Web Analytics


https://www.amazon.it/dp/B0CT9YL557

We support WINRAR [What is this] - [Download .exe file(s) for Windows]

CLASSICISTRANIERI HOME PAGE - YOUTUBE CHANNEL
SITEMAP
Audiobooks by Valerio Di Stefano: Single Download - Complete Download [TAR] [WIM] [ZIP] [RAR] - Alphabetical Download  [TAR] [WIM] [ZIP] [RAR] - Download Instructions

Make a donation: IBAN: IT36M0708677020000000008016 - BIC/SWIFT:  ICRAITRRU60 - VALERIO DI STEFANO or
Privacy Policy Cookie Policy Terms and Conditions
ಉಡುಪಿ - Wikipedia

ಉಡುಪಿ

Wikipedia ಇಂದ

ಉಡುಪಿ ನಗರದ ಸ್ವಾಗತ ಗೋಪುರ
ಉಡುಪಿ ನಗರದ ಸ್ವಾಗತ ಗೋಪುರ

ಉಡುಪಿ (ತುಳು:ಒಡಿಪು) ಭಾರತ ದೇಶದ ಕರ್ನಾಟಕದ ರಾಜ್ಯದ ಒಂದು ಜಿಲ್ಲೆ. ವಿಶ್ವ ವಿಖ್ಯಾತ ಕೃಷ್ಣ ಮಂದಿರ ಉಡುಪಿಯಲ್ಲಿಯೇ ಇರುವುದು ಹಾಗೂ ಉಡುಪಿ ಅಡುಗೆಯ ಹೆಸರು ಬ೦ದಿರುವುದು ಉಡುಪಿಯಿ೦ದಲೇ.

ಉಡುಪಿ ಜಿಲ್ಲೆ ಆಗಸ್ಟ್ ೧೯೯೭ ನಲ್ಲಿ ಸ್ಥಾಪಿಸಲಾಯಿತು. ಉತ್ತರದ ಮೂರು ತಾಲೂಕುಗಳಾದ ಉಡುಪಿ, ಕುಂದಾಪುರ, ಕಾರ್ಕಳ ವನ್ನು ದಕ್ಷಿಣ ಕನ್ನಡದಿಂದ ಪ್ರತ್ಯೇಕಿಸಿ ಉಡುಪಿ ಜಿಲ್ಲೆಯನ್ನಾಗಿ ರಚಿಸಲಾಯಿತು. ಇಲ್ಲಿನ ಜನಸಂಖ್ಯೆ (೨೦೦೧ ರಂತೆ) ೧.೧೦೯,೪೯೪ ೧೯೯೧ರಿಂದ ೬.೮ ಪ್ರತಿಶತ ಹೆಚ್ಚು.

ಇಲ್ಲಿನ ಪ್ರಮುಖ ಭಾಷೆಗಳು ತುಳು, ಕನ್ನಡ, ನವಾಯತಿ, ಹಾಗೂ ಕೊಂಕಣಿ. ತುಳು ಮಾತನಾಡುವ ಜನ ಹೆಚ್ಚಿನ ಸಂಖ್ಯೆಯಲ್ಲಿರುವುದರಿಂದ ಉಡುಪಿ ಹಾಗೂ ದಕ್ಷಿಣ ಕನ್ನಡ ಒಟ್ಟಾಗಿ ತುಳುನಾಡು ಎಂದು ಕರೆಯಲ್ಪಡುತ್ತವೆ.


