ಅಟಲ್ ಬಿಹಾರಿ ವಾಜಪೇಯಿ
From Wikipedia
ಜನನ: | ಡಿಸೆಂಬರ್ ೨೫, ೧೯೨೪ |
---|---|
ಹುಟ್ಟಿದೂರು: | ಗ್ವಾಲಿಯರ್, ಮಧ್ಯಪ್ರದೇಶ |
ಭಾರತದ ಪ್ರಧಾನ ಮ೦ತ್ರಿ | |
ಅಧಿಕಾರಕ್ಕೆ ಬಂದದ್ದು: | ೧೦ನೇ ಪ್ರಧಾನಮಂತ್ರಿಯಾಗಿ |
ರಾಜಕೀಯ ಪಕ್ಷ: | ಭಾರತೀಯ ಜನತಾ ಪಕ್ಷ |
ಮೊದಲನೆಯ ಕಾರ್ಯಾವಧಿ | |
ಅಧಿಕಾರ ವಹಿಸಿಕೊಂಡದ್ದು: | ಮೇ ೧೬, ೧೯೯೬ |
ಅಧಿಕಾರ ಬಿಟ್ಟುಕೊಟ್ಟದ್ದು: | ಜೂನ್ ೧, ೧೯೯೬ |
ಪೂರ್ವಾಧಿಕಾರಿ: | ನರಸಿಂಹರಾವ್ |
ಉತ್ತರಾಧಿಕಾರಿ: | ದೇವೇಗೌಡ |
ಎರಡನೆಯ ಕಾರ್ಯಾವಧಿ | |
ಅಧಿಕಾರ ವಹಿಸಿಕೊಂಡದ್ದು: | ಮಾರ್ಚ್ ೧೯, ೧೯೯೮ |
ಅಧಿಕಾರ ಬಿಟ್ಟುಕೊಟ್ಟದ್ದು: | ಮೇ ೨೨, ೨೦೦೪ |
ಪೂರ್ವಾಧಿಕಾರಿ: | ಐ ಕೆ ಗುಜ್ರಾಲ್ |
ಉತ್ತರಾಧಿಕಾರಿ: | ಡಾ. ಮನಮೋಹನ್ ಸಿಂಗ್ |
ಅಟಲ್ ಬಿಹಾರಿ ವಾಜಪೇಯಿ (ಜನನ ಡಿಸೆಂಬರ್ ೨೫, ೧೯೨೪) ೧೯೯೬ರಲ್ಲಿ ಮತ್ತು ಇನ್ನೊಮ್ಮೆ ೧೯೯೮ ರಿಂದ ೩೦೦೪ರವರೆಗೆ ಭಾರತದ ಪ್ರಧಾನ ಮಂತ್ರಿಗಳಾಗಿದ್ದರು.
ವಾಜಪೇಯಿಯವರು ಮಧ್ಯಪ್ರದೇಶದ ಗ್ವಾಲಿಯರ್‌ನವರು. ಭಾರತದ ರಾಜಕೀಯದಲ್ಲಿ ಬಹುಕಾಲದಿಂದ ಸಕ್ರಿಯರಾದವರು. ಇವರು ಭಾರತೀಯ ಜನ ಸಂಘದ ಸಂಸ್ಥಾಪಕರಲ್ಲಿ ಒಬ್ಬರು. ೧೯೬೮ ಹಾಗೂ ೧೯೭೩ರಲ್ಲಿ ಇವರು ಇದರ ಮುಖ್ಯಸ್ಥರಾಗಿದ್ದರು. ಇವರು ಲೋಕಸಭೆಗೆ ೧೯೫೭ರಲ್ಲಿ ಮೊದಲು ಆಯ್ಕೆಯಾದರು. ೧೯೭೭ರಲ್ಲಿ ಜನತಾ ಪಾರ್ಟಿ ಸ್ಥಾಪನೆಯಾಗುವವರೆಗೂ ಜನಸಂಘದ ನಾಯಕರಾಗಿದ್ದರು. ಮೊರಾರ್ಜಿ ದೇಸಾಯಿಯವರ ಸರಕಾರದಲ್ಲಿ ಮಾರ್ಚ್ ೧೯೭೭ ರಿಂದ ಜುಲೈ ೧೯೭೯ರವರೆಗೆ ವಿದೇಶ ಮಂತ್ರಿಯಾಗಿ ಕಾರ್ಯನಿರ್ವಹಿಸಿದರು. ೧೯೮೦ರಲ್ಲಿ ಇವರು ಜನತಾಪಾರ್ಟಿಯನ್ನು ತೊರೆದು ಭಾರತೀಯ ಜನತಾ ಪಕ್ಷ ನಿರ್ಮಿಸುವಲ್ಲಿ ಸಹಾಯ ಮಾಡಿದರು. ಈ ನಿರ್ಣಯ ಆರ್‌ಎಸ್‌ಎಸ್‌ನ ಒತ್ತಡದ ಮೇರೆಗೆ ಬಂದಿತೆಂದು ಹೇಳಲಾಗುತ್ತದೆ. ಬಿಜೆಪಿ ಪಾರ್ಲಿಮೆಂಟರಿ ಪಾರ್ಟಿಯ ನಾಯಕರಾಗಿ ವಾಜಪೇಯಿಯವರು ೧೯೮೦ರಿಂದ ೧೯೮೪ ಹಾಗೂ ೧೯೮೬ರಿಂದ ೧೯೯೩ ಮತ್ತು ೧೯೯೬ರಲ್ಲಿ ಕಾರ್ಯನಿರ್ವಹಿಸಿದರು. ೧೧ನೇ ಲೋಕಸಭೆಯ ವಿರೋಧ ಪಕ್ಷದ ನಾಯಕರಾಗಿ ಇವರು ಸೇವೆ ಸಲ್ಲಿಸಿದರು.
