ರಾಮಕೃಷ್ಣ ಮಿಷನ್
From Wikipedia
ಶ್ರೀ ರಾಮಕೃಷ್ಣ ಮಠ ಮತ್ತು ಮಿಶನ್ ರಾಮಕೃಷ್ಣ ಪರಮಹಂಸರ ಶಿಷ್ಯ ಮತ್ತು ಧಾರ್ಮಿಕ ಗುರು ಸ್ವಾಮಿ ವಿವೇಕಾನಂದರು ಮೇ ೧, ೧೮೯೭ರಲ್ಲಿ 'ರಾಮಕೃಷ್ಣ ಮಿಶನ್ ಅಸೋಷಿಯೇಶನ್' ಎಂಬ ಹೆಸರಿನಲ್ಲಿ ಸ್ಥಾಪಿಸಿದ ಹಿಂದೂ ಧಾರ್ಮಿಕ ಮತ್ತು ಸಾಮಾಜಿಕ ಸಂಸ್ಥೆ. 'ಆತ್ಮನೋ ಮೋಕ್ಷಾರ್ಥಮ್ ಜಗದ್ ಹಿತಾಯ ಚ' ಎಂಬ ಧ್ಯೇಯವಾಕ್ಯವನ್ನು ಹೊಂದಿರುವ ಈ ಸಂಸ್ಥೆಯು ಶ್ರೀರಾಮಕೃಷ್ಣ ಪರಮಹಂಸರು ತಮ್ಮ ಆಧ್ಯಾತ್ಮಿಕ ಅನುಭವಗಳಿಂದ ಬೋಧಿಸಿದ ವೇದಾಂತದ ತಳಹದಿಯ ಮೇಲೆ ಸ್ಥಾಪಿತವಾಯಿತು.
[ಬದಲಾಯಿಸಿ] ಸೇವೆ
ಬರ ಪರಿಹಾರ, ನೆರೆಸಂತ್ರಸ್ತರ ಸಹಾಯ, ಗ್ರಾಮೀಣ ಜನರಿಗೆ ಶಿಕ್ಷಣ, ಆರೋಗ್ಯ ಸೇವೆಯೆ ಮೊದಲಾದ ಜನಸೇವಾ ಕಾರ್ಯಕ್ರಮಗಳನ್ನು ಈ ಸಂಸ್ಥೆಯ ವಿವಿಧ ಶಾಖೆಗಳು ನಿರ್ವಹಿಸುತ್ತವೆ. ಧಾರ್ಮಿಕ ಸಾಹಿತ್ಯ ಪ್ರಕಟಣೆ, ಶೀಲ ಸಂವರ್ಧನ ಶಿಬಿರಗಳು, ಪ್ರವಚನ ಮುಂತಾದವುಗಳ ಮೂಲಕ ಜನರ ಆಧ್ಯಾತ್ಮಿಕ ಅವಶ್ಯಕತೆಗಳನ್ನು ಇದು ಪೂರೈಸುತ್ತಿದೆ.
[ಬದಲಾಯಿಸಿ] ಕರ್ನಾಟಕದಲ್ಲಿ ರಾಮಕೃಷ್ಣ ಮಠ
ಕರ್ನಾಟಕದಲ್ಲಿ ರಾಮಕೃಷ್ಣ ಮಠದ ಶಾಖೆಗಳು ಕೆಳಕಂಡಲ್ಲಿವೆ:
ಆಶ್ರಮವು ಮುಖ್ಯವಾಗಿ ಪುಸ್ತಕ ಪ್ರಕಟಣೆಯಲ್ಲಿ ತನ್ನನ್ನು ತೊಡಗಿಸಿಕೊಂಡಿದೆ. ಸುಮಾರು ೭೫ ವರ್ಷಗಳಿಗೂ ದೀರ್ಘವಾದ ಇತಿಹಾಸವಿರುವ ಈ ಸಂಸ್ಥೆಯು ಕನ್ನಡ ಆಧ್ಯಾತ್ಮಿಕ ಸಾಹಿತ್ಯಕ್ಕೆ ಸಲ್ಲಿಸಿರುವ ಸೇವೆ ಅಪಾರ. ಮಠವು ಬಾಲಕರಿಗಾಗಿ 'ಶ್ರೀರಾಮಕೃಷ್ಣ ವಿದ್ಯಾಶಾಲೆ' ಎಂಬ ಆವಾಸಿಕ ಪದವೀಪೂರ್ವ ಮಧ್ಯಮಿಕ ಶಾಲೆಯನ್ನು ನಡೆಸುತ್ತಿದೆ. 