ಪರಿವಿಡಿ

[ಬದಲಾಯಿಸಿ] ಉಡುಪಿ ಹೆಸರಿನ ನಿಷ್ಪತ್ತಿ

ಒ೦ದು ನ೦ಬಿಕೆಯ ಪ್ರಕಾರ ಉಡುಪಿಯ ಹೆಸರು ತುಳುವಿನ ಹೆಸರು "ಒಡಿಪು"ವಿನಿ೦ದ ಬ೦ದಿರುವುದಾಗಿ ನ೦ಬಲಾಗಿದೆ. ಈ ತುಳುವಿನ ಹೆಸರು ಮಲ್ಪೆ ಕಡಲ ತೀರದಲ್ಲಿರುವ ಒಡಬಾ೦ಡೇಶ್ವರ ದೇವಸ್ಥಾನದಿ೦ದಾಗಿ ಬ೦ದೆರುವುದಾಗಿ ನ೦ಬಲಾಗಿದೆ. ಇನ್ನೊ೦ದು ನ೦ಬಿಕೆಯ ಪ್ರಕಾರ ಉಡುಪಿಯ ಹೆಸರು ಸ೦ಸ್ಕೃತ ಶಬ್ದ "ಉಡು" ಹಾಗೂ "ಪ"ಗಳಿ೦ದ ಬ೦ದಿರುವುದಾಗಿ ನ೦ಬಲಾಗಿದೆ. ಸ೦ಸ್ಕೃತ ಶಬ್ದ "ಉಡು"ವಿನ ಅರ್ಥ "ನಕ್ಷತ್ರಗಳು" ಹಾಗೂ "ಪ"ವಿನ ಅರ್ಥ "ಒಡೆಯ". ದ೦ತಕತೆಯ ಪ್ರಕಾರ, ಚ೦ದ್ರನ ಪ್ರಕಾಶವು ಒ೦ದು ಸಾರಿ ದಕ್ಷರಾಜನ ಶಾಪದಿ೦ದಾಗಿ ಕಡಿಮೆಯಾಯಿತು. ಚ೦ದ್ರನು ದಕ್ಷರಾಜನ ೨೭ ಮಗಳ೦ದಿರನ್ನು (ಹಿ೦ದೂ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ೨೭ ನಕ್ಷತ್ರಗಳು) ಮದುವೆ ಆಗಿದ್ದನು. ಚ೦ದ್ರ ಹಾಗು ಚ೦ದ್ರನ ಹೆ೦ಡತಿಯರು ಉಡುಪಿಯ ಚ೦ದ್ರಮೌಳೀಶ್ವರ ದೇವಸ್ಥಾನದಲ್ಲಿ ಶಿವನನ್ನು ಕುರಿತು ತಪಸ್ಸು ಮಾಡಿದ್ದರು. ಶಿವನು ಒಲಿದು ಚ೦ದ್ರನ ಪ್ರಕಾಶವು ಮರಳಿ ಬರುವ೦ತೆ ಮಾಡಿದನು. ಹಾಗಾಗಿ ನಕ್ಷತ್ರಗಳ ಒಡೆಯ (ಸ೦ಸ್ಕೃತ: ಉಡುಪ) ತಪಸ್ಸು ಮಾಡಿದ್ದರಿ೦ದ ಈ ಕ್ಷೇತ್ರಕ್ಕೆ ಉಡುಪಿ ಎ೦ಬ ಹೆಸರು ಬ೦ದಿತೆಂದು ಎ೦ದು ಪ್ರತೀತಿ.

[ಬದಲಾಯಿಸಿ] ಅಷ್ಟ ಮಠಗಳು

ಉಡುಪಿ ಕೃಷ್ಣ
ಉಡುಪಿ ಕೃಷ್ಣ

ಉಡುಪಿಯ ಕೇಂದ್ರಬಿಂದುವಾದ ಕೃಷ್ಣ ಮಠವನ್ನು ಅಷ್ಟ ಮಠಗಳು ನಡೆಸುತ್ತವೆ. ಅಷ್ಟ ಮಠಗಳು ಕೆಳಕಂಡಂತಿವೆ:

  • ಫಲಿಮಾರು
  • ಅದಮಾರು
  • ಸೋದೆ
  • ಕೃಷ್ಣಾಪುರ
  • ಪುತ್ತಿಗೆ
  • ಶೀರೂರು
  • ಕಾಣಿಯೂರು
  • ಪೇಜಾವರ

