Static Wikipedia February 2008 (no images)

aa - ab - af - ak - als - am - an - ang - ar - arc - as - ast - av - ay - az - ba - bar - bat_smg - bcl - be - be_x_old - bg - bh - bi - bm - bn - bo - bpy - br - bs - bug - bxr - ca - cbk_zam - cdo - ce - ceb - ch - cho - chr - chy - co - cr - crh - cs - csb - cu - cv - cy - da - de - diq - dsb - dv - dz - ee - el - eml - en - eo - es - et - eu - ext - fa - ff - fi - fiu_vro - fj - fo - fr - frp - fur - fy - ga - gan - gd - gl - glk - gn - got - gu - gv - ha - hak - haw - he - hi - hif - ho - hr - hsb - ht - hu - hy - hz - ia - id - ie - ig - ii - ik - ilo - io - is - it - iu - ja - jbo - jv - ka - kaa - kab - kg - ki - kj - kk - kl - km - kn - ko - kr - ks - ksh - ku - kv - kw - ky - la - lad - lb - lbe - lg - li - lij - lmo - ln - lo - lt - lv - map_bms - mdf - mg - mh - mi - mk - ml - mn - mo - mr - mt - mus - my - myv - mzn - na - nah - nap - nds - nds_nl - ne - new - ng - nl - nn - no - nov - nrm - nv - ny - oc - om - or - os - pa - pag - pam - pap - pdc - pi - pih - pl - pms - ps - pt - qu - quality - rm - rmy - rn - ro - roa_rup - roa_tara - ru - rw - sa - sah - sc - scn - sco - sd - se - sg - sh - si - simple - sk - sl - sm - sn - so - sr - srn - ss - st - stq - su - sv - sw - szl - ta - te - tet - tg - th - ti - tk - tl - tlh - tn - to - tpi - tr - ts - tt - tum - tw - ty - udm - ug - uk - ur - uz - ve - vec - vi - vls - vo - wa - war - wo - wuu - xal - xh - yi - yo - za - zea - zh - zh_classical - zh_min_nan - zh_yue - zu

Web Analytics
Cookie Policy Terms and Conditions ಮುದ್ದಣ - Wikipedia

ಮುದ್ದಣ

From Wikipedia

ಮಹಾಕವಿ ಮುದ್ದಣ (ನಂದಳಿಕೆ ಲಕ್ಷ್ಮಿನಾರಣಪ್ಪ)
ಮಹಾಕವಿ ಮುದ್ದಣ (ನಂದಳಿಕೆ ಲಕ್ಷ್ಮಿನಾರಣಪ್ಪ)

ಮುದ್ದಣ(೧೮೭೦-೧೯೦೧) - ಕನ್ನಡ ಸಾಹಿತ್ಯಲೋಕದಲ್ಲಿ 'ಮಹಾಕವಿ' ಎಂದು ಖ್ಯಾತಿಪಡೆದ ಕವಿ/ಸಾಹಿತಿ. ಮುದ್ದಣ ಅವರ ನಿಜ ನಾಮಧೇಯ ಲಕ್ಷ್ಮಿನಾರಣಪ್ಪ. ಹುಟ್ಟೂರು ನಂದಳಿಕೆಯಾದ್ದರಿಂದ ನಂದಳಿಕೆ ಲಕ್ಷ್ಮಿನಾರಣಪ್ಪ ಎಂದು ಕೂಡ ಹೆಸರಾದವರು. ರತ್ನಾವತಿ ಕಲ್ಯಾಣ, ಶ್ರೀರಾಮ ಪಟ್ಟಾಭಿಷೇಕ, ಅದ್ಭುತ ರಾಮಾಯಣ ಮತ್ತು ಶ್ರೀ ರಾಮಾಶ್ವಮೇಧ ಮುದ್ದಣ ಅವರು ಬರೆದಿರುವ ಕೆಲವು ಮುಖ್ಯವಾದ ಕೃತಿಗಳು. ಅನಾರೋಗ್ಯ ಮತ್ತು ಬಡತನದಿಂದ ಬಳಲಿದ ಮುದ್ದಣ, ಕಿರಿಯ ವಯಸ್ಸಿಗೆ ಇಹಲೋಕ ಯಾತ್ರೆ ಮುಗಿಸಿದರು. ಕರ್ನಾಟಕದಲ್ಲಿನ ಶಾಲಾ ಕಾಲೇಜುಗಳಲ್ಲಿನ ಕನ್ನಡ ಸಾಹಿತ್ಯ ಪಠ್ಯಗಳಲ್ಲಿ ಮುದ್ದಣನವರ ಪದ್ಯ/ಗದ್ಯಗಳು ಹಾಸುಹೊಕ್ಕಾಗಿವೆ.

