ಸಿದ್ದವ್ವನಹಳ್ಳಿ ಕೃಷ್ಣಶರ್ಮ
From Wikipedia
ಈ ಲೇಖನವನ್ನು ಸಿದ್ಧವ್ವನಹಳ್ಳಿ ಕೃಷ್ಣಶರ್ಮ ಪುಟದೊಂದಿಗೆ ಒಟ್ಟುಗೂಡಿಸಬೇಕಿದೆ/ವಿಲೀನಗೊಳಿಸಬೇಕಿದೆ.
ಸಿದ್ದವ್ವನಹಳ್ಳಿ ಕೃಷ್ಣಶರ್ಮರು ೧೯೦೪ ಜುಲೈ ೩೧ರಂದು ಸಿದ್ದವ್ವನಹಳ್ಳಿಯಲ್ಲಿ ಜನಿಸಿದರು. ತಂದೆ ರಂಗಾಚಾರ್ಯ, ತಾಯಿ ಶೇಷಮ್ಮ.
ಶರ್ಮರು ೧೯೨೭ರಲ್ಲಿ ಹೈದರಾಬಾದದಲ್ಲಿಯ ಮೆಥಡಿಸ್ಟ ಶಾಲೆಯೊಂದರಲ್ಲಿ ಉಪಾಧ್ಯಾಯರಾಗಿ ದುಡಿದರು.ನಿಜಾಮನ ಆಡಳಿತದ ವಿರುದ್ಧ ಲೇಖನಗಳನ್ನು ಬರೆದದ್ದರಿಂದ ಅಲ್ಲಿಯ ಸರಕಾರ ಇವರನ್ನು ಗಡಿಪಾರು ಮಾಡಿತು. ಶರ್ಮರು ವಾರ್ಧಾಕ್ಕೆ ತೆರಳಿ ಗಾಂಧಿಜಿಯವರ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡರು. ೧೯೩೬ ರಿಂದ ೧೯೩೯ ರವರೆಗೆ ಜವಾಹರಲಾಲ ನೆಹರೂರವರಿಗೆ ಕಾರ್ಯದರ್ಶಿಯಾಗಿದ್ದರು. ೧೯೪೨ ರಲ್ಲಿ ಬೆಂಗಳೂರಿನ ಮಲ್ಲೇಶ್ವರದಲ್ಲಿ ಗಾಂಧಿ ಸಾಹಿತ್ಯ ಸಂಘವನ್ನು ಸ್ಥಾಪಿಸಿ ಬೆಳೆಸಿದರು.
ಶರ್ಮರ ಸಾಹಿತ್ಯ: ಪರ್ಣಕುಟಿ, ವರ್ಧಾಯಾತ್ರೆ, ರಾಮಾವತಾರ, ಮಾತಿನ ಮಂಟಪ, ಕನ್ನಡದ ಕಿಡಿಗಳು, ಕನ್ನಡ ಸಮಸ್ಯೆ, ದೀಪಮಾಲೆ, ಕುಲದೀಪಕರು,ರಾಮನಾಮ, ಸರ್ವೋದಯ ಯಾತ್ರೆ, ಬೆಂಗಳೂರಿನಲ್ಲಿ ವಿನೋಬಾ, ಯತಿರಾಜ ರಾಮಾನುಜ, ರಾಜೇಂದ್ರ ಪ್ರಸಾದ,ವಲ್ಲಭಭಾಯಿ ಪಟೇಲ, ಮೋತಿಲಾಲ ನೆಹರೂ, ಕಸ್ತೂರ ಬಾ
ಅನುವಾದ: ಮೀನೂ ಮಸಾನಿಯವರ ‘ ನಮ್ಮ ಹಿಂದುಸ್ತಾನ’ , ಗಾಂಧೀಜಿಯವರ ‘ ಹಿಂದ ಸ್ವರಾಜ್ಯ’ , ‘ ಆರೋಗ್ಯ ರಹಸ್ಯ’ , ‘ ಸಂವಾದ ಮಾಲೆ’ , ‘ ಆತ್ಮಕಥೆ’, ‘ ಗೀತಾಮಾತೆ’
ಸಂಪಾದನೆ: ಸಮಾಜ ಶಿಕ್ಷಣ, ಗಾಂಧಿ ಮತ್ತು ಕರ್ನಾಟಕ
ಸಿದ್ಧವ್ವನಹಳ್ಳಿ ಕೃಷ್ಣಶರ್ಮರು ೧೯೭೩ ಅಕ್ಟೊಬರದಲ್ಲಿ ನಿಧನರಾದರು.