ನೆಲ್ಸನ್ ಮಂಡೇಲಾ
From Wikipedia
ನೆಲ್ಸನ್ ಮಂಡೇಲಾ | |
![]() |
|
ದಕ್ಷಿಣ ಆಫ್ರಿಕಾದ ೧೧ನೇ ರಾಷ್ಟ್ರಪತಿ
|
|
ಅಧಿಕಾರದ ಅವಧಿ ಏಪ್ರಿಲ್ ೨೭, ೧೯೯೪ – ೧೯೯೯ |
|
ಉಪ ರಾಷ್ಟ್ರಪತಿ | ಫ್ರೆಡೆರಿಕ್ ವಿಲ್ಲೆಮ್ ಡೆ ಕ್ಲೆರ್ಕ್ ಥಾಬೊ ಮ್‍ಬೇಕಿ |
---|---|
ಪೂರ್ವಾಧಿಕಾರಿ | ಫ್ರೆಡೆರಿಕ್ ವಿಲ್ಲೆಮ್ ಡೆ ಕ್ಲೆರ್ಕ್ (State President of South Africa) |
ಉತ್ತರಾಧಿಕಾರಿ | ಥಾಬೊ ಮ್‍ಬೇಕಿ |
|
|
ಜನನ | ಜುಲೈ ೧೮, ೧೯೧೮ ಕೂನು, ಮ್‍ಥಾಥ, ಟ್ರಾನ್ಸ್ಕೀ |
ರಾಜಕೀಯ ಪಕ್ಷ | ಆಫ್ರಿಕಾದ ರಾಷ್ಟ್ರೀಯ ಕಾಂಗ್ರೆಸ್ |
ನೆಲ್ಸನ್ ಮಂಡೇಲಾ ಅವರು ಜುಲೈ ೧೮, ೧೯೧೮ ರಂದು ದಕ್ಷಿಣ ಅಫ್ರಿಕಾದ ಟ್ರಾನ್‍ಸ್ಕೈ ಪಟ್ಟಣದಲ್ಲಿ ಜನಿಸಿದರು. ಅವರ ತಂದೆ ಟೆಂಬೂ ಬುಡಕಟ್ಟಿನ ನಾಯಕರಗಿದ್ದರು. ಮಂಡೇಲಾ ಅವರು ವಿಟ್ವಾಟರ್ಸ್ರಾಂಡ್ ವಿಶ್ವವಿದ್ಯಾನಿಲಯದಲ್ಲಿ ೧೯೪೨ರಲ್ಲಿ ಕಾನೂನು ಪದವಿಯನ್ನು ಪಡೆದರು. ೧೯೪೪ರಲ್ಲಿ ಆಫ್ರಿಕಾದ ರಾಷ್ಟ್ರೀಯ ಕಾಂಗ್ರೆಸ್ ಸೇರಿ 'ನ್ಯಾಷನಲ್ ಪಾರ್ಟಿ' ಸರ್ಕಾರದ ವರ್ಣಬೇಧ ನೀತಿಗಳ ವಿರುದ್ಧ ಹೋರಾಡಿದರು. ಸರ್ಕಾರವನ್ನು ಟೀಕಿಸಿದ ಅಪರಾಧಕ್ಕೆ ಅವರನ್ನು ೧೯೫೬ರಿಂದ ೧೯೬೧ರವರೆಗೆ ಸರ್ಕಾರದ ವಿರುದ್ಧ ಕಾನೊನು ಸಮರ ನೆಡೆಸಿ, ೧೯೬೧ರಲ್ಲಿ ಜಯಗಳಿಸಿದರು.
ಮೊದಲಿಗೆ 'ಅಹಿಂಸಾ ನೀತಿ'ಯನ್ನು ಅಚರಿಸಿದರೂ ನಂತರ ಗೆರಿಲ್ಲಾ ತಂತ್ರಗಳನ್ನು ಅನುಸರಿಸಿ ವಿಶ್ವಾದ್ಯಂತ ಟೀಕೆಗೊಳಗಾದರು. ಆದರೆ ಶೀಘ್ರವಾಗಿ ಜನಪ್ರಿಯರಾದ ಮಂಡೇಲಾ ಅವರು 'ಜನಾಂಗೀಯ ದ್ವೇಷ'ಕ್ಕೆ ಹೆಸರಾದ ಸರ್ಕಾರದ ವಿರುದ್ದ್ರ ಪ್ರಬಲ ಎದುರಾಳಿಯಾದರು. ೧೯೯೦ರವರೆಗಿನ ಅವರ ೨೭ ವರ್ಷದ ಜೀವಾವಧಿ ಸಜೆಯು ಪ್ರಪಂಚದಾದ್ಯಂತ ಜನಜಾಗೃತಿಯನ್ನುಂಟುಮಾಡಿ, ಆಫ್ರಿಕಾದ ಶಾಂತ ಪ್ರಜಾಪ್ರಭುತ್ವಕ್ಕೆ ಕಾರಣವಾಗಿದೆ.
೧೯೯೩ರಲ್ಲಿ ಮಂಡೇಲಾ ನೊಬೆಲ್ ಶಾಂತಿ ಪ್ರಶಸ್ತಿ ಪಡೆದರು.