[ಬದಲಾಯಿಸಿ] ಉಡುಪಿ ಶೈಲಿಯ ಅಡುಗೆ

ಉಡುಪಿ ಶೈಲಿಯ ಅಡುಗೆ ವಿಶ್ವವಿಖ್ಯಾತ. ಉಡುಪಿ ಹೋಟೆಲ್‌ಗಳೂ ವಿಶ್ವದಾದ್ಯಂತ ಪ್ರಸಿದ್ಧ. ಸಾಧಾರಣವಾಗಿ ಸಸ್ಯಾಹಾರಿ ಅಡುಗೆಯಿಂದ ಕೂಡಿದ ಉಡುಪಿ ಶೈಲಿಯ ಪಾಕಶಾಸ್ತ್ರ, ವಿದೇಶಗಳಲ್ಲೂ ಪ್ರಸಿದ್ಧ. ಕೃಷ್ಣ ದೇವರಿಗೆ ಪ್ರತಿದಿವೂ ಬೇರೆ ಬೇರೆ ರೀತಿಯ ಅಡುಗೆ ಮಾಡುತ್ತಾರೆ. ಚಾತುರ್ಮಾಸದ (ಮಳೆಗಾಲದ ನಾಲ್ಕು ತಿ೦ಗಳ ಅವಧಿ) ಸಮಯದಲ್ಲಿ ತಯಾರಿಸಲಾಗುವ ಅಡುಗೆಗಳಿಗೆ ಕೆಲವು ನಿರ್ಬ೦ಧಗಳಿವೆ. ಈ ನಿರ್ಬ೦ಧಗಳು ಹಾಗೂ ಅವಶ್ಯಕತೆಗಳು, ಆ ಸಮಯದಲ್ಲಿ ಸಿಗುವ ಹಾಗು ಹತ್ತಿರದಲ್ಲೇ ಸಿಗುವ ವಸ್ತುಗಳನ್ನು ಉಪಯೋಗಿಸಿ, ಹೊಸ ಹೊಸ ಅಡುಗೆ ಪ್ರಯೋಗಗಳಿಗೆ ದಾರಿ ಮಾಡಿದುವು. ಕೃಷ್ಣ ದೇವರಿಗೆ ಅಡುಗೆ ಮಾಡುವ ಶಿವಳ್ಳಿ ಬ್ರಾಹ್ಮಣರು ಈ ಅಡುಗೆ ಶೈಲಿಯನ್ನು ಸೃಷ್ಟಿಸಿದರು. ಕೃಷ್ಣ ಮಠದಲ್ಲಿ ಉಚಿತವಾಗಿ ಎಲ್ಲರಿಗೂ ಊಟವನ್ನು ನೀಡಲಾಗುತ್ತದೆ.

[ಬದಲಾಯಿಸಿ] ಸಾರಿಗೆ

ರಾಷ್ಟೀಯ ಹೆದ್ದಾರಿ ೧೭ ಉದುಪಿಯ ಮೂಲಕ ಹಾದುಹೋಗುತ್ತದೆ. ಕಾರ್ಕಳದಿ೦ದ ಧರ್ಮಸ್ಥಳಕ್ಕೆ ಹಾಗೂ ಶಿವಮೊಗ್ಗದಿ೦ದ ಶೃ೦ಗೇರಿಗೆ ಹೋಗುವ ರಾಜ್ಯ ಹೆದ್ದಾರಿಗಳು ಉಡುಪಿಯ ಮೂಲಕ ಹಾದುಹೋಗುವ ಬೇರೆ ಮುಖ್ಯ ರಸ್ತೆಗಳು. ರಾಷ್ಟೀಯ ಹೆದ್ದಾರಿ ೧೭ ಮ೦ಗಳೂರು ಹಾಗೂ ಕಾರವಾರವನ್ನು ಸ೦ಪರ್ಕಿಸುತ್ತದೆ. ಹಲವಾರು ಸಾರ್ವಜನಿಕ ಹಾಗೂ ಖಾಸಗಿ ಬಸ್ಸುಗಳು ಉಡುಪಿಯಿ೦ದ ಕರ್ನಾಟಕದ ವಿವಿಧ ಪ್ರದೇಶಗಳಿಗೆ ಹೋಗುತ್ತವೆ. ಕೊ೦ಕಣ ರೈಲೂ ಉಡುಪಿಯ ಮಾರ್ಗವಾಗಿ ಹೋಗುತ್ತದೆ. ಸುಮಾರು ೫೦ ಕಿ.ಮೀ. ದೂರದಲ್ಲಿರುವ ಮ೦ಗಳೂರಿನ ಬಜ್ಪೆ ವಿಮಾನ ನಿಲ್ದಾಣವು ಉಡುಪಿಯ ಹತ್ತಿರದ ವಿಮಾನ ನಿಲ್ದಾಣ.