'ವೇದಾಂತ ಕಾಲೇಜು' ಎಂಬ ಪುರುಷರ ಬಿ.ಎಡ್. ಕಾಲೇಜನ್ನೂ ಇದು ನಡೆಸುತ್ತದೆ. ಸುತ್ತಮುತ್ತಲ ಹಳ್ಳಿಗಳಲ್ಲಿ, ಮುಖ್ಯವಾಗಿ ಬಿಳಿಗಿರಿರಂಗನ ಬೆಟ್ಟ, ಹೆಗ್ಗಡದೇವನ ಕೋಟೆ ಮೊದಲಾದ ಸ್ಥಳಗಳಲ್ಲಿ ಗಿರಿಜನ ಕಲ್ಯಾಣಕೇಂದ್ರಗಳನ್ನು ನಡೆಸುತ್ತಿದೆ. 'ವಿವೇಕ ಪ್ರಭ' ಆಶ್ರಮದಿಂದ ಪ್ರಕಟಗೊಳ್ಳುವ ಸಾಂಸ್ಕೃತಿಕ ಮಾಸಪತ್ರಿಕೆ. ಸ್ವಾಮಿ ಆತ್ಮವಿದಾನಂದರು ಆಶ್ರಮದ ಈಗಿನ ಅಧ್ಯಕ್ಷರು.
ಶತಮಾನ ಕಂಡ ಬೆಂಗಳೂರು ಆಶ್ರಮ ಬಸವನಗುಡಿಯಲ್ಲಿದೆ. ಕನ್ನಡ ಮತ್ತು ಇಂಗ್ಲೀಶ್ ಭಾಷೆಗಳೆರಡರಲ್ಲೂ ಪುಸ್ತಕ ಪ್ರಕಟಿಸುವ ಈ ಸಂಸ್ಥೆ ಪ್ರಸಿದ್ಧವಾಗಿದೆ. ಬಾಲಕರಿಗಾಗಿ 'ವಿದ್ಯಾರ್ಥಿ ಮಂದಿರ' ಎಂಬ ಹಾಸ್ಟೆಲ್ ನ್ನು ಇದು ನಡೆಸುತ್ತಿದೆ. ಬೆಂಗಳೂರಿನ ಹತ್ತಿರವಿರುವ ಶಿವನಹಳ್ಳಿ ಮೊದಲಾದ ಹಳ್ಳಿಗಳಲ್ಲಿ ಹಲವಾರು ಸಮಾಜಕಲ್ಯಾಣ ಕಾರ್ಯಗಳನ್ನು ಕೈಗೊಂಡಿದೆ. ಸಂಸ್ಕೃತದಲ್ಲಿ ಪಾಂಡಿತ್ಯವನ್ನು ಹೊಂದಿರುವ, ಸ್ವಾಮಿ ಹರ್ಷಾನಂದರು ಆಶ್ರಮದ ಈಗಿನ ಅಧ್ಯಕ್ಷರು. ಕನ್ನಡ ಮತ್ತು ಇಂಗ್ಲೀಷಿನಲ್ಲಿ ಹಲವಾರು ಪುಸ್ತಕಗಳನ್ನು ಇವರು ಬರೆದಿದ್ದಾರೆ.
- ಬೆಂಗಳೂರು (ಹಲಸೂರು)
ಇದು ಬೆಂಗಳೂರಿನಲ್ಲಿರುವ ಇನ್ನೊಂದು ಆಶ್ರಮ. ಹಲವಾರು ಕಾರ್ಯಾಗಾರಗಳನ್ನು, ಶೀಲಸಂವರ್ಧನಾ ಶಿಬಿರಗಳನ್ನು ಇದು ನಡೆಸುತ್ತಿದೆ. ಬಡಜನರಿಗಾಗಿ ಸಂಚಾರಿಅ ಅಸ್ಪತ್ರೆಯ ಮೂಲಕ ಆರೋಗ್ಯ ಸೇವೆಯನ್ನು ಒದಗಿಸುತ್ತಿದೆ. ಸ್ವಾಮಿ ರಾಘವೇಶಾನಂದರು ಆಶ್ರಮದ ಈಗಿನ ಅಧ್ಯಕ್ಷರು.
