ೧೯೨೮ರಲ್ಲಿ ತಮ್ಮ ಶೋಧನೆ ರಾಮನ್ ಎಫೆಕ್ಟನ್ನು ಬೆಂಗಳೂರಿನಲ್ಲಿ ಬಹಿರಂಗ ಪಡಿಸಿದ ರಾಮನ್, ೧೯೩೦ರಲ್ಲಿ ಅದಕ್ಕಾಗಿ ನೋಬೆಲ್ ಪ್ರಶಸ್ತಿಗಳಿಸಿದರು. ೧೯೩೪ರಲ್ಲಿ ಬೆಂಗಳೂರಿನ ಇಂಡಿಯನ್ ಇನ್ಸ್ಟಿಟ್ಯುಟ್ ಆಫ್ ಸೈನ್ಸಿನ ನಿರ್ದೇಶಕರಾಗಿ ಅಧಿಕಾರ ವಹಿಸಿಕೊಂಡ ರಾಮನ್, ತದನಂತರ ೧೯೪೩ರಲ್ಲಿ ರಾಮನ್ ಸಂಶೋಧನಾ ಕೆಂದ್ರವನ್ನು ಬೆಂಗಳೂರಿನಲ್ಲಿ ಸ್ಥಾಪಿಸಿದರು. ನವೆಂಬರ್ ೨೧ ೧೯೭೦ರಲ್ಲಿ ರಾಮನ್ ಬೆಂಗಳೂರಿನಲ್ಲಿ ನಿಧನರಾದರು.
[ಬದಲಾಯಿಸಿ] ಸಾಧನೆಗಳು
- ಫೆಲೊ ಆಫ್ ರಾಯಲ್ ಸೊಸೈಟಿ ಸದಸ್ಯತ್ವ ೧೯೨೪
- ನೈಟ್ ಹುಡ್ ಪ್ರಶಸ್ತಿ ೧೯೨೯
- ನೋಬೆಲ್ ಪ್ರಶಸ್ತಿ ೧೯೩೦
- ಮೈಸೂರು ಮಹಾರಾಜರಿಂದ ರಾಜ ಸಭಾ ಭೂಷಣ ಗೌರವ ೧೯೩೫
- ಭಾರತ ರತ್ನ ೧೯೫೪