ಅಲಿಪ್ತ ಚಳುವಳಿ
From Wikipedia
ಅಲಿಪ್ತ ಚಳುವಳಿ (Non Aligned Movement (ನ್ಯಾಮ್)), ಸುಮಾರು ೧೦೦ ರಾಷ್ಟ್ರಗಳನ್ನೊಳಗೊಂಡ ಒಂದು ಅಂತರಾಷ್ಟ್ರೀಯ ಸಂಘಟನೆ. ಅಮೇರಿಕಾ ಹಾಗು ಹಿಂದಿನ ಸೊವಿಯತ್ ಸಂಘದ ನಡುವಿನ ಶೀತಲ ಸಮರದ ಕಾಲದಲ್ಲಿ, ಎರಡೂ ಶಕ್ತಿ ಕೇಂದ್ರಗಳಿಂದ ದೂರವುಳಿದು ಈ ಸಂಘಟನೆಯ ಮುಖ್ಯ ದ್ಯೇಯವಾಗಿತ್ತು.
ಪರಿವಿಡಿ |
[ಬದಲಾಯಿಸಿ] ಅಲಿಪ್ತ ಚಳುವಳಿಯ ಆರಂಭ
ಶ್ರೀಲಂಕಾದ ಕೊಲಂಬೋದಲ್ಲಿ ೧೯೫೪ ತಮ್ಮ ಭಾಷಣದ ವೇಳೆ ಭಾರತದ ಪ್ರಧಾನಮಂತ್ರಿಗಳಾಗಿದ್ದ ಪಂಡಿತ್ ಜವಾಹರ್‌ಲಾಲ್ ನೆಹರುರವರು ಅಲಿಪ್ತ ಚಳುವಳಿ ಎಂಬ ಪದವನ್ನು ಹುಟ್ಟುಹಾಕಿದರು. ೧೯೫೪ರಲ್ಲಿ ಇಂಡೋನೇಷ್ಯಾದ ಬಂಡುಂಗ್ನಲ್ಲಿ ನಡೆದ ಶೃಂಗ ಸಭೆಯಲ್ಲಿ ಅಲಿಪ್ತ ಚಳುವಳಿ ಎಂಬ ಹೆಸರನ್ನು ಸ್ವೀಕರಿಸಲಾಯಿತು.
[ಬದಲಾಯಿಸಿ] ಶೃಂಗ ಸಭೆಗಳು
ಪ್ರತಿ ಮೂರು ವರ್ಷಗಳಿಗೊಮ್ಮೆ ಅಲಿಪ್ತ ರಾಷ್ಟ್ರಗಳ ಶೃಂಗ ಸಭೆ ನಡೆಯುತ್ತದೆ. ಇಲ್ಲಿಯವರೆಗು ನಡೆದಿರುವ ಶೃಂಗ ಸಭೆಗಳ ವಿವರ ಇಂತಿದೆ:
- ೧ ನೇ ಶೃಂಗಸಭೆ – ಬೆಲ್‌ಗ್ರೇಡ್, ೧೯೬೧.
- ೨ ನೇ ಶೃಂಗಸಭೆ - ಕೈರೂ, ೧೯೬೪.
- ೩ ನೇ ಶೃಂಗಸಭೆ - ಲುಸಾಕಾ, ೧೯೭೦.
- ೪ ನೇ ಶೃಂಗಸಭೆ - ಅಲ್ಜೀಯರ್ಸ್,೧೯೭೩.
- ೫ ನೇ ಶೃಂಗಸಭೆ - ಕೊಲಂಬೋ, ೧೯೭೬
- ೬ ನೇ ಶೃಂಗಸಭೆ - ಹವಾನ, ೧೯೭೯.
- ೭ ನೇ ಶೃಂಗಸಭೆ - ಹೊಸ ದೆಹಲಿ,೧೯೮೩.
- ೮ ನೇ ಶೃಂಗಸಭೆ - ಹರಾರೆ, ೧೯೮೬.
- ೯ ನೇ ಶೃಂಗಸಭೆ - ಬೆಲ್‌ಗ್ರೇಡ್, ೧೯೮೯.
- ೧೦ ನೇ ಶೃಂಗಸಭೆ - ಜಕಾರ್ತಾ,೧೯೯೨.
- ೧೧ ನೇ ಶೃಂಗಸಭೆ - ಕಾರ್ಟಜೆನಾ ಡೆ ಇಂಡಿಯಾಸ್, ೧೯೯೫.
- ೧೨ ನೇ ಶೃಂಗಸಭೆ - ಡರ್ಬನ್, ೧೯೯೮.
- ೧೩ ನೇ ಶೃಂಗಸಭೆ - ಕ್ವಾಲಾ ಲಂಪುರ್, ೨೦೦೩.
- ೧೪ ನೇ ಶೃಂಗಸಭೆ - ಹವಾನ, ೨೦೦೬.
[ಬದಲಾಯಿಸಿ] ಇವನ್ನೂ ನೋಡಿ
ಶೀತಲ ಸಮರ