ಹಲ್ಮಿಡಿ
From Wikipedia
ಹಲ್ಮಿಡಿ ಕರ್ನಾಟಕದ ಹಾಸನ ಜಿಲ್ಲೆಯ ಒಂದು ಹಳ್ಳಿ.
[ಬದಲಾಯಿಸಿ] ಹಲ್ಮಿಡಿ ಶಾಸನ
ಕನ್ನಡ ಭಾಷೆಯಲ್ಲಿರುವ ಅತ್ಯಂತ ಹಳೆಯ ಶಾಸನ ಶಿಲ್ಪ ಇಲ್ಲಿ ದೊರೆತಿದೆ. ಕ್ರಿ.ಶ. ೪೫೦ರ ಸುಮಾರಿನಲ್ಲಿ ಈ ಶಾಸನ ರಚಿತವಾಗಿದೆ ಎಂದು ಅಭಿಪ್ರಾಯ.ಕನ್ನಡ ಭಾಷೆಯ ಪ್ರಾಚೀನತೆಗೆ ಹಲ್ಮಿಡಿಶಾಸನ ಸಾಕ್ಷಿಯಾಗಿದೆ.ಇದು ಕದಂಬರ ಕಾಕುತ್ಸ್ಥವರ್ಮನ ಕಾಲದ್ದು.ಈ ಶಾಸನ ಆಗಿನ ಕಾಲದ ಕನ್ನಡಭಾಷೆಯ ಸ್ವರೂಪದ ಬಗ್ಗೆ ಸಾಕಷ್ಟು ಮಾಹಿತಿ ನೀಡುತ್ತದೆ.
ಈ ಶಾಸನದ ಪ್ರಾರ್ಥನಾಪದ್ಯ ಸಂಸ್ಕೃತದಲ್ಲಿದೆ.ಉಳಿದ ಭಾಗದಲ್ಲಿ ಹೇರಳವಾದ ಸಂಸ್ಕೃತ ಪದಗಳೂ,ಸಮಾಸಗಳೂ ತುಂಬಿವೆ.ಇದು ಆ ಕಾಲದ ಗ್ರಾಂಥಿಕ ಕನ್ನಡದ ಮೇಲೆ ಇದ್ದ ಸಂಸ್ಕೃತದ ಪ್ರಭಾವವನ್ನು ತೋರಿಸುತ್ತದೆ.ಈ ಶಾಸನದಲ್ಲಿರುವ, ಕನ್ನಡ ವ್ಯಾಕರಣದ ದೃಷ್ಟಿಯಿಂದ ಗಮನಾರ್ಹವಾದ ಎರಿದು,ಕೊಟ್ಟಾರ್,ಅದಾನ್ ಮೊದಲಾದ ಪದಗಳು, ಇದರ ಭಾಷೆ "ಪೂರ್ವದ ಹಳೆಗನ್ನಡ" ಎಂಬುದನ್ನು ಸೂಚಿಸುತ್ತವೆ.