ಕುವೆಂಪು
From Wikipedia
ಕುವೆಂಪು - ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ (೧೯೦೪ - ೧೯೯೪) - ಕನ್ನಡವು ಪಡೆದ ಅತ್ಯುತ್ತಮ ಕವಿ, 'ರಾಷ್ಟ್ರಕವಿ'. ಜ್ಞಾನಪೀಠ ಪ್ರಶಸ್ತಿಯನ್ನು ಪಡೆದ ಕನ್ನಡದ ಪ್ರಥಮ ವ್ಯಕ್ತಿ. 'ವಿಶ್ವ ಮಾನವ'. ಕನ್ನಡ ಸಾಹಿತ್ಯಕ್ಕೆ ಇವರ ಕಾಣಿಕೆ ಅಪಾರ.
ಪರಿವಿಡಿ |
[ಬದಲಾಯಿಸಿ] ಜೀವನ
ಡಿಸೆಂಬರ್ ೨೯, ೧೯೦೪, ಕೊಪ್ಪ ತಾಲ್ಲೂಕಿನ ಹಿರೇಕೊಡಿಗೆಯಲ್ಲಿ ಚಿಕ್ಕಮಗಳೂರು ಜಿಲ್ಲೆಯಲ್ಲಿ ಜನಿಸಿದ ಇವರು, ಕುಪ್ಪಳ್ಳಿ (ಶಿವಮೊಗ್ಗ ಜಿಲ್ಲೆ, ತೀರ್ಥಹಳ್ಳಿ ತಾಲ್ಲೂಕು) ಹಾಗೂ ಮೈಸೂರಿನಲ್ಲಿ ಬೆಳೆದರು. ಮೈಸೂರಿನ 'ಮಹಾರಾಜಾ' ಕಾಲೇಜಿನಲ್ಲಿ ಓದಿದ ಇವರು, ಮೈಸೂರು ವಿಶ್ವವಿದ್ಯಾಲಯದಲ್ಲಿ ಸೇವೆ ಸಲ್ಲಿಸಿದರು.
[ಬದಲಾಯಿಸಿ] ಸಂದೇಶ
ಓ ನನ್ನ ಚೇತನ, ಆಗು ನೀ ಅನಿಕೇತನ
[ಬದಲಾಯಿಸಿ] ಸಾಹಿತ್ಯ
ಕುವೆಂಪುರವರು ಕನ್ನಡ ಸಾಹಿತ್ಯಕ್ಕೆ ಸಲ್ಲಿಸಿದ ಸೇವೆ ಅಪಾರ. ಇವರು ಧಾರವಾಡದಲ್ಲಿ ನಡೆದ ೧೯೫೭ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು. ೧೯೫೫ ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಪಡೆದರು. ಇವರ ಶ್ರೀ ರಾಮಾಯಣ ದರ್ಶನಂ ಕೃತಿಯು ಕನ್ನಡಕ್ಕೆ ಪ್ರಪ್ರಥಮ ಜ್ಞಾನಪೀಠ ಪ್ರಶಸ್ತಿಯನ್ನು ದೊರಕಿಸಿ ಕೊಟ್ಟಿತು. ಭಾರತ ಸರ್ಕಾರದ ಪದ್ಮವಿಭೂಷಣದಿಂದಲೂ ಪುರಸ್ಕೃತಗೊಂಡ ಇವರು 'ಜೈ ಭಾರತ ಜನನಿಯ ತನುಜಾತೆ...' ಕನ್ನಡ ನಾಡ ಗೀತೆಯನ್ನು ರಚಿಸಿದ ಮೇರು ಕವಿ. ಇವರು ಬರೆದ 'ಸ್ವಾಮಿ ವಿವೇಕಾನಂದ'ರ ಬಗೆಗಿನ ಕೃತಿ ಬಹಳ ಜನಪ್ರಿಯವಾದದ್ದು.
[ಬದಲಾಯಿಸಿ] ಶ್ರೀ ರಾಮಾಯಣ ದರ್ಶನಂ
ಕುವೆಂಪುರವರು ಬರೆದ ಈ ಕೃತಿಗೆ ಜ್ಞಾನಪೀಠ ಪ್ರಶಸ್ತಿ ಲಭಿಸಿತು. ಕನ್ನಡದ ಅತ್ಯಮೂಲ್ಯ ಗ್ರಂಥಗಳಲ್ಲಿ ಒಂದು, ಈ ಕೃತಿ. ಈ ಕೃತಿ ಕನ್ನಡದ ಮೊದಲ ಆಧುನಿಕ ಮಹಾಕಾವ್ಯ; ಸರಳರಗಳೆಯನ್ನು ಕನ್ನಡದಲ್ಲಿ ಮೊಟ್ಟಮೊದಲ ಬಾರಿಗೆ ಬಳಸಲಾಗಿದೆ.