- ಪೊನ್ನಂಪೇಟೆ
ಕೊಡಗಿನ ಪ್ರಶಾಂತ ವಾತಾವರಣದಲ್ಲಿರುವ ಈ ಸುಂದರವಾದ ಆಶ್ರಮ, 'ರಾಮಕೃಷ್ಣ ಸೇವಾಶ್ರಮ' ಎಂಬ ಸುಸಜ್ಜಿತ ಆಧುನಿಕ ಆಸ್ಪತ್ರೆಯ ಮೂಲಕ ಆರೋಗ್ಯಸೇವೆಯನ್ನು ಒದಗಿಸುತ್ತಿದೆ. 'ಬದುಕಲು ಕಲೆಯಿರಿ' ಖ್ಯಾತಿಯ ಸ್ವಾಮಿ ಜಗದಾತ್ಮಾನಂದರು ಆಶ್ರಮದ ಅಧ್ಯಕ್ಷರು.
ಅನಾಥಾಶ್ರಮ ಮತ್ತು ಬಡ ವಿದ್ಯಾರ್ಥಿಗಳಿಗೆ ತನ್ನ ಹಾಸ್ಟೆಲ್ ಮೂಲಕ ಸೇವೆಯನ್ನು ಒದಗಿಸುತ್ತಿದೆ. ಸ್ವಾಮಿ ಪೂರ್ಣಕಾಮಾನಂದರು ಆಶ್ರಮದ ಈಗಿನ ಅಧ್ಯಕ್ಷರು.
ಇತ್ತೀಚಿಗೆ ಆರಂಭಗೊಂಡ ಈ ಆಶ್ರಮವು ಉತ್ತರ ಕರ್ನಾಟಕದ ಬಹುದಿನಗಳ ಬೇಡಿಕೆಯನ್ನು ಪೂರ್ಣಗೊಳಿಸಿದೆ. ಹಲವಾರು ಯೋಜನೆಗಳನ್ನು ಶೀಘ್ರದಲ್ಲೆ ಜಾರಿಗೊಳಿಸಲು ನಿರ್ಧರಿಸಿರುವ ಈ ಅಶ್ರಮವು, ಈಗ ಪುಸ್ತಕ ಪ್ರಕಟಣೆ, ಪ್ರವಚನ, ಶಿಬಿರಗಳ ಮುಖಾಂತರ ಜನರ ಸೇವೆಯನ್ನು ಮಾಡುತ್ತಿದೆ. ತಮ್ಮ ಸುಮಧುರ ಗಾಯನದಿಂದ, 'ವಿದ್ಯಾರ್ಥಿಗೊಂದು ಪತ್ರ', 'ಯುಗಾವತಾರ ಶ್ರೀರಾಮಕೃಷ್ಣ' ಮುಂತಾದ ಪುಸ್ತಕಗಳ ಲೇಖಕರಾದ ಸ್ವಾಮಿ ಪುರುಷೋತ್ತಮಾನಂದರು ಆಶ್ರಮದ ಮುಖ್ಯಸ್ಥರು.
[ಬದಲಾಯಿಸಿ] ಕನ್ನಡನಾಡಿನಲ್ಲಿ ಸೇವೆಸಲ್ಲಿಸಿದ ರಾಮಕೃಷ್ಣ ಮಠದ ಪ್ರಮುಖ ಸನ್ಯಾಸಿಗಳು
- ಸ್ವಾಮಿ ಶಾಂಭವಾನಂದ
- ಸ್ವಾಮಿ ಸೋಮನಾಥಾನಂದ
- ಸ್ವಾಮಿ ಯತೀಶ್ವರಾನಂದ
- ಸ್ವಾಮಿ ಶಾಸ್ತ್ರಾನಂದ
- ಸ್ವಾಮಿ ಆದಿದೇವಾನಂದ
- ಸ್ವಾಮಿ ತ್ಯಾಗೀಶಾನಂದ
- ಸ್ವಾಮಿ ಸುಂದಾನಂದ
- ಸ್ವಾಮಿ ಸಿದ್ದೇಶ್ವರಾನಂದ
- ಸ್ವಾಮಿ ಜಗದಾತ್ಮಾನಂದ