ಪರಿವಿಡಿ

[ಬದಲಾಯಿಸಿ] ಬಾಲ್ಯ

ಲಕ್ಷ್ಮಿನಾರಣಪ್ಪ ಹುಟ್ಟಿದ್ದು ೧೮೭೦ರ ಜನವರಿ ೨೪ರಂದು ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯ ಕಾರ್ಕಳ ತಾಲ್ಲೂಕಿನ ನಂದಳಿಕೆಯಲ್ಲಿ. ತಂದೆ - ಪಾಥಾಳಿ ತಿಮ್ಮಪ್ಪಯ್ಯ. ತಾಯಿ - ಮಹಾಲಕ್ಷ್ಮಮ್ಮ. ಬಾಲ್ಯದಲ್ಲಿ ಆಕರ್ಷಕ ಮೈಕಟ್ಟು ಹೊಂದಿ, ಮುದ್ದಾಗಿ ಕಾಣುತ್ತಿದ್ದನಾದ್ದರಿಂದ ಆತನನ್ನು ಎಲ್ಲರೂ ಮುದ್ದಣ ಎಂದು ಕರೆಯಲು ಪ್ರಾರಂಭಿಸಿದರು ಎಂದು ತಿಳಿದುಬಂದಿದೆ.


[ಬದಲಾಯಿಸಿ] ಜೀವನ

ಅತ್ಯಂತ ಬಡತನದಿಂದ ಬಳಲುತ್ತಿದ್ದ ತನ್ನ ಸಂಸಾರವನ್ನು, ಮುದ್ದಣನವರು ಸಣ್ಣಪುಟ್ಟ ಕೆಲಸಗಳನ್ನು ಮಾಡುತ್ತ ಸಂಕಷ್ಟದಿಂದ ಪಾರು ಮಾಡಿದರು. ೧೮೯೯ ರಲ್ಲಿ ಉಡುಪಿ ಸನಿವಾಸ ಪ್ರೌಢಶಾಲೆಯಲ್ಲಿ ದೈಹಿಕ ಶಿಕ್ಷಕರಾಗಿ ಕಾರ್ಯನಿರ್ವಹಿಸಲು ಆರಂಭಿಸಿದರು. ಇವರ ಸಾಹಿತ್ಯಾಭಿರುಚಿ ಮತ್ತು ಉತ್ಸುಕತೆಯನ್ನು ಶಾಲೆಯ ಮೇಲಧಿಕಾರಿಗಳು ಗಮನಿಸಿದರು. ಇದರ ಪರಿಣಾಮವಾಗಿ, ಮುದ್ದಣ ಅವರನ್ನು ಮದ್ರಾಸು ತರಬೇತಿ ಶಾಲೆಗೆ ಹೆಚ್ಚಿನ ವ್ಯಾಸಂಗಕ್ಕೆ ಕಳಿಸಿದರು. ಸರ್ಕಾರದಿಂದ ಸಿಗುತ್ತಿದ್ದ ವಿದ್ಯಾಭ್ಯಾಸ ಭತ್ಯೆಯನ್ನು, ಮುದ್ದಣ ಅವರು ಪುರಾಣಗಳನ್ನು ಓದಿ, ಅಭ್ಯಸಿಸಲು ವಿನಿಯೋಗಿಸುತ್ತಿದ್ದರು. ಈ ಸಂದರ್ಭಗಳಲ್ಲಿ ಪುಸ್ತಕಗಳಿಗೆ ಹಣದ ಕೊರತೆಯುಂಟಾದಾಗ ಕೆಲವೊಮ್ಮೆ ತಮ್ಮ ಊಟವನ್ನು ತ್ಯಜಿಸಿ, ಅದರಿಂದ ಉಳಿದ ಹಣವನ್ನು ಪುಸ್ತಕ ಖರೀದಿಸಲು ಉಪಯೋಗಿಸುತ್ತಿದ್ದರು ಎಂದು ತಿಳಿದುಬಂದಿದೆ. ಈ ಸಮಯದಿಂದಲೇ ಸಾಹಿತ್ಯ ಕೃತಿಗಳನ್ನು ರಚಿಸಲು ಪ್ರಾರಂಭಿಸಿದರು.

