ಮಾನವನ ವಿಕಾಸ
From Wikipedia
ಮಾನವ ಜಾತಿಯ ಉತ್ಪತ್ತಿಯನ್ನು ವಿವರಿಸುವ ಜೀವವಿಕಾಸದ ಭಾಗವೇ ಮಾನವನ ವಿಕಾಸ. ಹಲವಾರು ಶತಮಾನಗಳಿಂದ ಹಲವರು ಮಾನವ ಮತ್ತಿತರ ವಾನರ ಜಾತಿಗಳಲ್ಲಿನ ಹೋಲಿಕೆಗಳನ್ನು ಗಮನಿಸಿದ್ದೂ ಹಾಗು ಜೀವ ವಿಕಾಸದ ಬಗ್ಗೆ ಯೋಚಿಸಿದ್ದಾದರೂ ಈ ವಾದವನ್ನು ನಿಶ್ಚಿತವಾಗಿ ಹಾಗು ವಿಸ್ತಾರವಾಗಿ ೧೮೫೯ರಲ್ಲಿ ಬಣ್ಣಿಸಿದವರು ಚಾರ್ಲ್ಸ್ ಡಾರ್ವಿನ್ರವರು. ಇದನಂತರ ಮಾನವನ ಪೂರ್ವಜರ ಪರಿಶೋಧನೆಗೆ ಹೆಚ್ಚು ಒತ್ತು ಸಿಕ್ಕಿತು. ಥಾಮಸ್ ಹಕ್ಸ್ಲಿ ೧೮೬೩ರಲ್ಲಿ ತಮ್ಮ Evidence as to Man's Place in Nature (ಪ್ರಕೃತಿಯಲ್ಲಿ ಮಾನವನ ಸ್ಥಾನದ ಬಗ್ಗೆ ಪುರಾವೆಗಳು ) ಪುಸ್ತಕದಲ್ಲಿ ಮಾನವ ಮತ್ತು ಪ್ರಸ್ತುತ ವಾನರರ ಹೋಲಿಕೆಗಳನ್ನು ವಿಶಾಲವಾಗಿ ವಿವರಿಸಿದರು.
೧೯೨೦ರ ದಶಕಗಳಲ್ಲಿ ಆಫ್ರಿಕಾದಲ್ಲಿ ಮೊದಲ ಮಾನವ ಜಾತಿಯ ಸಮೀಪ ವ್ಯುತ್ಪತ್ತಿಯಾದ ಜಾತಿಗಳ ಅವಶೇಶಗಳು ಮೊದಲ ಬಾರಿಗೆ ದೊರೆತವು. ಈ ರೀತಿಯ ಅವಶೇಶಗಳು ಪ್ರಪಂಚದ ಹಲವೆಡೆ ಕ್ರಮೇಣ ದೊರೆತವು. ಈ ಎಲ್ಲಾ ಸಾಕ್ಷಿಗಳ ಆಧಾರದ ಮೇಲೆ ಇಂದಿನ ಜ್ಞಾನದಂತೆ ಮಾನವ ವಿಕಾಸದಲ್ಲಿನ ಜಾತಿಗಳ ಕಾಲಕ್ರಮ ಈ ರೀತಿಯಲ್ಲಿ ಇದೆ:
[ಬದಲಾಯಿಸಿ] ಮಾನವ ಜಾತಿಯ (ಹೋಮೋ ) ಸದಸ್ಯರ ಪಟ್ಟಿ
- Bolded species names indicate the existence of numerous fossil records.
species | lived when (MYA) | lived where | adult length (m) | adult weight (kg) | brain volume (cm³) | fossil record | discovery / publication of name |
---|---|---|---|---|---|---|---|
H. habilis | 2.5–1.5 | Africa | 1.0–1.5 | 30–55 | 600 | many | 1960/1964 |
H. rudolfensis | 1.9 | Kenya | 1 skull | 1972/1986 | |||
H. georgicus | 1.8–1.6 | Georgia | 600 | few | 1999/2002 | ||
H. ergaster | 1.9–1.25 | E. and S. Africa | 1.9 | 700–850 | many | 1975 | |
H. erectus | 2(1.25)–0.3 | Africa, Eurasia (Java, China, Caucasus) | 1.8 | 60 | 900–1100 | many | 1891/1892 |
H. cepranensis | 0.8? | Italy | 1 skull cap | 1994/2003 | |||
H. antecessor | 0.8–0.35 | Spain, England | 1.75 | 90 | 1000 | 3 sites | 1997 |
H. heidelbergensis | 0.6–0.25 | Europe, Africa, China | 1.8 | 60 | 1100–1400 | many | 1908 |
H. neanderthalensis | 0.23–0.03 | Europe, W. Asia | 1.6 | 55–70 (heavily built) | 1200-1700 | many | (1829)/1864 |
H. rhodesiensis | 0.3–0.12 | Zambia | 1300 | very few | 1921 | ||
H. sapiens | 0.25–present | worldwide | 1.4–1.9 | 55–80 | 1000–1850 | still living | —/1758 |
H. sapiens idaltu | 0.16 | Ethiopia | 1450 | 3 craniums | 1997/2003 | ||
H. floresiensis | 0.10–0.012 | Indonesia | 1.0 | 25 | 400 | 7 individuals | 2003/2004 |