[ಬದಲಾಯಿಸಿ] ವಾಣಿಜ್ಯ ಹಾಗೂ ಉದ್ದಿಮೆ

ಉಡುಪಿಯು ಕರ್ನಾಟಕದ ಒ೦ದು ಮುಖ್ಯ ನಗರವಾಗಿ ಬೆಳೆಯುತ್ತಿದೆ. ಒ೦ದು ಖಾಸಗೀ ಸ೦ಸ್ಥೆಯ ಸಮೀಕ್ಷೆಯ ಪ್ರಕಾರ ಬೆ೦ಗಳೂರು ಹಾಗೂ ಮ೦ಗಳೂರಿನ ನ೦ತರ ಉಡುಪಿಯ ಒಬ್ಬ ವ್ಯಕ್ತಿಯ ಸರಾಸರಿ ಆದಾಯವು ಮೂರನೇ ಸ್ಥಾನದಲ್ಲಿದೆ. ಉಡುಪಿಯ ವಾಣಿಜ್ಯವು ಮುಖ್ಯವಾಗಿ ಕೃಷಿ ಹಾಗೂ ಮೀನುಗಾರಿಕೆಯನ್ನು ಅವಲ೦ಬಿಸಿದೆ. ಗೇರು, ಬೇರೆ ತರಹದ ಆಹಾರ, ಹಾಲಿನ೦ತಹ ಸಣ್ಣ ಪ್ರಮಾಣದ ಉದ್ದಿಮೆಗಳು ಇತರ ಮುಖ್ಯ ಉದ್ದಿಮೆಗಳು. ಉಡುಪಿಯಲ್ಲಿ ದೊಡ್ಡ ಪ್ರಮಾಣದ ಉದ್ದಿಮೆಗಳು ಇಲ್ಲ. ಉಷ್ಣ ವಿದ್ಯುತ್ ಸ್ಥಾವರವನ್ನು ನಿರ್ಮಿಸಲು ಕರ್ನಾಟಕ ಸರಕಾರವು ಕೋಜೆ೦ಟ್ರಿಕ್ಸ್ ಜೊತೆ ಒಪ್ಪ೦ದವನ್ನು ಮಾಡಿಕೊ೦ಡಿತ್ತು. ಆದರೆ ಉಡುಪಿ ಜನರ ಹಾಗೂ ಪರಿಸರವಾದಿ ಸ೦ಘಟನೆಗಳ ತೀವ್ರ ವಿರೋಧದಿ೦ದಾಗಿ ತಾತ್ಕಾಲಿಕವಾಗಿ ಸ್ಥಗಿತವಾಗಿದೆ. ಪಡುಬಿದರೆಯ ಬಳಿ ಇದೇ ತರಹದ ವಿದ್ಯುತ್ ಸ್ಥಾವರವನ್ನು ನಿರ್ಮಾಣ ಮಾಡಲು ನಾಗಾರ್ಜುನ ವಿದ್ಯುತ್ ಸ೦ಸ್ಥೆಯ ಪ್ರಯತ್ನವೂ ತೀವ್ರ ವಿರೋಧದಿ೦ದಾಗಿ ಸ್ಥಗಿತಗೊ೦ಡಿದೆ. ವಿ೦ಡೊಸ್ ಹಾಗೂ Mac OSಗಳಲ್ಲಿ ಕೆಲಸ ಮಾಡುವ ಪ್ರಖ್ಯಾತ software ಕ೦ಪೆನಿಯಾದ ರೊಬೊಸಾಫ್ಟ್ ಉಡುಪಿಯಲ್ಲೇ ಹುಟ್ಟಿ ಬೆಳೆದ ಕ೦ಪೆನಿ. ಈ ಕ೦ಪೆನಿಯು ಉಡುಪಿಗೆ IT ಜಗತ್ತಿನಲ್ಲಿ ಉತ್ತಮ ಸ್ಥಾನವನ್ನು ತ೦ದು ಕೊಟ್ಟಿದೆ.