ಪರಿವಿಡಿ |
[ಬದಲಾಯಿಸಿ] ಮೊದಲ ಕಾರ್ಯಾವಧಿ
೧೯೯೬ರಲ್ಲಿ ಮೊದಲ ಬಾರಿಗೆ ಪ್ರಧಾನ ಮಂತ್ರಿಯಾದ ಇವರು ೧೩ ದಿನಗಳ ಕಾಲ ಉಳಿದ ಸರಕಾರದ ನಾಯಕತ್ವ ವಹಿಸಿದ್ದರು.
[ಬದಲಾಯಿಸಿ] ಎರಡನೆಯ ಕಾರ್ಯಾವಧಿ
ಅಕ್ಟೋಬರ್ ೧೩, ೧೯೯೮ರಲ್ಲಿ ಎರಡನೆಯ ಬಾರಿಗೆ ಪ್ರಧಾನ ಮಂತ್ರಿಯಾದ ಇವರು, ಎನ್ ಡಿ ಎ ಯ ನಾಯಕತ್ವ ವಹಿಸಿದ್ದರು.
[ಬದಲಾಯಿಸಿ] ಇತರ ವಿಷಯಗಳು
ವಾಜಪೇಯಿಯವರು ರಾಜಕಾರಣಿ ಮಾತ್ರವಲ್ಲದೆ ಕವಿ ಕೂಡ. ಹಿಂದಿ ಭಾಷೆಯಲ್ಲಿ ಅನೇಕ ಕವಿತೆಗಳನ್ನುರಚಿಸಿದ್ದಾರೆ. ಇವರ ಇಪ್ಪತ್ತೊಂದು ಕವಿತೆಗಳ ಸಂಕಲನ Twenty-One Poems ಎಂಬ ಹೆಸರಿನಲ್ಲಿ ಆಂಗ್ಲಭಾಷೆಗೆ ಅನುವಾದಗೊಂಡಿದೆ.
[ಬದಲಾಯಿಸಿ] ಭಾರತದ ಪ್ರಧಾನಮಂತ್ರಿಗಳು
ಜವಾಹರಲಾಲ್ ನೆಹರು | ಗುಲ್ಜಾರಿ ಲಾಲ್ ನಂದಾ | ಲಾಲ್ ಬಹಾದುರ್ ಶಾಸ್ತ್ರಿ | ಇಂದಿರಾ ಗಾಂಧಿ | ಮೊರಾರ್ಜಿ ದೇಸಾಯಿ | ಚೌಧುರಿ ಚರಣ್ ಸಿಂಗ್ | ರಾಜೀವ್ ಗಾಂಧಿ | ವಿ.ಪಿ.ಸಿಂಗ್ | ಚಂದ್ರಶೇಖರ್ | ಪಿ.ವಿ.ನರಸಿಂಹರಾವ್ | ಅಟಲ್ ಬಿಹಾರಿ ವಾಜಪೇಯಿ | ಹೆಚ್.ಡಿ.ದೇವೇಗೌಡ | ಇಂದ್ರಕುಮಾರ್ ಗುಜ್ರಾಲ್ | ಡಾ.ಮನಮೋಹನ್ ಸಿಂಗ್