ಭಯೋತ್ಪಾದನೆ
From Wikipedia
ಭಯೋತ್ಪಾದನೆಯು ರಾಜಕೀಯ ಲಾಭಕ್ಕಾಗಿ ನೆಡೆಸುವ ಹಿಂಸೆಯ ಪ್ರಯೋಗ. ಸಾಮಾನ್ಯವಾಗಿ ಯುದ್ಧಗಳಲ್ಲಿರುವಂತೆ ಯಾವುದೂ ನೀತಿ ನಿಯಮಗಳು ಭಯೋತ್ಪಾದನೆಯಲ್ಲಿರುವುದಿಲ್ಲ. ಇದರಿಂದಾಗಿ ಯಾವುದೇ ಸಮಾಜದ ನೀತಿ ನಿಯಮಗಳನ್ನು ಧಿಕ್ಕರಿಸಿ ವ್ಯವಸ್ಥೆಯನ್ನು ಬುಡಮೇಲು ಮಾಡಲು ವ್ಯವಸ್ಥಿತವಾಗಿ ನೆಡೆಸಲ್ಪಡುವ ಕ್ರಿಯೆ.
ಭಯೋತ್ಪದಕರ ಧಾಳಿಯು ಸಮಾಜದ ಎಲ್ಲ ವರ್ಗ ಮತ್ತು ಪಂಗಡಗಳನ್ನು ಭೇದ ಭಾವವಿಲ್ಲದೆ ನಾಶಪಡಿಸುವುದರಿಂದ "ಭಯೋತ್ಪಾದನೆ" ಎಂಬ ಪದವು, "ಅನ್ಯಾಯ", "ಅನೀತಿ", "ದೋಷಪೂರಿತ", "ವಿತಂಡ", "ಹೇಯ" ಮತ್ತು "ಹಿಂಸಾತ್ಮಕ" ಎಂಬ ಅರ್ಥ ಕೊಡುವ ಎಲ್ಲ ಪದಗಳ ಜೊತೆ ತಾಳೆ ಹೊಂದುತ್ತದೆ. ವಿಶ್ವದ ಸರ್ಕಾರಿ, ಅಸರ್ಕಾರಿ ಸಂಸ್ಥೆಗಳು ಮತ್ತು ವಿದ್ವಾಂಸರು "ಭಯೋತ್ಪಾದನೆ ಅಥವಾ ಭಯೋತ್ಪಾದಕ" ಎಂಬ ಪದವನ್ನು ವಿಶ್ವ ಮಾನ್ಯತೆ ಹೊಂದದ ಸೈನಿಕ ಶಕ್ತಿ ಎಂದೇ ಪರಿಗಣಿಸುತ್ತಾರೆ. ಯಾಕೆಂದರೆ ವಿಶ್ವದ ಎಲ್ಲ ದೇಶಗಳ ಸೈನ್ಯ ಸಂಸ್ಥೆಗಳು ವಿಶ್ವಸಂಸ್ಥೆಯ ಸಾಮಾನ್ಯ ಸೈನಿಕ ನಿಯಮಗಳಿದೆ ಬಧ್ಧರಾಗಿರುತ್ತಾರೆ. ಆದ್ಧರಿಂದ ಭಯೋತ್ಪಾದಕರು ಯಾವಾಗಲೂ ವಿಶ್ವದ ಖಂಡನೆಗೆ ಒಳಗಾಗುವ "ದುರ್ಜನರು".
ಆದರೆ ಈ ಮೇಲಿನ ವಿವರಣೆಯನ್ನು ಯಾವುದೇ ಭಯೋತ್ಪಾದಕರು ಒಪ್ಪುವುದಿಲ್ಲ, ಆದ್ದರಿಂದ "ಭಯೋತ್ಪಾದಕರೆಂದು" ಕರೆಯಲ್ಪಡುವ ಯಾವುದೇ ವ್ಯಕ್ತಿ ಅಥವಾ ಸಂಸ್ಥೆಯು ತನ್ನನ್ನು ಈ ವಿವರಣೆಗಳಿಂದ ಗುರುತಿಸಲ್ಪಡುವುದಕ್ಕೆ ವಿರೋಧಿಸುತ್ತದೆ. ಆದ್ಧರಿಂದ "ಭಯೋತ್ಪಾದಕರು" ತಮ್ಮನ್ನು ಪ್ರತ್ಯೇಕತಾವಾದಿಗಳು, ಸ್ವಾತಂತ್ರ ಯೋಧರು, ಬಿಡುಗಡೆಮಾಡುವವರು, ದೈವ ಸೈನಿಕರು, ಕ್ರಾಂತಿಕಾರಿಗಳು, ಫಿದಾಯೀ, ಮುಜಾಹಿದ್ದೀನ್, ಜಿಹಾದಿಗಳು ಮತ್ತು ಗೆರಿಲ್ಲಾಗಳೆಂದು ಕರೆದುಕೊಳ್ಳುತ್ತಾರೆ.
ಪರಿವಿಡಿ |