ಸಿದ್ಧವ್ವನಹಳ್ಳಿ ಕೃಷ್ಣಶರ್ಮ
From Wikipedia
ಈ ಲೇಖನವನ್ನು ಸಿದ್ದವ್ವನಹಳ್ಳಿ ಕೃಷ್ಣಶರ್ಮ ಪುಟದೊಂದಿಗೆ ಒಟ್ಟುಗೂಡಿಸಬೇಕಿದೆ/ವಿಲೀನಗೊಳಿಸಬೇಕಿದೆ.
ಸಿದ್ಧವ್ವನಹಳ್ಳಿ ಕೃಷ್ಣಶರ್ಮ ಅವರು ಚಿತ್ರದುರ್ಗ ಜಿಲ್ಲೆಯ ಸಿದ್ಧವ್ವನಹಳ್ಳಿಯಲ್ಲಿ ೧೯೦೪ ಜುಲೈ ೪ರಂದು ಜನಿಸಿದರು. ತಮ್ಮ ೧೬ನೆಯ ವಯಸ್ಸಿನಲ್ಲಿಯೆ ಗಾಂಧೀಜಿಯವರ ದರ್ಶನವಾಗಿ ಅವರ ತತ್ವಗಳಿಗೆ ತಮ್ಮನ್ನು ಸಮರ್ಪಿಸಿಕೊಂಡರು. ಆಬಳಿಕ ತಾರಾನಾಥರ “ ಪ್ರೇಮಾಯತನ” ಆಶ್ರಮದಲ್ಲಿ ಯೋಗ, ಆಯುರ್ವೇದ ಹಾಗು ಆಶ್ರಮದ ಪತ್ರಿಕೆ “ ಪ್ರೇಮ” ದ ಕೆಲಸಗಳಲ್ಲಿ ತಮ್ಮನ್ನು ತೊಡಗಿಸಿಕೊಂಡರು. ೧೯೨೫ರಲ್ಲಿ ಪ್ರಮೀಳಾರ ಜೊತೆ ಶರ್ಮರ ವಿವಾಹವಾಯಿತು. ಪ್ರಮೀಳಾರವರ ಊರಾದ ಹೈದರಾಬಾದಿಗೆ ತೆರಳಿದ ಕೃಷ್ಣಶರ್ಮರು ಅಲ್ಲಿ ಶಾಲಾ ಮಾಸ್ತರರಾದರು. ಆದರೆ ನಿಜಾಮನ ವಿರುದ್ಧ ಚಳುವಳಿಯಲ್ಲಿ ಭಾಗವಹಿಸಿದ್ದರಿಂದ ೧೯೩೮ರಲ್ಲಿ ಅಲ್ಲಿಂದ ಗಡಿಪಾರಾದರು. ಸ್ವಲ್ಪ ಕಾಲ ಗಾಂಧೀಜಿಯವರ ವರ್ಧಾ ಆಶ್ರಮದಲ್ಲಿ ಇದ್ದ ಕೃಷ್ಣಶರ್ಮರು ಅಲ್ಲಿ ದೇಶದ ಅನೇಕ ಹಿರಿಯ ನಾಯಕರ ನಿಕಟ ಪರಿಚಯ ಪಡೆದರು. ಈ ನಾಯಕರ ವ್ಯಕ್ತಿಚಿತ್ರಣ ನೀಡುವ ವೈಶಿಷ್ಟ್ಯಪೂರ್ಣ ಬರವಣಿಗೆಯ ಇವರ ಕೃತಿ “ ದೀಪಮಾಲೆ” . ಇವರ ಮತ್ತೊಂದು ರಚನೆ “ ಪರ್ಣಕುಟಿ” ಕನ್ನಡ ಸಾಹಿತ್ಯ ಇತಿಹಾಸದಲ್ಲೆ ಒಂದು ಮೈಲಿಗಲ್ಲಾಗಿದೆ. ವಿನೋಬಾರವರ ‘ ಗೀತಾಪ್ರವಚನ’ ದ ಕನ್ನಡದ ಅನುವಾದ ಇವರ ಮತ್ತೊಂದು ಪ್ರಸಿದ್ಧ ಕೃತಿ.
ಶ್ರೀ ಕೃಷ್ಣಶರ್ಮರು ೧೯೭೩ನೆಯ ಇಸವಿಯಲ್ಲಿ ನಿಧನರಾದರು.