ಹುಬ್ಬಳ್ಳಿ
From Wikipedia
ಹುಬ್ಬಳ್ಳಿ ಕರ್ನಾಟಕದ ಉತ್ತರ ಭಾಗದಲ್ಲಿರುವ ಪ್ರಮುಖ ವಾಣಿಜ್ಯ ನಗರ. ಬೆಂಗಳೂರು - ಪುಣೆ ರಾಷ್ಟ್ರೀಯ ಹೆದ್ದಾರಿ ೪ ರಲ್ಲಿ, ಬೆಂಗಳೂರಿನಿಂದ ಸುಮಾರ್ ೪೧೦ ಕಿ. ಮೀ ಹಾಗೂ ಪುಣೆಯಿಂದ ಸುಮಾರು ೪೩೦ ಕಿ. ಮೀ ಗಳ ದೂರದಲ್ಲಿದೆ. ೨೦೦೧ರ ಭಾರತದ ಜನಗಣತಿಯ ಪ್ರಕಾರ ಹುಬ್ಬಳ್ಳಿ-ಧಾರವಾಡ ಅವಳಿ ನಗರಗಳ ಜನಸಂಖ್ಯೆ ೭೮೬,೦೧೮.
ಪರಿವಿಡಿ |
[ಬದಲಾಯಿಸಿ] ಕೃಷಿ
ಹುಬ್ಬಳ್ಳಿಯು ಕರ್ನಾಟಕದಲ್ಲಿ ಬೆಂಗಳೂರಿನ ನಂತರ ಎರಡನೇಯ ದೊಡ್ಡ ನಗರವಾಗಿದೆ. ಹುಬ್ಬಳ್ಳಿಯ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಮೆಣಸಿನಕಾಯಿ(ಬ್ಯಾಡಗಿ), ಹತ್ತಿ ಮತ್ತು ಶೇಂಗಾ ಬೆಳೆಗಳು ವ್ಯಾಪಕವಾಗಿ ಬೆಳೆಯಲ್ಪಡುತ್ತವೆ. ಇವುಗಳಿಗೆ ಹುಬ್ಬಳ್ಳಿ ದೊಡ್ಡ ಮಾರುಕಟ್ಟೆಯಾಗಿದೆ. ಅಮರಗೋಳದ ಹತ್ತಿರವಿರುವ ಶ್ರೀ ಬಸವೇಶ್ವರ ಕೃಷಿ ಉತ್ಪನ್ನ ಮಾರುಕಟ್ಟೆಯು ಭಾರತದಲ್ಲಿಯೆ ಅತಿ ದೊಡ್ಡ ಮಾರುಕಟ್ಟೆ ಪ್ರಾಂಗಣವನ್ನು ಹೊಂದಿದೆ.
[ಬದಲಾಯಿಸಿ] ರೈಲ್ವೆ
ಹುಬ್ಬಳ್ಳಿಯಲ್ಲಿ ನೈರುತ್ಯ ರೈಲ್ವೆ ವಲಯದ ಮುಖ್ಯ ಕಚೇರಿಯಿದೆ ಹಾಗು ಒಂದು ಶತಮಾನಕ್ಕೂ ಹಳೆಯದಾದ ರೈಲ್ವೆ ಕಾರ್ಯಾಗಾರವನ್ನು ಹೊಂದಿದೆ. ಅಮೇರಿಕದ ಜನರಲ್ ಮೋಟರ್ಸ್ ಕಂಪನಿಯಿಂದ ಆಮದು ಮಾಡಿಕೊಂಡಿರುವ ರೈಲ್ವೆ ಇಂಜಿನ್ನುಗಳ ನಿರ್ವಹಣೆ ಮತ್ತು ದುರಸ್ತಿಯ ಅತ್ಯಾಧುನಿಕ ಕಾರ್ಯಾಗಾರವನ್ನು ಸಹ ಹೊಂದಿದೆ.
[ಬದಲಾಯಿಸಿ] ಕೈಗಾರಿಕೆ
ಹುಬ್ಬಳ್ಳಿಯು ಮುಖ್ಯವಾದ ಕೈಗಾರಿಕಾ ಕೇಂದ್ರವಾಗಿದೆ. ಕಿರ್ಲೋಸ್ಕರ ಎಲೆಕ್ಟ್ರಿಕ್ ಕಂಪನಿ, ಬಿಡಿಕೆ, ಕೆ ಎಮ್ ಎಫ್ ಮತ್ತು ಎನ್ ಜಿ ಈ ಎಫ್ ಇವುಗಳು ಇಲ್ಲಿರುವ ಕೆಲವು ಪ್ರಮುಖ ಉದ್ದಿಮೆಗಳಾಗಿವೆ. ತಾರಿಹಾಳ, ಗೋಕುಲ ರಸ್ತೆ ಮತ್ತು ರಾಯಾಪುರದಲ್ಲಿರುವ ಉದ್ದಿಮೆ ವಸಾಹತಿನಲ್ಲಿ ಸುಮಾರು ೧೦೦೦ಕ್ಕೂ ಹೆಚ್ಚು ಸಣ್ಣ ಹಾಗೂ ಮಧ್ಯಮ ಗಾತ್ರದ ಉದ್ದಿಮೆಗಳಿವೆ.
ಜೂನ್ ೨೦೦೬ರಲ್ಲಿ ನಡೆದ ಐಟಿ ಮೇಳದ ಪರಿಣಾಮವಾಗಿ ಭಾರತದ ಕೆಲವು ಪ್ರತಿಷ್ಠಿತ ಮಾಹಿತಿ ತಂತ್ರಜ್ಞಾನ ಕಂಪನಿಗಳಾದ ಟಿ. ಸಿ. ಎಸ್., ಇನ್ಫೋಸಿಸ್ ಮತ್ತು ಇನ್ನು ಅನೇಕರು ಹುಬ್ಬಳ್ಳಿ ಧಾರವಾಡದಲ್ಲಿ ತಮ್ಮ ಕಂಪನಿಯ ಶಾಖೆಗಳನ್ನು ತೆರೆಯುವ ಭರವಸೆ ನೀಡಿದ್ದಾರೆ.
[ಬದಲಾಯಿಸಿ] ಬಾಹ್ಯ ಸಂಪರ್ಕ