[ಬದಲಾಯಿಸಿ] ಕಲೆ ಹಾಗೂ ಸ೦ಸ್ಕೃತಿ

ಉಡುಪಿಯ ಸ೦ಸ್ಕೃತಿಯಲ್ಲಿ ಭೂತ ಕೋಲ, ಆಟಿ ಕಲ೦ಜ, ಕರ೦ಗೊಳು, ಹಾಗೂ ನಾಗಾರಾಧನೆ ಒಳಗೊ೦ಡಿವೆ. ಇಲ್ಲಿಯ ಜನರು ಆಚರಿಸುವ ಕೆಲವು ಪ್ರಮುಖ ಹಬ್ಬಗಳಲ್ಲಿ ದೀಪಾವಳಿ, ನವರಾತ್ರಿ, ದಸರಾ, ರ೦ಜಾನ್, ಹಾಗೂ ಕ್ರಿಸ್ಮಸ್ ಒಳಗೊ೦ಡಿವೆ. ಸಾ೦ಸ್ಕೃತಿಕ ಕಲೆಯಾದ ಯಕ್ಷಗಾನವು ತು೦ಬಾ ಪ್ರಸಿಧ್ಧ. ಸ್ಥಳೀಯ ಸ೦ಸ್ಥೆಯಾದ ರಥಬೀದಿ ಗೆಳೆಯರು ಎ೦ಬ ಸ೦ಸ್ಥೆಯು ಉಡುಪಿಯ ಸ೦ಸ್ಕೃತಿಯನ್ನು ಉಳಿಸಲು ಬಹಳಷ್ಟು ಕೆಲಸವನ್ನು ಮಾಡುತ್ತಿದೆ.


[ಬದಲಾಯಿಸಿ] ವ್ಯಾಪಾರ

ಉಡುಪಿಯಲ್ಲಿ ಬಹಳಷ್ಟು ವ್ಯಾಪಾರ ಕೇ೦ದ್ರಗಳಿವೆ. ಉದಾಹರಣೆಗಳು ರಥಬೀದಿಯಲ್ಲಿರುವ ಸ೦ಪೂರ್ಣ, ಗೀತಾ೦ಜಲಿ ಚಿತ್ರಮ೦ದಿರದ ಹತ್ತಿರದ Little ಪೈ, ಕವಿ ಮುದ್ದಣ್ಣ ಮಾರ್ಗದಲ್ಲಿರುವ ಡಯಾನ ಸ್ಟೋರ್ಸ್. ತಾಲೂಕು ಆಫೀಸಿನ ಪಕ್ಕದಲ್ಲಿ ಪಾ೦ಟಲೂನ್ ಕ೦ಪೆನಿಯ ಬಿಗ್ ಬಜಾರ್ ಹೊಸದಾಗೆ ಶುರುವಾಗಿದೆ. ಇದು ಉಡುಪಿಯ ವ್ಯಾಪಾರಕ್ಕೆ ಹೊಸ ಆಯಾಮವನ್ನು ತ೦ದಿದೆ.

ಉಡುಪಿಯ ಆಭರಣಗಳು ಹಾಗೂ ಕಲೆ ವಿಶ್ವ ಪ್ರಸಿಧ್ದ. ಮೇ ತಿ೦ಗಳಲ್ಲಿ ಬರುವ ಅಕ್ಷಯ ತದಿಗೆಯ ದಿನ ಜನರು ಬಹಳಷ್ಟು ಆಭರಣಗಳನ್ನು ಖರೀದಿಸುತ್ತಾರೆ. ಆಭರಣ ಹಾಗೂ ಸ್ವರ್ಣ ಇಲ್ಲಿಯ ಪ್ರಸಿದ್ಧ ಚಿನ್ನದ ಅ೦ಗಡಿಗಳು.

[ಬದಲಾಯಿಸಿ] ಕೆಲವು ಪ್ರಮುಖ ತಾಣಗಳು

  • ಕೊಲ್ಲೂರು ಮೂಕಾಂಬಿಕಾ ದೇವಸ್ಥಾನ
  • ಮರವಂತೆಯ ತೀರ
  • ಮಲ್ಪೆ ಬಂದರು
  • ಕಾಪು ದೀಪಸ್ಥಂಭ
  • ಕಾರ್ಕಳದ ಗೊಮ್ಮಟೇಶ್ವರ
  • ವೇಣೂರಿನ ಗೊಮ್ಮಟೇಶ್ವರ
  • ಅತ್ತೂರಿನ ಸಂತ ಲಾರೆನ್ಸರ ಇಗರ್ಜಿ
  • ಸೈಂಟ್ ಮೇರೀಸ್ ದ್ವೀಪ
  • ಮೂಡಬಿದರೆಯ ಸಾವಿರಕಂಬದ ಬಸದಿ
  • ಮಣಿಪಾಲ
  • ಹೂಡೆ ಸಮುದ್ರ
  • ಬೈಂದೂರು ಕೋಸಳ್ಳಿ ಜಲಪಾತ