ಮುದ್ದಣ ಯಕ್ಷಗಾನ ಪ್ರೇಮಿಯಾಗಿದ್ದರು. ಕುಮಾರ ವಿಜಯ ಮುಂತಾದ ಯಕ್ಷಗಾನ ಪ್ರಸಂಗಗಳನ್ನು ರಚಿಸಿದ್ದಾರೆ. ಮುದ್ದಣ ಅವರ ಪತ್ನಿಯ ಹೆಸರು ಮನೋರಮೆ. ಭವತಿ ಭಿಕ್ಷಾಂದೇಹಿ ಎಂಬುದರ ಬಗ್ಗೆ ಪತ್ನಿ ಮನೋರಮೆಯೊಂದಿಗೆ ನಡೆಸಿದ ಸಲ್ಲಾಪದ ಚರ್ಚೆಯನ್ನು ಸಪ್ತಾಕ್ಷರಿ ಮಂತ್ರ ಎಂಬ ಗದ್ಯಕಾವ್ಯವನ್ನಾಗಿ ಮುದ್ದಣ ರಚಿಸಿದ್ದಾರೆ.

ಕ್ಷಯರೋಗ ಮತ್ತು ತೀವ್ರ ಬಡತನದಿಂದ ಅಂತಿಮದಿನಗಳನ್ನು ಕಳೆದ ಮುದ್ದಣ, ೩೧ರ ಕಿರಿಯ ವಯಸ್ಸಿನಲ್ಲಿ ೧೫ ಫೆಬ್ರುವರಿ ೧೯೦೧ರಂದು ಮರಣ ಹೊಂದಿದರು.

ಕನ್ನಡ ಸಾಹಿತ್ಯಲೋಕದ ಮತ್ತೊಬ್ಬ ಹೆಸರಾಂತ ಕವಿ/ಸಾಹಿತಿ ಪಂಜೆ ಮಂಗೇಶರಾಯರ ಪ್ರಕಾರ "ಮುದ್ದಣನವರಿಗಿಂತ ಒಳ್ಳೆಯ ಕವಿ ಬೇರಾರಿಲ್ಲ".

[ಬದಲಾಯಿಸಿ] ಕೃತಿಗಳು

ಮುದ್ದಣನ ಹೆಸರಾಂತ ಕೃತಿಗಳು

  • ರತ್ನಾವತಿ ಕಲ್ಯಾಣ
  • ಕುಮಾರ ವಿಜಯ (ಯಕ್ಷಗಾನ ಪ್ರಸಂಗ)
  • ಶ್ರೀರಾಮ ಪಟ್ಟಾಭಿಷೇಕಂ (ವಾರ್ಧಕ ಷಟ್ಪದಿ ಕಾವ್ಯ)
  • ಅದ್ಭುತ ರಾಮಾಯಣಂ
  • ಶ್ರೀರಾಮಾಶ್ವಮೇಧಂ