[ಬದಲಾಯಿಸಿ] ಕೃತಿಗಳು
ಕಾದಂಬರಿ:
- ಕಾನೂರು ಸುಬ್ಬಮ್ಮ ಹೆಗ್ಗಡತಿ (ಚಲನ ಚಿತ್ರವಾಗಿದೆ)
- ಮಲೆಗಳಲ್ಲಿ ಮದುಮಗಳು (ಚಲನ ಚಿತ್ರವಾಗಿದೆ)
ನಾಟಕಗಳು:
ಚಿತ್ರ ಪ್ರಬಂಧ:
ವಿಚಾರ:
ಆತ್ಮ ಚರಿತ್ರೆ:
- ನೆನಪಿನ ದೋಣಿಯಲ್ಲಿ
ಕಾವ್ಯಗಳು:
- ಶ್ರೀ ರಾಮಾಯಣ ದರ್ಶನ೦
- ಕೊಳಲು
- ಅಗ್ನಿಹಂಸ
- ಅನಿಕೇತನ
- ಅನುತ್ತರಾ
- ಇಕ್ಶುಗಂಗೋತ್ರಿ
- ಕದರಡಕೆ
- ಕಥನ ಕವನಗಳು
- ಕಲಾಸುಂದರಿ
- ಕಿಂಕಿಣಿ
- ಕೃತ್ತಿಕೆ
- ಜೇನಾಗುವ
- ನವಿಲು
- ಪಕ್ಷಿಕಾಶಿ
- ಚಿತ್ರಾಂಗದಾ
- ಪ್ರೇತಕ್ಯು
- ಪ್ರೇಮಕಾಶ್ಮೀರ
- ಮಂತ್ರಾಕ್ಷತೆ
- ಷೋಡಶಿ
- ಹಾಳೂರು
- ಕೋಗಿಲೆ
- ಪಾಂಚಜನ್ಯ
- ಕುಟೀಚಕ
[ಬದಲಾಯಿಸಿ] ಪ್ರಶಸ್ತಿ ಪುರಸ್ಕಾರಗಳು
- ಜ್ಞಾನಪೀಠ ಪ್ರಶಸ್ತಿ (ಶ್ರೀ ರಾಮಾಯಣ ದರ್ಶನಂ)
- ಪದ್ಮಭೂಷಣ
- ಪದ್ಮವಿಭೂಷಣ
- ಕರ್ನಾಟಕ ರತ್ನ
- ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
- ಪಂಪ ಪ್ರಶಸ್ತಿ
- ರಾಷ್ಟ್ರಕವಿ ಎಂದು ಬಿರುದು
[ಬದಲಾಯಿಸಿ] ಇತರೆ ಸಂಬಂಧಪಟ್ಟ ಪುಟಗಳು
- ಕುವೆಂಪು ವಿಶ್ವವಿದ್ಯಾನಿಲಯ - ಶಿವಮೊಗ್ಗ ಜಿಲ್ಲೆಯಲ್ಲಿರುವ ಕುವೆಂಪು ಹೆಸರಿನ ವಿಶ್ವವಿದ್ಯಾನಿಲಯ.
- ಪೂರ್ಣಚಂದ್ರ ತೇಜಸ್ವಿ - ಕುವೆಂಪುರವರ ಪುತ್ರ, ಸಾಹಿತಿ.
[ಬದಲಾಯಿಸಿ] ಹೊರಗಿನ ಸಂಪರ್ಕಗಳು
- ಕುವೆಂಪು ಅವರ ಅಧಿಕೃತ ತಾಣ (ಉದಯರವಿ ಪ್ರಕಾಶನ)
- NIC ಪುಟದಲ್ಲಿ ಕುವೆಂಪು
- ವಿಚಾರಮಂಟಪ.ನೆಟ್ - ಕುವೆಂಪುರವರ ಕೆಲವು ಲೇಖನಗಳು.
ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರು
ಕನ್ನಡ
ಕುವೆಂಪು | ದ.ರಾ.ಬೇಂದ್ರೆ | ವಿನಾಯಕ ಕೃಷ್ಣ ಗೋಕಾಕ | ಶಿವರಾಮ ಕಾರಂತ | ಮಾಸ್ತಿ ವೆಂಕಟೇಶ ಅಯ್ಯಂಗಾರ್ | ಯು.ಆರ್.ಅನಂತಮೂರ್ತಿ | ಗಿರೀಶ್ ಕಾರ್ನಾಡ್
ಹಿಂದಿ
ಮಹಾದೇವಿ ವರ್ಮ | ನಿರ್ಮಲಾ ವರ್ಮ | ಸುಮಿತ್ರಾ ನಂದನ್ ಪಂತ್ | ರಾಮ್‍ಧಾರಿ ಸಿಂಘ್ ದಿನಕರ್ | ಅಜ್ಞೇಯ | ನರೇಶ್ ಮೆಹ್ತಾ | ನಿರ್ಮಲ್ ವರ್ಮಾ
ಬೆಂಗಾಲಿ
ಮಹಾಶ್ವೇತಾದೇವಿ
ಗುಜರಾತಿ
ರಾಜೇಂದ್ರ ಕೇಶವ್‌ಲಾಲ್ ಷಾ
ಮರಾಠಿ
ವಿಂದಾ ಕರಂದೀಕರ್ | ಕುಸುಮಾಗ್ರಜ್
ತೆಲುಗು
ವಿಶ್ವನಾಥ ಸತ್ಯನಾರಾಯಣ
ಮಳಯಾಳಂ
ಎಂ.ಟಿ.ವಾಸುದೇವನ್ ನಾಯರ್ | ಜಿ. ಶಂಕರ ಕುರುಪ್