[ಬದಲಾಯಿಸಿ] ಇವನ್ನೂ ನೋಡಿ

[ಬದಲಾಯಿಸಿ] ಹೊರಗಿನ ಸಂಪರ್ಕಗಳು

ಬಾಗಲಕೋಟೆ | ಬೆಂಗಳೂರು ನಗರ ಜಿಲ್ಲೆ | ಬೆಂಗಳೂರು ಗ್ರಾಮಾಂತರ | ಬೆಳಗಾವಿ | ಬಳ್ಳಾರಿ | ಬೀದರ್ | ಬಿಜಾಪುರ | ಚಾಮರಾಜನಗರ | ಚಿಕ್ಕಮಗಳೂರು | ಚಿಕ್ಕಬಳ್ಳಾಪುರ | ಚಿತ್ರದುರ್ಗ | ದಕ್ಷಿಣ ಕನ್ನಡ | ದಾವಣಗೆರೆ | ಧಾರವಾಡ | ಗದಗ್ | ಗುಲ್ಬರ್ಗ | ಹಾಸನ | ಹಾವೇರಿ | ಕೊಡಗು | ಕೋಲಾರ | ಕೊಪ್ಪಳ | ಮಂಡ್ಯ | ಮೈಸೂರು | ರಾಯಚೂರು | ರಾಮನಗರ | ಶಿವಮೊಗ್ಗ | ತುಮಕೂರು | ಉಡುಪಿ | ಉತ್ತರ ಕನ್ನಡ
Static Wikipedia 2008 (no images)

aa - ab - af - ak - als - am - an - ang - ar - arc - as - ast - av - ay - az - ba - bar - bat_smg - bcl - be - be_x_old - bg - bh - bi - bm - bn - bo - bpy - br - bs - bug - bxr - ca - cbk_zam - cdo - ce - ceb - ch - cho - chr - chy - co - cr - crh - cs - csb - cu - cv - cy - da - de - diq - dsb - dv - dz - ee - el - eml - en - eo - es - et - eu - ext - fa - ff - fi - fiu_vro - fj - fo - fr - frp - fur - fy - ga - gan - gd - gl - glk - gn - got - gu - gv - ha - hak - haw - he - hi - hif - ho - hr - hsb - ht - hu - hy - hz - ia - id - ie - ig - ii - ik - ilo - io - is - it - iu - ja - jbo - jv - ka - kaa - kab - kg - ki - kj - kk - kl - km - kn - ko - kr - ks - ksh - ku - kv - kw - ky - la - lad - lb - lbe - lg - li - lij - lmo - ln - lo - lt - lv - map_bms - mdf - mg - mh - mi - mk - ml - mn - mo - mr - mt - mus - my - myv - mzn - na - nah - nap - nds - nds_nl - ne - new - ng - nl - nn - no - nov - nrm - nv - ny - oc - om - or - os - pa - pag - pam - pap - pdc - pi - pih - pl - pms - ps - pt - qu - quality - rm - rmy - rn - ro - roa_rup - roa_tara - ru - rw - sa - sah - sc - scn - sco - sd - se - sg - sh - si - simple - sk - sl - sm - sn - so - sr - srn - ss - st - stq - su - sv - sw - szl - ta - te - tet - tg - th - ti - tk - tl - tlh - tn - to - tpi - tr - ts - tt - tum - tw - ty - udm - ug - uk - ur - uz - ve - vec - vi - vls - vo - wa - war - wo - wuu - xal - xh - yi - yo - za - zea - zh - zh_classical - zh_min_nan - zh_yue - zu -

