ಹಳೆ ಒಡಂಬಡಿಕೆ
Wikipedia ಇಂದ
ಹಳೆ ಒಡಂಬಡಿಕೆಯು (Old Testament) ಸತ್ಯವೇದದ ಪ್ರಥಮ ಭಾಗವಾಗಿದೆ. ಇದನ್ನು ಕ್ರಿಸ್ತ ಪೂರ್ವ ಶತಮಾನಗಳಲ್ಲಿ ಬರೆಯಲಾಗಿತ್ತು. ಯೇಸು ಕ್ರಿಸ್ತನು ಮತ್ತು ಆತನ ಶಿಷ್ಯರು ತಮ್ಮ ಭೋದನೆಗಳಲ್ಲಿ ಹಳೆ ಒಡಂಬಡಿಕೆಯ ಅನೇಕ ಭಾಗಗಳನ್ನು ಆಧಾರ ಮಾಡಿಕೊಂಡು ಅವುಗಳನ್ನು ಮೋಶೆಯ ಧರ್ಮಶಾಸ್ತ್ರ, ಪ್ರವಾದನ ಗ್ರಂಥ, ಕೀರ್ತನೆಗಳು ಎಂಬ ಮುಂತಾದ ಭಾಗಗಳನ್ನು ಸಂಭೋಧಿಸುತ್ತಿದ್ದರು.
ಹಳೆ ಒಡಂಬಡಿಕೆಯಲ್ಲಿ ೩೯ ಪುಸ್ತಕಗಳಿವೆ. ಅವು ಯಾವುವೆಂದರೆ:
- ಆದಿಕಾಂಡ
- ವಿಮೋಚನಕಾಂಡ
- ಯಾಜಕಕಾಂಡ
- ಅರಣ್ಯಕಾಂಡ
- ಧರ್ಮೋಪದೇಶಕಾಂಡ
- ಯೆಹೋಷುವ
- ನ್ಯಾಯಸ್ಥಾಪಕರು
- ರೂತಳು
- ೧ ಸಮುವೇಲ
- ೨ ಸಮುವೇಲ
- ೧ ಅರಸುಗಳು
- ೨ ಅರಸುಗಳು
- ೧ ಪೂರ್ವಕಾಲವೃತ್ತಾಂತ
- ೨ ಪೂರ್ವಕಾಲವೃತ್ತಾಂತ
- ಎಜ್ರನು
- ನೆಹೆಮೀಯನು
- ಎಸ್ತೇರಳು
- ಯೋಬನು
- ಕೀರ್ತನೆಗಳು
- ಜ್ಞಾನೋಕ್ತಿಗಳು
- ಪ್ರಸಂಗಿ
- ಪರಮಗೀತ
- ಯೇಶಾಯ
- ಯೆರೆಮೀಯ
- ಪ್ರಲಾಪಗಳು
- ಯೆಹೆಜ್ಕೇಲ
- ದಾನಿಯೇಲ
- ಹೋಶೆಯ
- ಯೋವೇಲ
- ಆಮೋಸ
- ಓಬದ್ಯ
- ಯೋನ
- ಮೀಕ
- ನಹೂಮ
- ಹಬಕ್ಕೂಕ
- ಚೆಫನ್ಯ
- ಹಗ್ಗಾಯ
- ಜೆಕರ್ಯ
- ಮಲಾಕಿಯ