ಮಾಯಾ ರಾವ್
From Wikipedia
ಮಾಯಾ ರಾವ್ ಇವರು ೧೯೨೮ರಲ್ಲಿ ಬೆಂಗಳೂರಿನಲ್ಲಿ ಜನಿಸಿದರು. ಇವರ ತಾಯಿ ಲಲಿತಾಬಾಯಿ ; ತಂದೆ ಸಂಜೀವರಾವ.
ಪರಿವಿಡಿ |
[ಬದಲಾಯಿಸಿ] ಶಿಕ್ಷಣ
ಗುರು ಸೋಹನಲಾಲರಿಂದ ಕಥಕ ನೃತ್ಯಶೈಲಿಯಲ್ಲಿ ಶಿಕ್ಷಣ ಪಡೆದ ಮಾಯಾರಾವ್, ಭರತನಾಟ್ಯ, ಮಣಿಪುರಿ, ರಶಿಯಾದ ಬ್ಯಾಲೆ ಹಾಗು ಶ್ರೀಲಂಕಾದ ಕ್ಯಾಂಡನ್ ನೃತ್ಯಗಳಲ್ಲಿ ಸಹ ಪರಿಣಿತಿ ಪಡೆದಿದ್ದಾರೆ.
[ಬದಲಾಯಿಸಿ] ಸಾಧನೆ
೧೯೫೦ರಲ್ಲಿ ಬೆಂಗಳೂರಿನಲ್ಲಿ ನಾಟ್ಯ ಸರಸ್ವತಿ ನೃತ್ಯಶಾಲೆಯನ್ನು ತೆರೆದು ಅನೇಕ ಶಿಷ್ಯರನ್ನು ತರಬೇತುಗೊಳಿಸಿದ್ದಾರೆ. ಪಂಡಿತ ಸತ್ಯನಾರಾಯಣ ಚರ್ಕ ಇವರ ಖ್ಯಾತ ಶಿಷ್ಯರೊಲ್ಲಬ್ಬರು. [1] ದೇವರ ನಾಮ, ಗೀತಗೋವಿಂದ, ರವೀಂದ್ರರ ಕೃತಿಗಳನ್ನು, ಕುವೆಂಪುರವರ ರಾಮಾಯಣ ದರ್ಶನಂದ ಆಯ್ದ ಭಾಗಗಳನ್ನು ಇವರು ನಾಟ್ಯರೂಪದಲ್ಲಿ ಪ್ರದರ್ಶಿಸಿದ್ದಾರೆ. ಇವರ ಶಾಕುಂತಲ ಅತ್ಯಂತ ಜನಪ್ರಿಯ ರೂಪಕ.
[ಬದಲಾಯಿಸಿ] ಗೌರವ
ಇವರಿಗೆ ಸಂಗೀತ ನಾಟಕ ಅಕಾಡೆಮಿಯ ಪ್ರಶಸ್ತಿ, ರಾಜ್ಯ ಪ್ರಶಸ್ತಿ ಅಲ್ಲದೆ ಫಿನ್ಲೆಂಡಿನ ಸ್ವರ್ಣಪದಕ ದೊರೆತಿವೆ. ೧೯೮೭ರಲ್ಲಿ ಇವರು ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ಅಧ್ಯಕ್ಷರಾಗಿದ್ದರು.
[ಬದಲಾಯಿಸಿ] ಕೌಟುಂಬಿಕ
ಎಂ.ಎಸ್.ನಟರಾಜ ಇವರು ಮಾಯಾ ರಾವ್ರ ಪತಿ.