[ಬದಲಾಯಿಸಿ] ಅನಾಮಧೇಯ ಬರವಣಿಗೆ

ಕಿರಿಯ ವಯಸ್ಸಿನಲ್ಲಿಯೇ ಪ್ರತಿಭಾವಂತ ಕವಿಯಾಗಿ ರೂಪುಗೊಂಡಿದ್ದ ಮುದ್ದಣನವರು ನಾಚಿಕೆ ಸ್ವಭಾವದವರೂ ಹಾಗು ಅತ್ಯಂತ ವಿನಯವಂತರೂ ಆಗಿದ್ದರು ಎಂದು ತಿಳಿದುಬಂದಿದೆ. ಇದೇ ಕಾರಣದಿಂದ ಅವರು ತಮ್ಮ ಅದ್ಭುತ ರಾಮಾಯಣಂ(ಹೊಸಗನ್ನಡ ಗದ್ಯಶೈಲಿ), ಶ್ರೀರಾಮ ಪಟ್ಟಾಭಿಷೇಕಂ (೨೪೨ ಷಟ್ಪದಿ ಶೈಲಿ ಪದ್ಯಗಳು), ಹಾಗೂ ಶ್ರೀ ರಾಮಾಶ್ವಮೇಧಂ (ಮುದ್ದಣನ ಶ್ರೇಷ್ಠ ಕೃತಿಯೆಂದು ವಿಮರ್ಶಕರು ಅಭಿಪ್ರಾಯಪಟ್ಟಿರುವ) ಕೃತಿಗಳನ್ನು ಬೇರೊಬ್ಬರ ಹೆಸರಿನಲ್ಲಿ ಪ್ರಕಾಶನಕ್ಕೆ ಕಳಿಸಿದರು.
ಈ ಕೃತಿಗಳು ಪ್ರಾಚೀನ ಸಾಹಿತಿಗಳಿಂದ ರಚಿತವಾದದ್ದೆಂದೂ, ಅವರ ವಂಶಸ್ಥರಿಂದ ತನಗೆ ದೊರೆತದ್ದೆಂದು, ಆ ವಂಶಸ್ಥರ ಬಗ್ಗೆ ಈಗ ಯಾವುದೇ ಮಾಹಿತಿಗಳಿಲ್ಲವೆಂದೂ ಪ್ರಕಾಶಕರಿಗೆ ತಿಳಿಸಿದರು. ಈ ಕೃತಿಗಳನ್ನು ಮೊದಲ ಬಾರಿಗೆ, ೧೮೯೫, ೧೮೯೬ ಮತ್ತು ೧೮೯೯-೧೯೦೧ರಲ್ಲಿ, ಮೈಸೂರಿನಲ್ಲಿರುವ ಶ್ರೀ ಎಂ.ಎ. ರಾಮಾನುಜ ಅಯ್ಯಂಗಾರ್ ಮತ್ತು ಶ್ರೀ ಎಸ್.ಜಿ. ನರಸಿಂಹಾಚಾರ್ ಅವರು ಪ್ರಕಾಶಿಸುವ ಕರ್ನಾಟಕ ಕಾವ್ಯ ಮಂಜರಿ ಮತ್ತು ಕರ್ನಾಟಕ ಕಾವ್ಯ ಕಲಾನಿಧಿ ಎಂಬ ಪತ್ರಿಕೆಗಳಲ್ಲಿ ಪ್ರಕಟಿಸಲಾಯಿತು. ಮುದ್ದಣನು ಇದಕ್ಕೆ ಮುಂಚೆಯೇ ಹಲವಾರು ಬಾರಿ ಪ್ರಾಚೀನ ಕೃತಿಗಳನ್ನು ಪ್ರಕಟಣೆಗಾಗಿ ಕಳಿಸಿದ್ದರಿಂದ, ಪ್ರಕಾಶಕರು ಈ ಮೂರೂ ಕೃತಿಗಳೂ ಕೂಡ ಪ್ರಾಚೀನವಾದುವೇ ಎಂದು ನಂಬಿದರು.