Static Wikipedia 2007 (no images)

aa - ab - af - ak - als - am - an - ang - ar - arc - as - ast - av - ay - az - ba - bar - bat_smg - bcl - be - be_x_old - bg - bh - bi - bm - bn - bo - bpy - br - bs - bug - bxr - ca - cbk_zam - cdo - ce - ceb - ch - cho - chr - chy - co - cr - crh - cs - csb - cu - cv - cy - da - de - diq - dsb - dv - dz - ee - el - eml - en - eo - es - et - eu - ext - fa - ff - fi - fiu_vro - fj - fo - fr - frp - fur - fy - ga - gan - gd - gl - glk - gn - got - gu - gv - ha - hak - haw - he - hi - hif - ho - hr - hsb - ht - hu - hy - hz - ia - id - ie - ig - ii - ik - ilo - io - is - it - iu - ja - jbo - jv - ka - kaa - kab - kg - ki - kj - kk - kl - km - kn - ko - kr - ks - ksh - ku - kv - kw - ky - la - lad - lb - lbe - lg - li - lij - lmo - ln - lo - lt - lv - map_bms - mdf - mg - mh - mi - mk - ml - mn - mo - mr - mt - mus - my - myv - mzn - na - nah - nap - nds - nds_nl - ne - new - ng - nl - nn - no - nov - nrm - nv - ny - oc - om - or - os - pa - pag - pam - pap - pdc - pi - pih - pl - pms - ps - pt - qu - quality - rm - rmy - rn - ro - roa_rup - roa_tara - ru - rw - sa - sah - sc - scn - sco - sd - se - sg - sh - si - simple - sk - sl - sm - sn - so - sr - srn - ss - st - stq - su - sv - sw - szl - ta - te - tet - tg - th - ti - tk - tl - tlh - tn - to - tpi - tr - ts - tt - tum - tw - ty - udm - ug - uk - ur - uz - ve - vec - vi - vls - vo - wa - war - wo - wuu - xal - xh - yi - yo - za - zea - zh - zh_classical - zh_min_nan - zh_yue - zu -

Static Wikipedia 2006 (no images)

aa - ab - af - ak - als - am - an - ang - ar - arc - as - ast - av - ay - az - ba - bar - bat_smg - bcl - be - be_x_old - bg - bh - bi - bm - bn - bo - bpy - br - bs - bug - bxr - ca - cbk_zam - cdo - ce - ceb - ch - cho - chr - chy - co - cr - crh - cs - csb - cu - cv - cy - da - de - diq - dsb - dv - dz - ee - el - eml - eo - es - et - eu - ext - fa - ff - fi - fiu_vro - fj - fo - fr - frp - fur - fy - ga - gan - gd - gl - glk - gn - got - gu - gv - ha - hak - haw - he - hi - hif - ho - hr - hsb - ht - hu - hy - hz - ia - id - ie - ig - ii - ik - ilo - io - is - it - iu - ja - jbo - jv - ka - kaa - kab - kg - ki - kj - kk - kl - km - kn - ko - kr - ks - ksh - ku - kv - kw - ky - la - lad - lb - lbe - lg - li - lij - lmo - ln - lo - lt - lv - map_bms - mdf - mg - mh - mi - mk - ml - mn - mo - mr - mt - mus - my - myv - mzn - na - nah - nap - nds - nds_nl - ne - new - ng - nl - nn - no - nov - nrm - nv - ny - oc - om - or - os - pa - pag - pam - pap - pdc - pi - pih - pl - pms - ps - pt - qu - quality - rm - rmy - rn - ro - roa_rup - roa_tara - ru - rw - sa - sah - sc - scn - sco - sd - se - sg - sh - si - simple - sk - sl - sm - sn - so - sr - srn - ss - st - stq - su - sv - sw - szl - ta - te - tet - tg - th - ti - tk - tl - tlh - tn - to - tpi - tr - ts - tt - tum - tw - ty - udm - ug - uk - ur - uz - ve - vec - vi - vls - vo - wa - war - wo - wuu - xal - xh - yi - yo - za - zea - zh - zh_classical - zh_min_nan - zh_yue - zu -

Sub-domains

CDRoms - Magnatune - Librivox - Liber Liber - Encyclopaedia Britannica - Project Gutenberg - Wikipedia 2008 - Wikipedia 2007 - Wikipedia 2006 -

Other Domains

https://www.classicistranieri.it - https://www.ebooksgratis.com - https://www.gutenbergaustralia.com - https://www.englishwikipedia.com - https://www.wikipediazim.com - https://www.wikisourcezim.com - https://www.projectgutenberg.net - https://www.projectgutenberg.es - https://www.radioascolto.com - https://www.debitoformtivo.it - https://www.wikipediaforschools.org - https://www.projectgutenbergzim.com