ಭಾರತೀಯ ವಿಜ್ಞಾನ ಸಂಸ್ಥೆ
From Wikipedia
ಭಾರತೀಯ ವಿಜ್ಞಾನ ಸಂಸ್ಥೆಯು (Indian Institute of Science(IISc)) ಭಾರತದ ಪ್ರಮುಖ ಸ್ನಾತಕೋತ್ತರ, ಸಂಶೋಧನ ಹಾಗೂ ಉಚ್ಚ ಶಿಕ್ಷಣ ಸಂಸ್ಥೆಯಾಗಿ ಹೆಸರುವಾಸಿಯಾಗಿದ್ದು , ಬೆಂಗಳೂರಿನಲ್ಲಿದೆ. ಸಂಸ್ಥೆಯ ೩೭ ಅಭಿಯಂತ್ರಿಕ/ವಿಜ್ಞಾನ ವಿಭಾಗಗಳಲ್ಲಿ ೨೦೦೦ಕ್ಕೂ ಹೆಚ್ಚು ಸಂಶೋಧಕರು ಅನೇಕ ಸ್ನಾತಕೋತ್ತರ/ ಪಿ.ಎಚ್.ಡಿ ಪದವಿಗಳನ್ನು ಹೊಂದಲು ಅಧ್ಯಯನ ಮಾಡು ತಿದ್ದಾರೆ. ಪ್ರಸಕ್ತ ವಿಜ್ಞಾನ (Current Science) ಪತ್ರಿಕೆಯು ಸಂಸ್ಥೆಯ ಸಂಶೋಧನಾ ಉತ್ಪತ್ತಿಯ ಆಧಾರದ ಮೇರೆಗೆ IISc ಗೆ ಪ್ರಥಮ ಸ್ಥಾನ ನೀಡಿದೆ.