ನಂತರ ನಿಜವಿಷಯ ಬೆಳಕಿಗೆ ಬಂದದ್ದು, ವರ್ಷ ೧೯೨೯ರಲ್ಲಿ (ಅಂದರೆ, ಮುದ್ದಣನ ಮರಣವಾಗಿ ೨೮ ವರ್ಷಗಳ ನಂತರ) ಬೆಂಗಳೂರಿನ ಸೆಂಟ್ರಲ್ ಕಾಲೇಜಿನ ಕರ್ನಾಟಕ ಸಂಘವು ಮುದ್ದಣ ಸ್ಮರಣ ಸಂಚಿಕೆಯನ್ನು ಪ್ರಕಟಿಸಿದಾಗ. ಆಗ, ಮುದ್ದಣನ ಸ್ನೇಹಿತರೂ, ಸಮೀಪವರ್ತಿಗಳೂ ಆಗಿದ್ದ ಪಂಜೆ ಮಂಗೇಶರಾಯರು, ಬೆನೆಗಲ್ ರಾಮರಾವ್, ಹುರಳಿ ಭೀಮರಾವ್ ಮತ್ತು ಮಳಲಿ ಸುಬ್ಬರಾವ್ ಅವರುಗಳು ಮುದ್ದಣನೊಂದಿಗಿನ ತಮ್ಮ ಒಡನಾಟಗಳನ್ನು ಕಲೆಹಾಕಿ, ಈ ಮೂರೂ ಕೃತಿಗಳು ಮುದ್ದಣನಿಂದಲೇ ಸ್ವಯಂರಚಿತವಾಗಿರುವುದನ್ನು ಪ್ರತಿಪಾದಿಸಿದರು.

[ಬದಲಾಯಿಸಿ] ಇತರೆ ಮಾಹಿತಿ

  • ಮುದ್ದಣ ಜಯಂತಿಯನ್ನು ಪ್ರತಿವರ್ಷ ಮುದ್ದಣನ ಹುಟ್ಟೂರಾದ ನಂದಳಿಕೆಯಲ್ಲಿ ಆಚರಿಸಲಾಗುತ್ತದೆ.
  • ನಂದಳಿಕೆ ಬಾಲಚಂದ್ರರಾವ್ ನೇತೃತ್ವದಲ್ಲಿ ಕವಿ ಮುದ್ದಣ ಸ್ಮಾರಕ ಮಿತ್ರ ಮಂಡಳಿಯನ್ನು ೧೯೭೯ರಲ್ಲಿ ಸ್ಥಾಪಿಸಲಾಯಿತು.
  • ಕವಿ ಮುದ್ದಣ ಸ್ಮಾರಕ ಭವನವನ್ನು ೧೯೮೭ರಲ್ಲಿ ನಿರ್ಮಿಸಲಾಯಿತು.
Static Wikipedia 2008 (no images)

aa - ab - af - ak - als - am - an - ang - ar - arc - as - ast - av - ay - az - ba - bar - bat_smg - bcl - be - be_x_old - bg - bh - bi - bm - bn - bo - bpy - br - bs - bug - bxr - ca - cbk_zam - cdo - ce - ceb - ch - cho - chr - chy - co - cr - crh - cs - csb - cu - cv - cy - da - de - diq - dsb - dv - dz - ee - el - eml - en - eo - es - et - eu - ext - fa - ff - fi - fiu_vro - fj - fo - fr - frp - fur - fy - ga - gan - gd - gl - glk - gn - got - gu - gv - ha - hak - haw - he - hi - hif - ho - hr - hsb - ht - hu - hy - hz - ia - id - ie - ig - ii - ik - ilo - io - is - it - iu - ja - jbo - jv - ka - kaa - kab - kg - ki - kj - kk - kl - km - kn - ko - kr - ks - ksh - ku - kv - kw - ky - la - lad - lb - lbe - lg - li - lij - lmo - ln - lo - lt - lv - map_bms - mdf - mg - mh - mi - mk - ml - mn - mo - mr - mt - mus - my - myv - mzn - na - nah - nap - nds - nds_nl - ne - new - ng - nl - nn - no - nov - nrm - nv - ny - oc - om - or - os - pa - pag - pam - pap - pdc - pi - pih - pl - pms - ps - pt - qu - quality - rm - rmy - rn - ro - roa_rup - roa_tara - ru - rw - sa - sah - sc - scn - sco - sd - se - sg - sh - si - simple - sk - sl - sm - sn - so - sr - srn - ss - st - stq - su - sv - sw - szl - ta - te - tet - tg - th - ti - tk - tl - tlh - tn - to - tpi - tr - ts - tt - tum - tw - ty - udm - ug - uk - ur - uz - ve - vec - vi - vls - vo - wa - war - wo - wuu - xal - xh - yi - yo - za - zea - zh - zh_classical - zh_min_nan - zh_yue - zu -

