ತಿಂಗಳು
From Wikipedia
ತಿಂಗಳು ಚಂದ್ರನ ಚಲನೆಯನ್ನು ಆಧಾರಿಸಿ ಕಾಲವನ್ನು ಅಳೆಯುವ ಒಂದು ಪ್ರಮಾಣ. ಚಂದ್ರನು ಭೂಮಿಯ ಸುತ್ತ ತಿರುಗಲು ಸುಮಾರು ೨೯.೫೩ ದಿನಗಳನ್ನು ತಗೆದುಕೊಳ್ಳುತ್ತದೆ. ಈ ಆಧಾರದಲ್ಲಿ ಪ್ರಾಚೀನ ಕಾಲದಿಂದಲೂ ಹಲವು ಸಂಸ್ಕೃತಿಗಳಲ್ಲಿ ಈ ಆಧಾರದ ಮೇಲೆ ತಿಂಗಳನ್ನು ವರ್ಷದ ವಿಂಗಡನೆಯನ್ನಾಗಿ ಉಪಯೋಗಿಸಿದ್ದಾರೆ.
[ಬದಲಾಯಿಸಿ] ಪಂಚಾಂಗದಲ್ಲಿ ತಿಂಗಳು
ಚಂದ್ರನ ಚಲನೆಯಾಧಾರಿತ ಲೆಕ್ಕವು ಪೂರ್ಣ ದಿನಕ್ಕೆ ಸಮನಾಗದಿರುವುದರಿಂದ ಹಲವು ಚಂದ್ರಾಧಾರಿತ ತಿಂಗಳುಗಳಾದ ಮೇಲೆ ಅಧಿಕ ಮಾಸವನ್ನು ಅಳವಡಿಸಬೇಕಾಗುತ್ತದೆ. ಅದಲ್ಲದೆ ವರ್ಷದ ವಿಂಗಡನೆಯು ಚಂದ್ರಾಧರಿತ ತಿಂಗಳ ಉದ್ದಕ್ಕೆ ಸರಿಹೋಗುವುದಿಲ್ಲ. ಹೀಗಾಗಿ ಹಲವು ಸಂಸ್ಕೃತಿಗಳಲ್ಲಿ ಕ್ರಮೇಣ ಸೌರಮಾನ ಪಂಚಾಂಗಗಳು ಬಳಕೆಗೆ ಬಂದವು. ಈ ಪದ್ಧತಿಯಡಿಯಲ್ಲಿ ಸೂರ್ಯನ ಚಲನೆಯ ಆಧಾರದ ಮೇಲೆ ತಿಂಗಳುಗಳನ್ನು ವಿಭಾಗಿಸಲಾಗುತ್ತದೆ.