ಸರಕಾರ
From Wikipedia
ಸರಕಾರ ಒಂದು ಪ್ರದೇಶದ ಜನರ ಮೇಲೆ (ಅಥವ ಇತರ ರೀತಿಯ ಜನರ ಗುಂಪಿನ ಮೇಲೆ) ಅನ್ವಯಿಸುವಂತಹ ಶಾಸನಗಳನ್ನು ಹೊರಡಿಸಿ, ಅವನ್ನು ಕಾರ್ಯಗತಗೊಳಿಸುವಂತಹ ಅಧಿಕಾರ ಇರುವ ಒಂದು ಸಂಸ್ಥೆ. ಸಾಮಾನ್ಯವಾಗಿ ಇದು ದೇಶಗಳ ಕಾರ್ಯಾಂಗಗಳಿಗೆ ಅನ್ವಯಿಸುತ್ತದೆ.
[ಬದಲಾಯಿಸಿ] ವಿಧಗಳು
ಎಷ್ಟು ಜನರ ಕೈಯಲ್ಲಿ ಅಧಿಕಾರವಿದೆಯೆಂಬುದರ ಮೇಲೆ ಸರಕಾರಗಳನ್ನು ಮೂರು ವಿಧಗಳಾಗಿ ವಿಂಗಡಿಸಬಹುದು.
- ಏಕಪ್ರಭುತ್ವಗಳಲ್ಲಿ ಅಧಿಕಾರ ಕೇವಲ ಒಂದು ವ್ಯಕ್ತಿಯ ಕೈಯಲ್ಲಿ ಇರುತ್ತದೆ. ಈ ವ್ಯಕ್ತಿಯು ಸಾರ್ವಭೌಮನಾಗಿರಬಹುದು, ಸರ್ವಾಧಿಕಾರಿಯಾಗಿರಬಹುದು ಅಥವ ಇತರ ಕೇಂದ್ರ ವ್ಯಕ್ತಿಯಾಗಿರಬಹುದು.
- ಕೆಲವರ ಪ್ರಭುತ್ವಗಳಲ್ಲಿ ಅಧಿಕಾರ ಸಮಾನ ಹಿತಾಸಕ್ತಿಗಳನ್ನುಳ್ಳ ಕೆಲ ಜನರ ಗುಂಪಿನ ಕೈಯಲ್ಲಿ ಇರುತ್ತದೆ.
- ಗಣತಂತ್ರಗಳಲ್ಲಿ ಅಧಿಕಾರ ಪ್ರಜೆಗಳ ಕೈಯಲ್ಲಿ ಇರುತ್ತದೆ. ಈ ಅಧಿಕಾರವನ್ನು ಅವರು ನೇರವಾಗಿ ಚಲಾಯಿಸಬಹುದು (ನೇರ ಗಣತಂತ್ರ) ಅಥವ ಪ್ರತಿನಿಧಿಗಳನ್ನು ಚುನಾಯಿಸುವುದರಿಂದ ಚಲಾಯಿಸಬಹುದು. (ಪ್ರತಿನಿಧಿತ್ವ ಗಣತಂತ್ರ).