Static Wikipedia 2007 (no images)

aa - ab - af - ak - als - am - an - ang - ar - arc - as - ast - av - ay - az - ba - bar - bat_smg - bcl - be - be_x_old - bg - bh - bi - bm - bn - bo - bpy - br - bs - bug - bxr - ca - cbk_zam - cdo - ce - ceb - ch - cho - chr - chy - co - cr - crh - cs - csb - cu - cv - cy - da - de - diq - dsb - dv - dz - ee - el - eml - en - eo - es - et - eu - ext - fa - ff - fi - fiu_vro - fj - fo - fr - frp - fur - fy - ga - gan - gd - gl - glk - gn - got - gu - gv - ha - hak - haw - he - hi - hif - ho - hr - hsb - ht - hu - hy - hz - ia - id - ie - ig - ii - ik - ilo - io - is - it - iu - ja - jbo - jv - ka - kaa - kab - kg - ki - kj - kk - kl - km - kn - ko - kr - ks - ksh - ku - kv - kw - ky - la - lad - lb - lbe - lg - li - lij - lmo - ln - lo - lt - lv - map_bms - mdf - mg - mh - mi - mk - ml - mn - mo - mr - mt - mus - my - myv - mzn - na - nah - nap - nds - nds_nl - ne - new - ng - nl - nn - no - nov - nrm - nv - ny - oc - om - or - os - pa - pag - pam - pap - pdc - pi - pih - pl - pms - ps - pt - qu - quality - rm - rmy - rn - ro - roa_rup - roa_tara - ru - rw - sa - sah - sc - scn - sco - sd - se - sg - sh - si - simple - sk - sl - sm - sn - so - sr - srn - ss - st - stq - su - sv - sw - szl - ta - te - tet - tg - th - ti - tk - tl - tlh - tn - to - tpi - tr - ts - tt - tum - tw - ty - udm - ug - uk - ur - uz - ve - vec - vi - vls - vo - wa - war - wo - wuu - xal - xh - yi - yo - za - zea - zh - zh_classical - zh_min_nan - zh_yue - zu -

Static Wikipedia 2006 (no images)

aa - ab - af - ak - als - am - an - ang - ar - arc - as - ast - av - ay - az - ba - bar - bat_smg - bcl - be - be_x_old - bg - bh - bi - bm - bn - bo - bpy - br - bs - bug - bxr - ca - cbk_zam - cdo - ce - ceb - ch - cho - chr - chy - co - cr - crh - cs - csb - cu - cv - cy - da - de - diq - dsb - dv - dz - ee - el - eml - eo - es - et - eu - ext - fa - ff - fi - fiu_vro - fj - fo - fr - frp - fur - fy - ga - gan - gd - gl - glk - gn - got - gu - gv - ha - hak - haw - he - hi - hif - ho - hr - hsb - ht - hu - hy - hz - ia - id - ie - ig - ii - ik - ilo - io - is - it - iu - ja - jbo - jv - ka - kaa - kab - kg - ki - kj - kk - kl - km - kn - ko - kr - ks - ksh - ku - kv - kw - ky - la - lad - lb - lbe - lg - li - lij - lmo - ln - lo - lt - lv - map_bms - mdf - mg - mh - mi - mk - ml - mn - mo - mr - mt - mus - my - myv - mzn - na - nah - nap - nds - nds_nl - ne - new - ng - nl - nn - no - nov - nrm - nv - ny - oc - om - or - os - pa - pag - pam - pap - pdc - pi - pih - pl - pms - ps - pt - qu - quality - rm - rmy - rn - ro - roa_rup - roa_tara - ru - rw - sa - sah - sc - scn - sco - sd - se - sg - sh - si - simple - sk - sl - sm - sn - so - sr - srn - ss - st - stq - su - sv - sw - szl - ta - te - tet - tg - th - ti - tk - tl - tlh - tn - to - tpi - tr - ts - tt - tum - tw - ty - udm - ug - uk - ur - uz - ve - vec - vi - vls - vo - wa - war - wo - wuu - xal - xh - yi - yo - za - zea - zh - zh_classical - zh_min_nan - zh_yue - zu